ಮಾಜಿ ನಾಯಕ ಧೋನಿ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಯುವರಾಜ್ ಸಿಂಗ್.?

Advertisements

ಭಾರತೀಯ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆಲ್ ರೌಂಡರ್ ಆಟಗಾರರಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. 2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ತೋರಿದ ಭರ್ಜರಿ ಆಟವೇ ಇದಕ್ಕೆ ಸಾಕ್ಷಿ. ಈಗ 2011ರ ವಿಶ್ವಕಪ್ ಬಗೆಗಿನ ಕೆಲವೊಂದು ವಿಷಯಗಳನ್ನ ಬಹಿರಂಗ ಮಾಡಿದ್ದಾರೆ.

Advertisements

ಹೌದು, ಈಗ ಯುವರಾಜ್ ಸಿಂಗ್ ಬಹಿರಂಗ ಮಾಡಿರುವ ಹೇಳಿಕೆಯೊಂದು ಈಗ ಕ್ರಿಕೆಟ್ ಜಗತ್ತಿನಲ್ಲಿ ಹೊಸದೊಂದು ಚರ್ಚೆಗೆ ನಾಂದಿಮಾಡಿದೆ. ಪ್ರತಿಯೊಬ್ಬ ನಾಯಕನಿಗೆ ತನ್ನದೇ ಆದ ನೆಚ್ಚಿನ ಆಟಗಾರನಿರುತ್ತಾನೆ. ಅವರೇ ತಂಡದಲ್ಲಿರಬೇಕು ಎಂದು ಅವರು ಬಯಸುತ್ತಾರೆ. ಆದರೆ ನಾನು ಆಗ ಭರ್ಜರಿ ಪ್ರದರ್ಶನ ನೀಡುತ್ತದ್ದರಿಂದ ಆಗ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿಗೆ ತಂಡಕ್ಕೆ ನನ್ನನ್ನ ಆಯ್ಕೆ ಮಾಡುವುದನ್ನ ಬಿಡಲು ಸಾಧ್ಯವಿರಲಿಲ್ಲ.

ಆಗ ಸುರೇಶ್ ರೈನಾ ಅಷ್ಟೇನೂ ಉತ್ತಮ ಪ್ರದರ್ಶನ ಮಾಡುತ್ತಿರಲಿಲ್ಲ. ಆದರೂ ಸುರೇಶ್ ರೈನಾಗೆ ಧೋನಿಯವರಿಂದ ವಿಶೇಷ ಬೆಂಬಲವಿತ್ತು.ಕಾರಣ ಧೋನಿಗೆ ರೈನಾ ಫೇವರಿಟ್ ಆಟಗಾರನಾಗಿದ್ದನು. ನನ್ನನ್ನ ಕಡೆಗಣಿಸುವ ಸಲುವಾಗಿಯೇ ಆಪ್ತನಾಗಿದ್ದ ಸುರೇಶ ರೈನಾಗೆ ಧೋನಿ ಹೆಚ್ಚು ಬೆಂಬಲ ನೀಡಿದ್ದರು ಎಂದು ಸ್ಪೋಟಕ ಬ್ಯಾಟ್ಸ್ ಮ್ಯಾನ್ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ.

ಇನ್ನು ಯುವರಾಜ್ ಸಿಂಗ್ ತಮ್ಮ ನೆಚ್ಚಿನ ನಾಯಕನ ಬಗ್ಗೆಯೂ ಹೇಳಿಕೊಂಡಿದ್ದಾರೆ. ಯುವ ಪ್ರತಿಭೆಗಳನ್ನ ಪೋಷಿಸಿ ಬೆಳೆಸಿದ ದಾದಾ ಸೌರವ್ ಗಂಗೂಲಿಯೇ ನನ್ನ ನೆಚ್ಚಿನ ನಾಯಕ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಯುವರಾಜ್ ಸಿಂಗ್ ಅವರು ಭಾರತದ ತಂಡದ ಮಾಜಿ ನಾಯಕ MS ಧೋನಿ ಅವರ ಬಗ್ಗೆ ಹೇಳಿರುವ ಮಾತುಗಳನ್ನ ಗಮನಿಸಿದ್ರೆ ಧೋನಿ ಯುವಿಯನ್ನ ತುಳಿಯಲು ನೋಡಿದ್ರಾ ಅನ್ನೋ ಅನುಮಾನ ವ್ಯಕ್ತವಾಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ.