ಯುವರತ್ನ ಚಿತ್ರದಲ್ಲಿ ಬೆಲ್ ಬಾರಿಸುವ ಈ ನಟನಿಗೆ ಪುನೀತ್ ನಿಜಜೀವನದಲ್ಲಿ ಮಾಡಿರುವ ಕೆಲಸ ಎಂಥದ್ದು ಗೊತ್ತಾ ?

Cinema
Advertisements

ಸ್ನೇಹಿತರೇ, ಈ ವರ್ಷ ಬಿಡುಗಡೆಗೊಂಡ ಸಾಮಾಜಿಕ ಕಳಕಳಿಯುಳ್ಳ ಅತ್ತ್ಯತ್ತಮ ಚಿತ್ರಗಳಲ್ಲಿ ಒಂದು ಯುವರತ್ನ. ಚಿತ್ರಮಂದಿರಗಳಲ್ಲಿ ಸರ್ಕಾರ ಮಾಡಿದ ೫೦% ಸೀಟ್ ಗಳ ಕಾರಣದಿಂದಾಗಿ ಚಿತ್ರ ಬಿಡುಗಡೆಗೊಂಡ ಕೇವಲ ಎಂಟೇ ದಿನಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿದೆ. ಇಷ್ಟೆಲ್ಲಾ ಸಂಕಷ್ಟಗಳ ನಡುವೆಯೂ ಕೂಡ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರಮಂದಿರಗಳಲ್ಲಿ ಚೆನ್ನಾಗಿಯೇ ಓಡುತ್ತಿದ್ದು ಫ್ಯಾಮಿಲಿ ಆಡಿಯನ್ಸ್ ನ್ನ ತನ್ನತ್ತ ಸೆಳೆಯುತ್ತಿದೆ. ಇನ್ನು ಈ ಚಿತ್ರದಲ್ಲಿನ ಪ್ರತಿಯೊಂದು ದೃಶ್ಯ ಕೂಡ ಅದ್ಭುತವಾಗಿ ಮೂಡಿಬಂದಿದೆ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮೂಡಿಬರುವ ದೃಶ್ಯ ನೋಡಿದ್ರೆ ಎಂತಹವರಿಗೂ ಒಂದು ಕ್ಷಣ ಕಣ್ಣೀರು ತರಿಸುವ ಮನೋಜ್ಞ ದೃಶ್ಯವದು.

[widget id=”custom_html-4″]

Advertisements

ಹೌದು, ಕಾಲೇಜಿನಲ್ಲಿ ಬೆಲ್ ಬಾರಿಸುವ ಕೆಲಸ ಮಾಡುವ ಪಾತ್ರದಾರಿಯನ್ನ ಪುನೀತ್ ಓಡೋಡಿ ಬಂದು ಅಪ್ಪಿಕೊಂಡು ಅಳುವ ದೃಶ್ಯವಿದು. ಇನ್ನು ಈ ಪಾತ್ರವನ್ನ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿರುವ ಕಲಾವಿದ ಎಮ್ ಕೆ ಮಠ ಅವರು. ಈ ನಟ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿಯೂ ಕೂಡ ನಟಿಸಿದ್ದಾರೆ. ಇನ್ನು ಯುವರತ್ನ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಪುನೀತ್ ಮತ್ತು ಎಮ್ ಕೆ ಮಠ ಅವರು ತುಂಬಾ ಆತ್ಮೀಯರಾಗಿ ಮಾತನಾಡುತ್ತಿದ್ದರಂತೆ. ಇದೆ ವೇಳೆ ಅಪ್ಪು ಅವರಿಗೆ ಎಮ್ ಕೆ ಮಠ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದು ತಿಳಿದಿದೆ. ಹೌದು, ಎಮ್ ಕೆ ಮಠ ಅವರು ತಮ್ಮ ಊರಿನಲ್ಲಿ ನೂತನ ಮನೆಯೊಂದನ್ನ ಕಟ್ಟಿಸಬೇಕೆಂಬ ಆಸೆಯಿಂದ ತಮಗಿದ್ದ ಹಳೆಮನೆಯನ್ನ ಕೆಡವಿ ಹೊಸ ಮನೆಯನ್ನ ಕಟ್ಟಲು ಶುರುಮಾಡುತ್ತಾರೆ. ಆದರೆ ಹಣದ ತೊಂದರೆಯಿಂದಾಗಿ ಆರ್ಥಿಕ ಸಮಸ್ಯೆಗೆ ಒಳಗಾದ ಎಮ್ ಕೆ ಮಠ ಅವರು ಕಟ್ಟುತ್ತಿದ್ದ ಮನೆಯ ಕೆಲಸವನ್ನ ಅರ್ಧಕ್ಕೆ ನಿಲ್ಲಿಸಿ ಗುಡಿಸಲಿನಲ್ಲಿ ವಾಸಮಾಡುವ ಪರಿಸ್ಥಿತಿ ಬರುತ್ತದೆ.

[widget id=”custom_html-4″]

ಇನ್ನು ಯುವರತ್ನ ಚಿತ್ರದ ಶೂಟಿಂಗ್ ವೇಳೆ ಪುನೀತ್ ಅವರಿಗೆ ಎಮ್ ಕೆ ಮಠ ಅವರು ಸಂಕಷ್ಟದ ಪರಿಸ್ಥಿತಿಯಲ್ಲಿರುವುದು ಗೊತ್ತಾಗಿದ್ದು ಅರ್ಧಕ್ಕೆ ನಿಂತಿರುವ ಮನೆಯ ಕೆಲಸವನ್ನ ಪೂರ್ತಿ ಮಾಡಿ ಕೊಡುವುದಾಗಿ ಎಮ್ ಕೆ ಮಠ ಅವರಿಗೆ ಭರವಸೆ ಕೊಟ್ಟಿದ್ದಾರೆ. ಇನ್ನು ಇದರ ಬಗ್ಗೆ ಇತ್ತೀಚೆಗಷ್ಟೇ ಎಮ್ ಕೆ ಮಠ ಅವರು ಮಾಧ್ಯಮದ ಸಂದರ್ಶನವೊಂದರಲ್ಲಿ ಪುನೀತ್ ಅವರ ಸಹಾಯ ನೆನೆದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನಾಯಕ ನಟರು ತಮ್ಮ ಸಿನಿಮಾಗಳಲ್ಲಿ ಮಾತ್ರ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅಭಿನಯ ಮಾಡಿದ್ರೆ ಸಾಲದು, ನಿಜ ಜೀವನದಲ್ಲಿಯೂ ಸಂಕಷ್ಟದ ಪರಿಸ್ಥಿತಿಯಲ್ಲಿರುವ ತಮ್ಮ ಸಹನಟರ ಸಹಾಯಕ್ಕೆ ನಿಲ್ಲುತ್ತಾರೆ ಎಂಬುದಕ್ಕೆ ಪುನೀತ್ ರಾಜ್ ಕುಮಾರ್ ಅವರು ನಿದರ್ಶನವಾಗಿದ್ದಾರೆ.