ಕೊರೋನಾ ತಮ್ಮೂರಿಗೆ ಪ್ರವೇಶಿಸದಂತೆ ತಡೆಯಲು ಈ ಗ್ರಾಮದವರು ಮಾಡಿದ್ದೇನು ಗೊತ್ತಾ?

News
Advertisements

ಇಡೀ ಜಗತ್ತಿನೆಲ್ಲೆಡೆ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದೆ. ಇಟಲಿ ಸೇರಿದಂತೆ ಕೆಲವೊಂದು ದೇಶಗಳು ಪರಿಸ್ಥಿತಿ ಕೈ ಮೀರಿ ಹೋಗಿದೆ ಅಂತ ಏನೂ ಮಾಡಲಾಗದೆ ತಲೆ ಮೇಲೆ ಕೈ ಇಟ್ಟು ಕೂತಿವೆ. ಇನ್ನು ಅಮೆರಿಕಾ ಸೇರಿದಂತೆ ಮುಂದುವರಿದದೇಶಗಳಲ್ಲಿಯೂ ಸಹ ಕೈ ಮೀರುವ ಪರಿಸ್ಥಿತಿ ಎದುರಾಗಿದೆ.

Advertisements

ಇನ್ನು ಭಾರತದಲ್ಲಿಯೂ ಸಹ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಲಾಕ್ ಡೌನ್ ಮಾಡಿದ್ದರೂ ಜನರೂ ಮಾತ್ರ ಯಾವುದನ್ನ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲ. ಹೊರಗಡೆ ಬರಬೇಡಿ, ಮನೆಯಲ್ಲೇ ಇರಿ ಎಂದು ಮನವಿ ಮಾಡಿಕೊಂಡರೂ ಜನರು ಕೇಳುತ್ತಿಲ್ಲ. ಇನ್ನು ನಮ್ಮ ಕರ್ನಾಟಕದ ವಿಚಾರಕ್ಕೆ ಬಂದರೆ, ಕೊರೋನಾ ಭೀತಿ ಹಿನ್ನಲೆಯಲ್ಲಿ ಸಾವಿರಾರು ಮಂದಿ ಬೆಂಗಳೂರು ಬಿಟ್ಟು, ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ.

ನಗರಗಳಲ್ಲಿರುವವರು ಹಳ್ಳಿಗಳ ಕಡೆ ಹೋಗಿ ಅಲ್ಲಿನ ಜನರಿಗೆ ಸೋಂಕು ಹರಡಿಸಬೇಡಿ, ಸ್ವಲ್ಪ ದಿನಗಳ ಕಾಲ ನೀವು ಇರುವ ಕಡೆಯೇ ಇರಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಯಾರೂ ಕೇಳುತ್ತಿಲ್ಲ. ಆದರೆ ಈಗ ಈ ಹಳ್ಳಿಯ ಜನ ತಮ್ಮ ಹಳ್ಳಿಯ ಒಳಗೆ ಹೊರಗಡೆಯಿಂದ ಯಾರೂ ಬರದಂತೆ, ಹಳ್ಳಿ ಬಿಟ್ಟು ಯಾರೂ ಆಚೆ ಹೋಗದಂತೆ ಸ್ವತಃ ದಿಗ್ಬಂದನ ಮಾಡಿಕೊಂಡಿದ್ದಾರೆ.

ಹೌದು, ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಎಂ.ಗೊಲ್ಲಹಳ್ಳಿಯ ಜನ ತಮ್ಮ ಊರಿಗೆ ಎರಡು ತಿಂಗಳ ಕಾಲ ಹೊರಗಿನಿಂದ ಯಾರು ಬರದಂತೆ, ಮತ್ತು ಹಳ್ಳಿಯಿಂದ ಯಾರೂ ಹೊರಗೆ ಹೋಗದಂತೆ ಕಟ್ಟು ನಿಟ್ಟಾದ ನಿರ್ಬಂಧ ವಿಧಿಸಿ, ದಿಗ್ಬಂದನ ಹಾಕಿಕೊಂಡು ಹೆಮ್ಮಾರಿ ಕೊರೋನಾ ತಮ್ಮ ಊರಿಗೆ ಕಾಲಿಡದಂತೆ ಎಚ್ಚರಿಕೆವಹಿಸುವುದರ ಜೊತೆಗೆ ಮಾದರಿಯಾಗಿದ್ದಾರೆ.

ಇನ್ನು ತಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ೫ರಸ್ತೆಗಳಲ್ಲಿ ಊರಿನವರೇ ಚೆಕ್ ಪೋಸ್ಟ್ ಗಳನ್ನ ಹಾಕಿಕೊಂಡು ಗ್ರಾಮಸ್ಥರೇ ಕಾಯುತ್ತಿದ್ದಾರೆ. ಇನ್ನು ಕರ್ನಾಟಕದ ಗಡಿಭಾಗದಲ್ಲಿರುವ ಈ ಹಳ್ಳಿಗೆ ನೆರೆಯ ರಾಜ್ಯ ಆಂಧ್ರ ಪ್ರದೇಶ ಸೇರಿದಂತೆ ಎರಡೂ ರಾಜ್ಯಗಳಿಂದಲೂ ಜನರು ಬರಲಿದ್ದು ಕೊರೋನಾ ಸೋಂಕು ಹರಡುವ ಭೀತಿ ಎದುರಾಗಿದೆ. ಹಾಗಾಗಿ ನಮ್ಮ ಹಳ್ಳಿಯನ್ನ ನಾವೇ ಕಾಪಾಡಿಕೊಳ್ಳಬೇಕು ಎಂದು ಯಾರೂ ಇತ್ತ ಕಡೆ ಸುಳಿಯದಂತೆ ದಿಗ್ಬಂದನ ಹಾಕಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇನ್ನು ಇಷ್ಟೇ ಅಲ್ಲದೆ ಕೊರೋನಾ ಸೋಂಕಿನಿಂದ ಊರಿನವರಣಂ ರಕ್ಷಣೆ ಮಾಡುವ ಸಲುವಾಗಿ ಊರಿನ ಮುಖಂಡರೇ ಹಲವಾರು ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಂಡಿದ್ದಾರೆ. ಬೇರೆ ಊರಿನಲ್ಲಿರುವ ತಮ್ಮ ತಮ್ಮ ಕುಟುಂಬದ ಸದಸ್ಯರನ್ನ ವಾಪಸ್ ಕರೆಸಿಕೊಳ್ಳುವುದು, ಜನರಿಗೆ ಅವಶ್ಯಕವಾದ ವಸ್ತುಗಳು ಸೇರಿದಂತೆ, ತಾವೇ ಉತ್ಪಾದನೆ ಹಾಲು, ತರಕಾರಿಯನ್ನ ತಮ್ಮ ಹಳ್ಳಿಯಲ್ಲೇ ಹಂಚಿಕೆ ಮಾಡಿಕೊಳ್ಳುವುದು, ಪ್ರತೀ ದಿನ ಗ್ರಾಮದವರೆಲ್ಲಾ ಸೇರಿ ಪೂರ್ತಿ ಹಳ್ಳಿಯನ್ನ ಸ್ವಚ್ಛ ಮಾಡುವುದು, ಹಸುವಿನ ಗಂಜಲವನ್ನ ಇಡೀ ಗ್ರಾಮದ ತುಂಬಾ ಸಿಂಪಡನೆ ಮಾಡುವುದು, ಸೇರಿದಂತೆ ಹಲವಾರು ಮನ್ನೆಚ್ಚರಿಕೆ ಕ್ರಮಗಳನ್ನ ಎಂ.ಗೊಲ್ಲಹಳ್ಳಿಯ ಗ್ರಾಮಸ್ಥರು ಕೈಗೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.