ರಾಕಿಭಾಯ್ ಪ್ರಪೋಸಲ್ ಅಕ್ಸೆಪ್ಟ್ ಮಾಡೋಕೆ ರಾಧಿಕಾ ಇಷ್ಟೊಂದು ಟೈಮ್ ತೆಗೆದುಕೊಂಡ್ರಾ !ಲವ್ ಪ್ರಪೋಸ್ ಮಾಡಿದ್ದಾದ್ರೂ ಯಾವಾಗ ಗೊತ್ತಾ ?

Cinema
Advertisements

ಸ್ಯಾಂಡಲ್ ವುಡ್ ನ ಕ್ಯೂಟೆಸ್ಟ್ ಕಪಲ್, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ನ ಸಿಂಡ್ರೆಲಾ ರಾಧಿಕಾ ಪಂಡಿತ್. ಯಾವುದೇ ಗಾಸಿಪ್ ಇಲ್ಲದೇ, ಮುದ್ದು ಮುದ್ದಾಗಿ ಸಂಸಾರ ನಡೆಸ್ತಿರೋ ಜೋಡಿಗಳಲ್ಲಿ ಈ ಮಿಸ್ಟರ್ ಆ್ಯಂಡ್ ಮಿಸಸ್ ಜೋಡಿ ಕೂಡ ಒಂದು. ಬರೋಬ್ಬರಿ 8 ವರ್ಷಗಳ ಕಾಲ ಲವ್ ಮಾಡಿ ಪ್ರೀತಿಸಿ ಮದುವೆಯಾದ ಈ ಜೋಡಿ, ಎಂಗೇಜ್ಮೆಂಟ್ ಆಗುವ ಹತ್ತಿರದ ದಿನಗಳವರೆಗೂ ಯಾರೋಬ್ಬರಿಗೂ ತಮ್ಮ ಪ್ರೀತಿಯ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಪ್ರೀತಿಸುತ್ತಿದ್ದರು ನಟ ಯಶ್ ಮತ್ತು ರಾಧಿಕಾ ಪಂಡಿತ್. ಹಲವು ವರ್ಷಗಳ ಕಾಲ ಇಡೀ ಚಿತ್ರರಂಗದಲ್ಲಿ ಇವರಿಬ್ಬರ ಪ್ರೇಮ ಸಂಬಂಧದ ಬಗ್ಗೆ ಗುಸು ಗುಸು ನಡೆಯುತ್ತಲೇ ಬಂದಿತ್ತು. ಇವರಿಬ್ಬರ ಫ್ರೆಂಡ್ ಶಿಫ್ ಪ್ರೀತಿಗೆ ತಿರುಗಿದ್ದೇ ವೆರಿ ಇಂಟ್ರೆಸ್ಟಿಂಗ್ ಸ್ಟೋರಿ.

[widget id=”custom_html-4″]

Advertisements

ನಂದಗೋಕುಲ ಎಂಬ ಸಿರೀಯಲ್ ನಲ್ಲಿ ನಟಿಸಿದ್ದ ನಟ ಯಶ್ ಮತ್ತು ರಾಧಿಕಾ ಪಂಡಿತ್ ಸ್ನೇಹ ಅಲ್ಲಿಂದಲೇ ಶುರುವಾಗಿತ್ತು. ಅಂದ್ಹಾಗೆ, ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದ್ದೇ ನಟ ಯಶ್ ಪ್ರೇಮ ನಿವೇದನೆ ಮಾಡಿದ ನಂತರ. ಬಹಳ ಕಷ್ಟಪಟ್ಟು ಇರಿಸು ಮುರಿಸಾಗಿ ಯಶ್ ಪ್ರಪೋಸ್ ಮಾಡಿದ್ರೆ, ರಾಧಿಕಾ ಪಂಡಿತ್ ಅದಕ್ಕೆ ಓಕೆ ಅನ್ನೋಕೆ 6 ತಿಂಗಳು ಟೈಮ್ ತಗೊಂಡಿದ್ರು. ಯಶ್ ಪ್ರಪೋಸಲ್ ಬಗ್ಗೆ ಬಹಳ ಆಲೋಚನೆ ಮಾಡಿ, ಸ್ವಲ್ಪ ಸಮಯ ಕೊಡು ಅಂತ ರಾಧಿಕಾ ಕೇಳಿದ್ದರು. ಸುಮಾರು 6 ತಿಂಗಳ ಬಳಿಕ ಯಶ್ ಲವ್ ಪ್ರಪೋಸಲ್ ಒಪ್ಪಿಕೊಂಡರು. ತಾವು ಬಹಳ ಸಮಯವನ್ನು ತೆಗೆದುಕೊಂಡಿದ್ರೂ, ತಮ್ಮ ನಿರ್ಧಾರದಿಂದ ಇಂದು ಬಹಳ ಖುಷಿಯಾಗಿದ್ದೇನೆ ಅಂತ ಸ್ವತಃ ನಟಿ ರಾಧಿಕಾ ಪಂಡಿತ್ ಅವರೇ ಹೇಳಿದ್ದಾರೆ.

[widget id=”custom_html-4″]

2016 ರ ಆಗಸ್ಟ್ 12 ರಂದು ಗೋವಾದ ಸ್ಟಾರ್ ಹೋಟೆಲ್ ಒಂದರಲ್ಲಿ ನಟ ಯಶ್ ಹಾಗೂ ರಾಧಿಕಾ ಪಂಡಿತ್ ನಿಶ್ಚಿತಾರ್ಥ ನೆರವೇರಿತ್ತು. ಅದೇ ವರ್ಷ ಡಿಸೆಂಬರ್ ನಲ್ಲಿ ಹಲವು ಸೆಲೆಬ್ರೆಟಿಗಳು, ಕುಟುಂಬಸ್ಥರು ಹಾಗೂ ಆಪ್ತರ ಬಳಗದ ಸಮ್ಮುಖದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಇಬ್ಬರು ಮುದ್ದು ಮಕ್ಕಳೊಂದಿಗೆ ಸುಖ ಜೀವನ ನಡೆಸುತ್ತಿದ್ದಾರೆ. ಅಂದ್ಹಾಗೆ, ಮದುವೆಗೂ ಮುನ್ನ ಸಂತು Straight forward ಸಿನಿಮಾ ರಿಲೀಸ್ ಆಗಿತ್ತು. ನಟ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು ಜೊತೆಯಾಗಿ ನಟಿಸಿದ ಕೊನೆಯ ಸಿನಿಮಾ ಇದಾಗಿದೆ. ಈ ಕ್ಯೂಟ್ ಜೋಡಿ, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿಯನ್ನ ಮತ್ತೆ ತೆರೆ ಮೇಲೆ ಕಾಣಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.