ಕನ್ನಡ ಚಿತ್ರರಂಗದ ಟೈಗರ್ ಎಂದರೆ ನಮಗೆಲ್ಲಾ ನೆನಪು ಬರುವುದು ನಟ ಪ್ರಭಾಕರ್ ಮಾತ್ರ. ಆಳೆತ್ತರದ ನೀಳಕಾಯದ ದೇಹ, ಉರಿಗೊಳಿಸಿದ ದೇಹದಾರ್ಡ್ಯ ಆಗಿನ ಕಾಲಕ್ಕೆ ಟೈಗರ್ ಪ್ರಭಾಕರ್ ಅವರಿಗೆ ಮಾತ್ರ ಇತ್ತು. ಇನ್ನು ಪ್ರಭಾಕರ್ ಮತ್ತು ಮೇರಿ ಅಲ್ಫೋನ್ಸ ಅವರ ಮಗನೇ ವಿನೋದ್ ಪ್ರಭಾಕರ್. ಸ್ಯಾಂಡಲ್ ವುಡ್ ನಲ್ಲಿ ಮರಿ ಟೈಗರ್ ಎಂದೇ ಖ್ಯಾತರಾಗಿದ್ದಾರೆ. ತಂದೆಯಂತೆ ಮಗ ಎಂಬಂತೆ ವಿನೋದ್ ಪ್ರಭಾಕರ್ ಅವರು ಕೂಡ ಉತ್ತಮ ಮೈಕಟ್ಟನ್ನ ಹೊಂದಿರುವ ನಟ.
[widget id=”custom_html-4″]

2006ರಲ್ಲಿ ಬಿಡುಗಡೆಯಾದ ಮಹಾನಗರ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ವಿನೋದ್ ಪ್ರಭಾಕರ್ ಅವರು ನವಗ್ರಹ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದು ಇತ್ತೀಚಿನ ರಗ್ಡ್ ಸೇರಿದಂತೆ ಶ್ಯಾಡೋ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದು, ಇತ್ತೀಚೆಗಷ್ಟೇ ಬಂದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರ ಸ್ನೇಹಿತನ ಕಾಣಿಸಿಕೊಂಡಿದ್ದು ಅವರ ಪಾತ್ರಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿತ್ತು.
[widget id=”custom_html-4″]

ಇನ್ನು ನಟ ವಿನೋದ್ ಪ್ರಭಾಕರ್ ಅವರ ವೈಯುಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ, ಆಂಧ್ರದ ಹೈದರಾಬಾದ್ ನ ತೆಲುಗು ಕುಟುಂಬಕ್ಕೆ ಸೇರಿದವರು ವಿನೋದ್ ಅವರ ಪತ್ನಿ ನಿಶಾ. ಇನ್ನು ಈ ಜೋಡಿ ಮದುವೆ ಆಗುವುದಕ್ಕೆ ಸತತ ೧೫ ವರ್ಷಗಳ ಪ್ರೀತಿಸಿದ್ದರು. ಅಸಲಿಗೆ ನಿಶಾ ಅವರು ಭಾರತೀಯ ಸೇನೆಯ ಅಧಿಕಾರಿಯೊಬ್ಬರ ಪುತ್ರಿಯಾಗಿದ್ದಾರೆ.

ವಿನೋದ್ ಪ್ರಭಾಕರ್ ಮತ್ತು ನಿಶಾ ಅವರು ಮೊದಲ ಬಾರಿಗೆ ಒಬ್ಬರನೊಬ್ಬರು ಭೇಟಿಯಾಗಿದ್ದು ೧೯೯೯ರಲ್ಲಿ ಬೆಂಗಳೂರಿನಲ್ಲಿ. ವಿಶೇಷ ಎಂದರೆ ನಿಶಾ ಅವರೇ ಮೊದಲು ವಿನೋದ್ ಅವರಿಗೆ ಪ್ರಪೋಸ್ ಮಾಡಿದ್ದು. ೧೫ ವರ್ಷಗಳ ಬಳಿಕ 2014ರಲ್ಲಿ ನಿಶಾ ಮತ್ತು ವಿನೋದ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ವೃತ್ತಿಯಲ್ಲಿ ನಿಶಾ ಅವರು ಫ್ಯಾಶನ್ ಡಿಸೈನರ್. ಇನ್ನು ವಿನೋದ್ ಪ್ರಭಾಕರ್ ಅವರ ಫಿಟ್ ನೆಸ್ ಹಾಗೂ ಅವರ ಹಿಂದೆ ಇರುವುದು ನಿಶಾ ಅವರೇ..