ಮರು ಪ್ರಸಾರವಾಗಲಿದೆ ವೀಕೆಂಡ್ ವಿತ್ ರಮೇಶ್..ಅದೂ ದರ್ಶನ್ ಅವರ ಸಂಚಿಕೆಯಿಂದ..ಯಾವಾಗ ಗೊತ್ತಾ.?

Advertisements

ಕೊರೋನಾ ಹಿನ್ನಲೆ ಲಾಕ್ ಡೌನ್ ಆಗಿದ್ದು, ಇದರ ಪರಿಣಾಮ ಕನ್ನಡ ವಾಹಿನಿಗಳ ಚಿತ್ರೀಕರಣಗಳು ಕೂಡ ಸ್ಥಗಿತಗೊಂಡಿವೆ. ಹಾಗಾಗಿ ಧಾರಾವಾಹಿಗಳು, ರಿಯಾಲಿಟಿ ಶೋ ಎಪಿಸೋಡ್ ಗಳನ್ನ ಸ್ಟಾಪ್ ಮಾಡಲಾಗಿದ್ದು, ಈಗ ಹಳೆಯ ಜನಪ್ರಿಯ ಕಾರ್ಯಕ್ರಮಗಳನ್ನ ಕಿರುತೆರೆ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.

Advertisements

ಇನ್ನು ಕನ್ನಡದ ಖಾಸಗಿ ವಾಹಿನಿ ಜೀ ಕನ್ನಡ ವಾಹಿನಿಯಲ್ಲಿ ನಟ ನಿರ್ದೇಶಕ ರಮೇಶ್ ಅರವಿಂದ್ ನೇತೃತ್ವದಲ್ಲಿ ಪ್ರಸಾರವಾಗುತ್ತಿದ್ದ ಜನಮೆಚ್ಚಿದ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ಈಗ ಮತ್ತೆ ಮರುಪ್ರಸವಾರವಾಗುತ್ತಿದೆ. ವಿಶೇಷ ಏನೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತು ಪ್ರಸಾರವಾಗಿದ್ದ ಸಂಚಿಕೆಯಿಂದಲೇ ಶುರುವಾಗಲಿದೆ.

ಇನ್ನು ಏಪ್ರಿಲ್ 11ರಿಂದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮರುಪ್ರಸಾರವಾಗಲಿದ್ದು, ಅತೀ ಹೆಚ್ಚು ಟಿ ಆರ್ಪಿ ರೇಟ್ ತೆಗೆದುಕೊಂಡಿತ್ತು. ಜೊತೆಗೆ ಜಗ್ಗೇಶ್ ರವರ ಕಾರ್ಯಕ್ರಮ ಕೂಡ ಪ್ರಸಾರವಾಗಿದ್ದು ಅದೂ ಕೂಡ ಉತ್ತಮ ಟಿಆರ್ ಪಿ ರೇಟ್ ನ್ನ ಪಡೆದುಕೊಂಡಿತ್ತು. ಈಗ ಈ ಇಬ್ಬರ ಕಾರ್ಯಕ್ರಮಗಳು ಕೂಡ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ.