ಒಂದೇ ಬಾರಿಗೆ ತನ್ನ 12 ಪತ್ನಿಯರಿಗೆ ಪ್ರೆಗ್ನೆಂಟ್ ಮಾಡಿದ 39ಮದ್ವೆಯಾಗಿರುವ ಭೂಪ ! ಈತನಿಗೆ ಮಕ್ಕಳು ಮೊಮ್ಮಕ್ಕಳೆಷ್ಟು ಗೊತ್ತಾ ?

Kannada News
Advertisements

ಸ್ನೇಹಿತರೇ, ಈಗಿನ ದುಬಾರಿ ಕಾಲದಲ್ಲಿ ಒಂದು ಮದ್ವೆಯಾಗಿಯೇ ಜೀವನ ನಡೆಸುವುದು ಕಷ್ಟವಾಗಿದೆ. ಅಂತದರಲ್ಲಿ ಎರಡು ಮೂರೂ ಮದುವೆಯಾದವರ ಬಗ್ಗೆ ನೀವು ಕೇಳಿರುತ್ತೀರಿ..ಆದರೆ ಬರೋಬ್ಬರಿ 39 ಮದ್ವೆಯಾದ ಈ ಭೂಪನ ಬಗ್ಗೆ ನಿಮಗೆ ಗೊತ್ತಾ ?ಈ ಮಾತನ್ನ ಕೇಳಿದ್ರೆ ಈಗಾಗಲೇ ಮದ್ವೆ ಆಗಿರೋರು ಮೂರ್ಛೆ ಹೋಗದ್ರಲ್ಲಿ ಎರಡು ಮಾತಿಲ್ಲ. ಏಕೆಂದರೆ ಮದ್ವೆಯಾದ ಮೇಲಿನ ಕಷ್ಟ ಅವರಿಗೆ ಗೊತ್ತು..ಅಂತದ್ರಲ್ಲಿ ೩೯ ಮದ್ವೆ ಎಂದರೆ ತಮಾಷೇನಾ ಹೇಳಿ. ಹೀಗೆ ಮದ್ವೆ ಆಗುವುದರಲ್ಲೇ ದೊಡ್ಡ ರೆಕಾರ್ಡ್ ಮಾಡಿರುವ ಈತನ ಹೆಸರು ಜಿಯಾನ್ ಎಂದು. ಜಗತ್ತಿನ ಅತೀ ದೊಡ್ಡ ಕುಟುಂಬ ಎಂಬ ಖ್ಯಾತಿಗೆ ಪಾತ್ರನಾಗಿದ್ದಾನೆ. ಭಾರತದ ಮಿಜೋರಾಂ ರಾಜ್ಯದ ಬಕ್ತವಾಂಗ್ ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಬೃಹತ್ ಕುಟುಂಬ. 21 ಜುಲೈ 1945ರಲ್ಲಿ ಹುಟ್ಟಿದ ಜಿಯಾನ್ ಗೆ ಈಗ 76ವರ್ಷ.

[widget id=”custom_html-4″]

Advertisements

ಜಿಯಾನ್ ಫ್ಯಾಮಿಲಿಯಲ್ಲಿ ಈಗ ಹೆಂಡತಿಯರು, ಮಕ್ಕಳು, ಮೊಮ್ಮಕ್ಕಳು ಸೇರಿ ಬರೋಬ್ಬರಿ 181 ಜನರಿದ್ದಾರೆ. ಜಿಯಾನ್ ತನ್ನ ೧೭ನೇ ವಯಸ್ಸಿಗೆ ೧೯೫೯ರಲ್ಲಿ ಮೊದಲ ಮದ್ವೆಯಾಗುತ್ತಾನೆ. ಇಲ್ಲಿಯವರೆಗೂ 39 ಮದ್ವೆಯಾಗಿರುವ ಈತನಿಗೆ 94 ಜನ ಮಕ್ಕಳು ಸೇರಿದಂತೆ 14 ಜನ ಸೊಸೆಯಂದಿರು ಹಾಗೂ 33 ಜನ ಮೊಮ್ಮಕ್ಕಳು ಇದ್ದಾರೆ. ಇನ್ನು ಇಷ್ಟು ಜನರಿಗೆ ವಾಸ ಮಾಡುವ ಸಲುವಾಗಿ ನಾಲ್ಕು ಅಂತಸ್ತಿನ ಮನೆಯನ್ನ ಕಟ್ಟಿಸಿರುವ ಜಿಯಾನ್, ಅದರಲ್ಲಿ ೧೦೦ ರೂಮುಗಳನ್ನ ಮಾಡಿದ್ದು ಎಲ್ಲರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನು ೧೯೭೮ರ ಒಂದೇ ವರ್ಷದಲ್ಲಿ ೧೩ಜನರನ್ನ ಮದ್ವೆಯಾಗಿದ್ದ ಈತ, ಅದರಲ್ಲಿ ಹನ್ನೆರಡು ಜನ ಹೆಂಡತಿಯರಿಗೂ ಒಂದೇ ಬಾರಿಗೆ ಗರ್ಭ ಧರಿಸುವಂತೆ ಮಾಡಿದ್ದ ಈ ಭೂಪ. ವಿಶೇಷ ಎಂದರೆ ೩೯ಜನ ಹೆಂಡತಿಯರು ಯಾವುದೇ ಜಗಳವಿಲ್ಲದೆ ಅನೋನ್ಯವಾಗಿ ಜೀವನ ಮಾಡುತ್ತಿರುವ ಸುಂದರ ಕುಟುಂಬ ಇದು.

[widget id=”custom_html-4″]

ಇನ್ನು ಜಿಯಾನ್ ಕುಟುಂಬದಲ್ಲಿ ಬರೋಬ್ಬರಿ ೧೮೧ಜನ ಸದಸ್ಯರಿದ್ದರೂ ಅಡುಗೆ ಕೋಣೆ ಮಾತ್ರ ಒಂದೇ. ಜಿಯಾನ್ ನ ೩೯ ಹೆಂಡತಿಯರಲ್ಲಾ ಸೇರಿ ಅಡುಗೆ ಮಾಡಿದ್ರೆ, ಹೆಣ್ಣು ಮಕ್ಕಳು ಮನೆಯ ಕೆಲಸದ ಜೊತೆಗೆ ಮಕ್ಕಳನ್ನ ನಿಭಾಯಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಜೀವನಕ್ಕಾಗಿ ಗಂಡು ಮಕ್ಕಳು ವ್ಯವಸಾಯ ಮತ್ತು ಹಸುಗಳನ್ನ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇನ್ನು ಒಂದು ಸಂಜೆಯ ಊಟಕ್ಕೆ ೩೦ ಕೋಳಿ, ೫೯ಕೆಜಿ ಆಲೂಗಡ್ಡೆ ಹಾಗೂ ೯೯ಕೆಜಿ ಅಕ್ಕಿ ಬೇಕಂತೆ.

ಇನ್ನು ಜಿಯಾನ್ ಅವರ ಅತೀ ಕಿರಿಯ ಪತ್ನಿ ೩೫ ವರ್ಷದ ರಿಂಕ್ಮಿನಿ ಹೇಳುವ ಪ್ರಕಾರ, ಆ ಊರಿನ ಅತೀ ಸುಂದರ ವ್ಯಕ್ತಿ ಎಂದರೆ ಜಿಯಾನ್ ಅಂತೆ. ಇಷ್ಟಾದರೂ ಸಹ ಮತ್ತೆ ಹುಡುಗಿ ಸಿಕ್ಕರೆ ಮದ್ವೆಯಾಗುವುದಾಗಿ ಜಿಯಾನ್ ಹೇಳುತ್ತಾರೆ. ಇನ್ನು ಪ್ರಪಂಚದ ಅತೀ ದೊಡ್ಡ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಯಾನ್ ಕುಟುಂಬವನ್ನ ನೋಡುವ ಸಲುವಾಗಿ ಪ್ರವಾಸಿಗರು ಕೂಡ ಬರುತ್ತಿರುತ್ತಾರೆ.