ಕಣ್ಣು ಮೂಗು ಕಿವಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಇಲ್ಲಿ ಹರಕೆ ಒತ್ತರೆ ನಾಶವಾಗಿ ಹೋಗುತ್ತವೆ..ಎಲ್ಲಿದೆ ಈ ವಿಶೇಷ ದೇವಾಲಯ.?

Adhyatma
Advertisements

ಕೆಲವು ಸ್ಥಳಗಳಲ್ಲೇ ವಿಶೇಷ ಶಕ್ತಿ ಇರುತ್ತದೆ. ಇದನ್ನೇ ಕ್ಷೇತ್ರ ಮಹಿಮೆ ಎಂದು ಕರೆಯಲಾಗುತ್ತದೆ. ಕೆಲವು ದೇವಾಲಯಗಳಲ್ಲಿ ಸ್ಥಳ ಮಹಿಮೆ ಮತ್ತು ದೈವದ ಮಹಿಮೆ ಎರಡೂ ಇದ್ದು ಅಪಾರ ಭಕ್ತ ಬಳಗ ಇರುತ್ತದೆ. ಅಂತಹ ಪ್ರಸಿದ್ದ ದೇವಾಲಯಗಳಲ್ಲಿ ಒಂದು ಎಡೆಯೂರು ಸಿದ್ಧಲಿಂಗೇಶ್ವರ ಶ್ರೀ ಕ್ಷೇತ್ರ.

Advertisements

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಎಡೆಯೂರು, ಸಿದ್ಧಲಿಂಗೇಶ್ವರ ರು ನೆಲೆಸಿರುವ ಸ್ಥಳ. ಮಹಾ ಯೋಗಿ, ಶಿವ ಸ್ವರೂಪಿ ತೋಂಟದ ಸಿದ್ಧಲಿಂಗ ಮಹಾ ಗುರುಗಳು ಐಕ್ಯವಾಗಿರುವ ಕ್ಷೇತ್ರ. ಪರಮ ಶಿವನೇ ಜನರ ಉದ್ಧಾರಕ್ಕಾಗಿ ಮಹಾ ಯೋಗಿಗಳ ಅವತಾರ ಎತ್ತಿದ್ದರು ಎಂಬುದು ಭಕ್ತರ ನಂಬಿಕೆ. ಲಿಂಗದ ರೂಪದಲ್ಲಿ ಇಲ್ಲಿ ಸಿದ್ದಲ್ಲಿಂಗ ಮಹಾ ಸ್ವಾಮಿಗಳನ್ನು ಆರಾಧಿಸಲಾಗುತ್ತದೆ.

ಇಲ್ಲಿನ ವಿಶೇಷವೆಂದರೆ ಅನೇಕರು ಈ ದೈವದ ಒಕ್ಕಲಾಗಿದ್ದಾರೆ, ಕಣ್ಣು ಮೂಗು ಕಿವಿಗೆ ಸಂಬಂಧಿಸಿದ ಕಾಯಿಲೆಗಳು ಇಲ್ಲಿಗೆ ಹರಕೆ ಒತ್ತರೆ ನಾಶವಾಗಿ ಹೋಗುತ್ತವೆ. ಅದರಲ್ಲೂ ಕಿವಿ ಅಥವಾ ದೇಹದ ಯಾವುದೇ ಭಾಗದಲ್ಲಿ ಗಂಟುಗಳು ಆದರೆ ಇಲ್ಲಿಗೆ ಹರಕೆ ಕಟ್ಟು ಇಟ್ಟರೆ ಗುಣವಾಗುತ್ತವೆ. ಇಲ್ಲಿ ಚಿಕ್ಕ ಮಕ್ಕಳಿಗೆ ಮುಡಿ ಕೊಡುತ್ತಾರೆ.

ರಾಜ್ಯದ ಮುಖ್ಯಮಂತ್ರಿ ಗಳಾಗಿರುವ ಯಡಿಯೂರಪ್ಪನವರು ಕೂಡ ಇಲ್ಲಿಗೆ ಭಕ್ತರು. ಇವರ ಆಡಳಿತದ ಅವಧಿಯಲ್ಲಿ ಈ ಕ್ಷೇತ್ರವನ್ನು ಸಾಕಷ್ಟು ಅಭವೃದ್ಧಿ ಮಾಡಲಾಗಿದೆ. ಎಡೆಯೂರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬರುತ್ತಾರೆ. ಆಸ್ಪತ್ರೆಯಲ್ಲಿ ವಾಸಿಯಾಗದ ಎಷ್ಟೋ ಕಾಯಿಲೆಗಳು ಪವಾಡ ಎಂಬಂತೆ ವಾಸಿಯಾಗುತ್ತವೆ. ಜನರನ್ನು ರಕ್ಷಿಸಲು ಶಿವನೇ ಸಿದ್ದಲಿಂಗರ ರೂಪ ತಾಳಿದ್ದಾನೆ ಎಂದು ಭಕ್ತರು ನಂಬುತ್ತಾರೆ.