ಜಮೀನಿನ ರಸ್ತೆ ವಿಚಾರಕ್ಕೆ ಯಶ್ ತಂದೆ ತಾಯಿ ಗಲಾಟೆ ! ಆದ್ರೆ ಗ್ರಾಮಸ್ಥರು ಹೇಳೋ ಅಸಲಿ ಕತೆಯೇ ಬೇರೆ ?

Advertisements

ಸ್ನೇಹಿತರೇ, ಜಮೀನಿನ ರಸ್ತೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಶ್ ಅವರ ತಂದೆ ತಾಯಿ ಹಾಗೂ ಗ್ರಾಮಸ್ಥರ ನಡುವೆ ಜ’ಗಳ ನಡೆದು ಕೈ ಕೈ ಮಿ’ಲಾಯಿಸುವ ಹಂತಕ್ಕೆ ಹೋಗಿದ್ದ ವಿಚಾರ ಎಲ್ಲರಿಗೂ ತಿಳಿದಿರುವುದೇ. ಹೌದು, ನಟ ಯಶ್ ಅವರು ಎರಡು ವರ್ಷಗಳ ಹಿಂದೆಯೇ ಹಾಸನ ಜಿಲ್ಲೆಯ ತಿಮ್ಮಾಪುರದ ಹಳ್ಳಿಯಲ್ಲಿ ಭೂಮಿ ಖರೀದಿ ಮಾಡಿದ್ದರು. ಈಗ ಅದೇ ಜಮೀನಿನ ಪಕ್ಕದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವ ವೇಳೆ ಯಶ್ ಅವರ ತಂದೆ ತಾಯಿ ಹಾಗೂ ಗ್ರಾಮದ ಜನರ ನಡುವೆ ಗಲಾಟೆ ನಡೆದಿದ್ದು ವಿ’ಕೋಪಕ್ಕೆ ಹೋಗಿದೆ. ಹಾಗಾದ್ರೆ ಅಲ್ಲಿ ಅಸಲಿಗೆ ನಡೆದಿರುವುದಾದರೂ ಏನು ? ಈ ಗ’ಲಾಟೆಯ ಬಗ್ಗೆ ಗ್ರಾಮಸ್ಥರು ಹೇಳೋದು ಏನು?ಎಂಬುದನ್ನ ನೋಡೋಣ ಬನ್ನಿ..

[widget id=”custom_html-4″]

Advertisements

ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ಅವರ ತಾಯಿ ಪುಷ್ಪ ಅವರು ತಿಮ್ಮಾಪುರದಲ್ಲಿರುವ ತಮ್ಮ ಜಮೀನಿನ ಬಳಿ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ಜೆಸಿಪಿ ತರಿಸಿ ಕೆಲಸ ಮಾಡಿಸುತ್ತಿದ್ದರು. ಇದೆ ವೇಳೆ ಅಲ್ಲಿಗೆ ಬಂದ ಸ್ಥಳೀಯ ಗ್ರಾಮಸ್ಥರು ರಸ್ತೆ ಮಾಡದಂತೆ ಕೆಲಸ ಮಾಡುತ್ತಿದ್ದ ಜೆಸಿಬಿಯನ್ನ ತಡೆದಿದ್ದಾರೆ. ಇನ್ನು ಅಲ್ಲೇ ಇದ್ದ ಯಶ್ ಅಭಿಮಾನಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವಷ್ಟು ದೊಡ್ಡ ಗ’ಲಾಟೆಯೇ ನಡೆದುಬಿಟ್ಟಿದೆ. ಬಳಿಕ ಸ್ಥಳೀಯ ಪೋಲೀಸರ ಪ್ರವೇಶದಿಂದ ಎರಡು ಕಡೆಯವರನ್ನ ಸಮಾಧಾನ ಮಾಡಲಾಗಿದೆ. ಇನ್ನು ಇದೆ ವಿಚಾರವಾಗಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದ ಯಶ್ ಜರುಗಿರುವ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

[widget id=”custom_html-4″]

ನನ್ನ ತಂದೆ ತಾಯಿ ಬಗ್ಗೆ ಮಾತನಾಡಿದ್ರೆ ಸುಮ್ಮನೆ ಹೇಗೆ ಇರೋಕೆ ಆಗುತ್ತೆ..ಎಂದು ಹೇಳಿದ್ದಾರೆ. ಇನ್ನು ಇದೆ ವೇಳೆ ಯಶ್ ಅವರ ಕಾರು ತಡೆದ ಗ್ರಾಮಸ್ಥರು ರೈತ ವಿರೋಧಿ ೪೨೦ ಯಶ್ ಎಂದು ತಮ್ಮ ಆ’ಕ್ರೋಶ ಹೊರಹಾಕಿದ್ದಾರೆ. ಗ್ರಾಮಸ್ಥರಿಂದಲೂ ಕೂಡ ಇದಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಇನ್ನು ತಿಮ್ಮಾಪುರ ಊರಿನ ಗ್ರಾಮಸ್ಥರು ಹೇಳುವುದೇ ಬೇರೆ, ನಟ ಯಶ್ ಅವರ ಮೇಲಿರುವ ಗೌರವದಿಂದ ಒಂದೂವರೆ ವರ್ಷದ ಹಿಂದೆಯೇ ರಸ್ತೆಗೋಸ್ಕರ ಜಾಗ ನೀಡಿದ್ದೆವು. ಆದರೆ ಮತ್ತೆ ಈಗ ರೈತರ ಜಮೀನನಲ್ಲಿ ರಸ್ತೆ ಮಾಡುತ್ತಿದ್ದಾರೆ. ಆದರೆ ಈ ವಿಷಯ ನಟ ಯಶ್ ಅವರಿಗೆ ಗೊತ್ತಿದೆಯೋ ಏನೋ ಗೊತ್ತಿಲ್ಲ. ಆದರೆ ಯಶ್ ಅವರು ಪೊಲೀಸ್ ಠಾಣೆಯ ಬಳಿ ಹೋಗಿದ್ದಾರೆ. ಅದರ ಬದಲು ನಮ್ಮ ಬಳಿ ಬಂದು ಮಾತನಾಡಿದ್ದರೆ ಇದು ಇಷ್ಟೊಂದು ದೊಡ್ಡ ಸಮಸ್ಯೆ ಆಗುತ್ತಿರಲಿಲ್ಲ ಎಂದು ತಿಮ್ಮಾಪುರದ ಗ್ರಾಮಸ್ಥರು ತಿಳಿಸಿದ್ದಾರೆ.

ಇನ್ನು ರಸ್ತೆ ನಿರ್ಮಾಣಕ್ಕೆ ಅಡ್ಡಿ ಮಾಡಿದ್ದ ಆ ಜಮೀನಿನ ಮಾಲೀಕರು, ನಮ್ಮನ್ನ ಒಂದು ಮಾತು ಕೇಳದೆ ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ಏಕೆ ಅವರು ರಸ್ತೆ ಮಾಡುತ್ತಿದ್ದಾರೆ ಎಂದು ತಮ್ಮ ಕೋ’ಪವನ್ನ ವ್ಯಕ್ತಪಡಿಸಿದ್ದಾರೆ ಜಮೀನಿನ ಮಾಲೀಕ. ಇನ್ನು ನಮ್ಮ ಜಮೀನಿನಲ್ಲಿ ಯಶ್ ಕುಟುಂಬದವರು ರಸ್ತೆ ನಿರ್ಮಾಣ ಮಾಡಬೇಕಾದ್ರೆ, ಅವರ ಜಮೀನಿನಲ್ಲಿ ನನಗೆ ರಸ್ತೆಗೆ ಬಳಸಿದಷ್ಟು ಜಮೀನನ್ನ ಕೊಡಲಿ, ಎಂದು ಆ ಜಮೀನಿನ ಮಾಲೀಕ ಹೇಳಿದ್ದಾರೆ.