ತಿಂಗಳಿಗೆ 1ಲಕ್ಷ ಸಂಪಾದನೆ ಮಾಡುತ್ತಿರುವ ಈ‌ ಮಹಿಳೆ.! ಕೃಷಿಗೆ ಈ ಮಹಿಳೆ ಬಳಸಿದ ಐಡಿಯಾ ಕೇಳಿದ್ರೇ ನೀವು ಕೂಡ ಕೃಷಿ ಮಾಡ್ತೀರಾ! ಏನು ಗೊತ್ತಾ?

Kannada Mahiti
Advertisements

ನಮಸ್ತೆ ಸ್ನೇಹಿತರೆ, ಒಬ್ಬ ರೈತ ಮಹಿಳೆ ಕೃಷಿ ವ್ಯವಸಾಯದಲ್ಲಿ ತಿಂಗಳಿಗೆ 1 ಲಕ್ಷದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ಮಹಿಳೆ ಯಾರು! ಕೃಷಿಯಲ್ಲಿ ಈ ಮಹಿಳೆ ಬಳಸಿದ ಐಡಿಯಾ ಯಾವುದು ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ.. ಈ ಮಹಿಳೆ ಬೆಳಿಗ್ಗೆ ಎಂದು ಅಡುಗೆ ಮಾಡಿ ನಂತರ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಮನೆಯಿಂದ ಹೊರಗೆ ಹೋಗಿ ದುಡಿಯುವ ಗಂಡಸರಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ ಅನ್ನೋದಕ್ಕೆ ಇದೆ ಸಾಕ್ಷಿ.. ಈ ಮಹಿಳೆ ಕೂಡ ತನ್ನ ಮನೆಯಲ್ಲಿ ತುಂಬಾ ಬಡತನ ಹಾಗು ಕಷ್ಟದ ಪರಿಸ್ಥಿತಿ ತಲುಪಿದಾಗ ತನ್ನ ಒಂದು ಆಲೋಚನೆಯಿಂದ ತಿಂಗಳಿಗೆ ಒಂದು ಲಕ್ಷ ದುಡಿಯುವಂತೆ ಮಾಡಿಕೊಂಡಿದ್ದಾರೆ..

Advertisements

ಇನ್ನೂ ಇವರ ಹೆಸರು ಬೀನಾದೇವಿ ಅಂತ ಬಿಹಾರ್ ರಾಜ್ಯದಲ್ಲಿ ಎಲ್ಲರಂತೆ ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟರು ಇನ್ನೂ ಮಹಿಳೆಯ ಗಂಡನ ಕುಟುಂಬ ವ್ಯವಸಾಯ ಮಾಡಿ ಜೀವನ ಮಾಡುತ್ತಿದ್ದರು.. ಇನ್ನು ಇವರು ದುಡಿಯುವಂತಹ ಹಣ ಕೇವಲ ತಿನ್ನೋದಕ್ಕೆ ಮಾತ್ರ ಸಾಕಾಗುತ್ತಿತ್ತು.. ಬೀನಾದೇವಿ ಅವರಿಗೆ ಮಕ್ಕಳಾದ ಮೇಲೆ ತನ್ನ ಮಕ್ಕಳ ಜೀವನ ಕೂಡ ನನ್ನ ಹಾಗೆ ಆಗಬಾರದು ಎಂದು ತಿಳಿದು ಅವರಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎನ್ನುವ ಆಲೋಚನೆ ಬೀನಾದೇವಿ ಮನದಲ್ಲಿ ಮೂಡಿತ್ತು.. ಆದರೆ ಆದೆ ಸಮಯಕ್ಕೆ‌ ವ್ಯವಸಾಯ ಮಾಡುವ ಆಸಕ್ತಿ ಬೆಳೆಸಿಕೊಂಡ ಈ‌ ಮಹಿಳೆ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಇದಕ್ಕೆ ಬೇಕಾದ ಎಲ್ಲ ರೀತಿಯ ತರಬೇತಿಯನ್ನು ಕೊಡಲಾಗುತ್ತಿತ್ತು..

