ಕೊರೋನಾ ಹಿನ್ನಲೆಯಲ್ಲಿ ಮತ್ತೊಮ್ಮೆ ಜನಮೆಚ್ಚುವ ಕೆಲಸ ಮಾಡಿ ಮಾದರಿಯಾದ ನಟ ವಿನೋದ್ ರಾಜ್..

Cinema News

ಕೊರೋನಾ ಹಿನ್ನಲೆಯಲ್ಲಿ ಹಿರಿಯ ನಟಿ ಲೀಲಾವತಿಯವರು ಹಾಗೂ ಪುತ್ರ ನಟ, ರೈತ ವಿನೋದ್ ರಾಜ್ ರವರು ಮಾಡುತ್ತಿರುವ ಕೆಲಸಗಳು ಎಲ್ಲರಿಗೂ ಮಾದರಿಯಾಗಿದೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ತಮ್ಮ ಸ್ವಗ್ರಾಮ ನೆಲಮಂಗಲದ ಸೋಲದೇವನಹಳ್ಳಿ ಗ್ರಾಮದ ರಸ್ತೆಗಳು ಹಾಗೂ ಮನೆಯ ಗೋಡೆಗಳಿಗೆ ರಾಸಾಯನಿಕ ಸಿಂಪಡಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇನ್ನು ಇದಕ್ಕೆ ನಟಿ ಲೀಲಾವತಿಯವರು ಸಹ ಕೈಜೋಡಿಸಿದ್ದರು. ಇನ್ನು ಕೊರೋನಾ ಸೋಂಕು ಗ್ರಾಮಕ್ಕೆ ಸೋಂಕದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಾವೇ ಖುದ್ದಾಗಿ ನಿಂತು ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು. ಇನ್ನು ಈಗ ಮತ್ತೊಂದು ಕೆಲಸಕ್ಕೆ ಮುಂದಾಗಿರುವ ವಿನೋದ್ ರಾಜ್ ಮತ್ತು ಲೀಲಾವತಿಯವರು ಮಾದರಿಯಾಗಿದ್ದಾರೆ.

ಹೌದು, ಈಗ ಪ್ರತಿದಿನ ಬೇಕಾದ ದಿನಸಿ ವಸ್ತುಗಳನ್ನ ವಿತರಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿರುವ ಸುಮ್ಮನಹಳ್ಳಿ ಸ್ಲಮ್ ನಿವಾಸಿಗಳಿಗೆ ದಿನಸಿ ವಿತರಣೆ ಮಾಡಿದ್ದು, ಇವರ ಕಾರ್ಯಕ್ಕೆ ಮೆಚ್ಚೆಗೆಗಳ ಮಹಾಪೂರವೇ ಹರಿದುಬಂದಿದೆ. ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ವಿನೋದ್ ರಾಜ್ ಮತ್ತು ಲೀಲಾವತಿಯರಿಗೆ ಆ ದೇವರು ಮತ್ತಷ್ಟು ಶಕ್ತಿ ನೀಡಲಿ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ಶೇರ್ ಮಾಡಿ..ನಿಮ್ಮ ಅಭಿಪ್ರಾಯ ತಿಳಿಸಿ.