ಹೇಗಿದ್ದಾನೆ ನೋಡಿ ಜೂನಿಯರ್ ಯಶ್..ರಿವೀಲ್ ಆಯ್ತು ರಾಕಿಂಗ್ ದಂಪತಿ ಪುತ್ರನ ಪೂರ್ತಿ ಫೋಟೋ

Cinema
Advertisements

ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ತಮ್ಮ ಎರಡನೆಯ ಮಗುವಿನ ಫೋಟೋವನ್ನ ಇದುವರೆಗೂ ತೋರಿಸಿರಲಿಲ್ಲ. ಇನ್ನು ನೆನ್ನೆಯಷ್ಟೇ ಮಗುವಿನ ಅರ್ಧ ಫೋಟೋ ಮಾತ್ರವಷ್ಟೇ ರಿವೀಲ್ ಮಾಡಿದ್ದು, ಏಪ್ರಿಲ್ ೩೦ಕ್ಕೆ ನಮ್ಮ ಎರಡನೆಯ ಮಗುವಿಗೆ ಆರು ತಿಂಗಳು ತುಂಬಲಿದ್ದು, ಅಂದೇ ಜೂನಿಯರ್ ರಾಜಾಹುಲಿಯ ಪೂರ್ತಿ ಫೋಟೋ ರಿವೀಲ್ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

Advertisements

ಇನ್ನು ಇಂದು ಮಗುವಿಗೆ ಆರು ತಿಂಗಳು ತಂಬಿದ್ದು, ರಾಕಿಂಗ್ ಸ್ಟಾರ್ ದಂಪತಿಗಳು ತಮ್ಮ ಮಗುವಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ. ಇನ್ನು ಯಶ್ ಪುತ್ರನ ದರ್ಶನಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ತಮ್ಮ ಮಗುವಿನ ದರ್ಶನ ಮಾಡಿಸಿದ್ದಾರೆ.

ಇನ್ನು ನೆನ್ನೆಯಷ್ಟೇ ತಮ್ಮ ಮಗುವಿನ ಶೇರ್ ಫೋಟೋ ಶೇರ್ ಮಾಡುವುದರ ಕುರಿತು ಪೋಸ್ಟ್ ಮಾಡಿದ್ದ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ನೀವು ಕಾಯುತ್ತಿದ್ದ ಆ ಕ್ಷಣ ಬಂದೇಬಿಟ್ಟಿದೆ. ಜೂನಿಯರ್ ಯಶ್ ಗೆ ಆರು ತಿಂಗಳು ತುಂಬಲಿದ್ದು, ನಿಮಗೆ ಶುಭಾಶಯ ತಿಳಿಸಲು ಆತ ಸಿದ್ಧನಾಗಿದ್ದಾನೆ. ನೀವು ಸಿದ್ದರಾಗಿ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.ಇನ್ನು ನೆನ್ನೆ ರಾಧಿಕಾ ಪಂಡಿತ್ ಶೇರ್ ಮಾಡಿದ್ದ ಫೋಟೋದಲ್ಲಿ ಐರಾ ತನ್ನ ಸಹೋದರನೊಂದಿಗೆ ಆ ಫೋಟೋದಲ್ಲಿ ಕಾಣಿಸಿಕೊಂಡಿದ್ದಳು. ಇನ್ನು ಈ ಫೋಟೋದಲ್ಲಿ ಜೂನಿಯರ್ ಯಶ್ ನ ಪೂರ್ತಿ ಫೋಟೋ ರಿವೀಲ್ ಆಗಿರಲಿಲ್ಲ.

ಇನ್ನು ಈಗ ತಮ್ಮ ಪುತ್ರನ ಫೋಟೋವನ್ನ ರಿವೀಲ್ ಮಾಡಿದ್ದು, ಜೂನಿಯರ್ ಯಶ್ ಗೆ ನಿಮ್ಮೆಲ್ಲರ ಆಶೀರ್ವಾದ ಪ್ರೀತಿ ಬೇಕು ಎಂದು ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.