ಇನ್ನು ಈ ಕೃಷಿ ಬಗ್ಗೆ ಟ್ರೈನಿಂಗ್ ಪಡೆದ ಬೀನಾದೇವಿ ಅವರಿಗೆ ಅಣಬೆ ಹಾಗೂ ಸಹಜ ಪದ್ದತಿಯಲ್ಲಿ ವ್ಯವಸಾಯ ಮಾಡುವುದಕ್ಕೆ ಆಸಕ್ತ ಬೆಳೆಯಿತು.. ಅದರ ಜೊತೆಗೆ ಕೃಷಿ ಟ್ರೈನಿಂಗ್ ನಲ್ಲಿ ಅಣಬೆಯನ್ನು ಯಾವ ರೀತಿ ಬೆಳೆಯಬೇಕು ಎನ್ನುವ ಮಾಹಿತಿ ಹೇಳುತ್ತಿದ್ದರು.. ಕೊನೆಗೂ ತನ್ನ ಕುಟುಂಬದವರು ಮಾಡುತ್ತಿದ್ದ ಕೃಷಿ ಪದ್ದತಿಯನ್ನು ಬಿಟ್ಟು ‌ತಮ್ಮ ಜಮೀನಿನಲ್ಲಿ ಅಣಬೆ ಬೆಳೆಯಲು ಮುಂದಾದ ಬೀನಾದೇವಿ ಅವರು ತಮ್ಮ ಮನೆಯ ಪಕ್ಕದಲ್ಲಿದ ಗುಡಿಸಲಿನಲ್ಲಿ ಅಣಬೆ ಕೃಷಿ ಮಾಡಲು ಶುರುಮಾಡಿದರು.. ನಂತರ ಆ ಗುಡಿಸಿಲಿನಲ್ಲಿ ಒಂದು ಕೆಜಿ ಅಣಬೆಯನ್ನು ಬೆಳೆದರು ಬಂದ ಬೆಳೆಯನ್ನು ನೋಡಿ ಬೀನಾದೇವಿ ಅವರಿಗೆ ಸಂತೋಷವಾಗಿ ಮತ್ತೆ ದೊಡ್ಡ ಪ್ರಮಾಣದಲ್ಲಿ ಆದರೆ ನೂರಾರು ಕೆಜಿ ಅಣಬೆ ಬೆಳೆಯಲು ಪ್ರಾರಂಭಿಸಿದರು..

ಬೆಳೆದ ಅಣಬೆಯನ್ನು ಹತ್ತಿರದ ಅಂಗಡಿ ಹಾಗು ತಮ್ಮ ಮನೆಯ ಮುಂದೆ ಅಣಬೆ ಮಾರಾಟ ಮಾಡಲು ಶುರುಮಾಡಿದರು, ಅದರೆ ತಮಗಿರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಸಹಜ ಪದ್ದತಿಯಲ್ಲಿ ವ್ಯವಸಾಯ ಮಾಡಲು ಶುರುಮಾಡಿದರು.. ನಂತರ ಸಹಜ ಸ್ಥಿತಿಯ ಬೆಳೆಯಲ್ಲಿ ಕೂಡ ಯಶಸ್ಸು ಸಾಧಿಸಿದ ಬೀನಾದೇವಿ ಅವರ ಈ ವ್ಯವಸಾಯದಲ್ಲಿ ಅಣಬೆ ಹಾಗು ಸಹಜ ಕೃಷಿ ಪದ್ದತಿಯಲ್ಲಿ ತಿಂಗಳಿಗೆ ಒಂದು ಲಕ್ಷದವರೆಗೂ ಹಣ ಸಂಪಾದನೆ ಮಾಡುತ್ತಿದ್ದಾರೆ ಇನ್ನು ಬೀನಾದೇವಿ ಅವರು ಬೇರೆಯವರಿಗೂ ಕೂಡ ಸ್ಫೂರ್ತಿಯಾಗಿದ್ದಾರೆ.. ಸ್ನೇಹಿತರೆ ಕೃಷಿಯಲ್ಲಿ ಬೀನಾದೇವಿ ಅವರ ಈ ಆಲೋಚನೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..