ಸ್ಯಾಂಡಲ್ವುಡ್ ನ ಸಿಂಡ್ರೆಲಾ ರಾಂಕಿಂಗ್ ಸ್ಟಾರ್ ನ ಮುದ್ದಿನ ಪತ್ನಿ, ಎರಡು ಮುದ್ದಿನ ಮಕ್ಕಳ ತಾಯಿ ರಾಧಿಕಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ತಮ್ಮ ಮುದ್ದಿನ ಮಕ್ಕಳ ಫೋಟೋಗಳನ್ನು ರಾಕಿಂಗ್ ದಂಪತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ಈಗ ತಮ್ಮ ಮುದ್ದಿನ ಮಗ ಯಥರ್ವ್ನ ತಲೆ ಕೂದಲು ಕೊಟ್ಟಿದ್ದು ಆ ಪೋಟೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
[widget id=”custom_html-4″]

ನಟಿ ರಾಧಿಕಾ ಪಂಡಿತ್ ಅವರು ಪೋಸ್ಟ್ ಮಾಡಿರುವ ಪೋಟೋದಲ್ಲಿ ಯಶ್ ತಮ್ಮ ಮಗನನ್ನ ಎತ್ತಿಕೊಂಡಿದ್ದು ಮುಡಿ ಕೊಟ್ಟಿರುವ ಮಗನ ತಲೆಯನ್ನ ನೋಡುತ್ತಾ ನಗುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಪೋಟೋವನ್ನ ಹಂಚಿಕೊಂಡಿದ್ದು ಯಥರ್ವ್ನ ಕೂದಲಿಲ್ಲದ ತನ್ನ ತಲೆ ಮೇಲೆ ಬೆರಳುಗಳನ್ನಿಟ್ಟು ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಾನೆ ಎಂಬಂತಿದೆ.
[widget id=”custom_html-4″]

ಇನ್ನು ಇದಕ್ಕೂ ಮೊದಲು ಯಶ್ ದಂಪತಿ ತಮ್ಮ ಮುದ್ದಿನ ಮಗಳು ಐರಾ ತಲೆಕೂದಲನ್ನ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಮುಡಿ ಕೊಟ್ಟಿದ್ದರು. ಆ ಪೋಟೋ ಕೂಡ ಆಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗೆ ತಮ್ಮ ಮುದ್ದಿನ ಮಕ್ಕಳ ತುಂಟಾಟದ ಪೋಟೋ ವಿಡಿಯೋಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ ಸ್ಯಾಂಡಲ್ ವುಡ್ ನ ರಾಂಕಿಂಗ್ ದಂಪತಿ.