ಚಹಲ್ ಗೆ ಟಿ20 ವರ್ಲ್ಡ್ ಕಪ್ ನಲ್ಲಿ ಅವಕಾಶ ಕೊಡದಿರಲು ಇವರೇ ಕರಣ.?ಅಸಲಿ ಸತ್ಯ ಬಿಚ್ಚಿಟ್ಟ ಕೊಹ್ಲಿ ಹೇಳಿದ್ದೇನು ಗೊತ್ತಾ?

Sports

ಸ್ನೇಹಿತರೆ ಇಂಡಿಯನ್ ಪ್ರೀಮಿಯರ್ ಲೀಗ್ ಹದಿನಾಲ್ಕನೆ ಆವೃತ್ತಿ ಶುಕ್ರವಾರ ಮುಕ್ತಾಯವಾಗಿದೆ. ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಹಂತದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲಿ ಬಾರಿ ಪ್ರದರ್ಶನವನ್ನು ನೀಡಿತ್ತು. ನಂತರ ಕೊರೋನಾ ಹಿನ್ನೆಲೆಯಲ್ಲಿ ಐಪಿಎಲ್ ಹದಿನಾಲ್ಕನೆಯ ಆವೃತ್ತಿಯನ್ನು ಸ್ಥಗಿತ ಮಾಡಲಾಗಿತ್ತು. ಮತ್ತೆ ದುಬೈನಲ್ಲಿ ಉಳಿದ ಪದ್ಯಗಳನ್ನೆಲ್ಲಾ ಆಡಿಸಲು ಬಿಸಿಸಿಐ ನಿರ್ಧಾರ ಮಾಡಿತ್ತು. ಯಾವ ಅಡೆತಡೆಯಿಲ್ಲದೆ ಇದೀಗ ಐಪಿಎಲ್ ಲೀಗ್ ಮುಗಿದಿದೆ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಗೆದ್ದು ನಾಲ್ಕನೆಯ ಬಾರಿ ಕಪ್ಪನ್ನು ಮುಡಿಗೇರಿಸಿಕೊಂಡಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಕಪ್ಪನ್ನು ಗೆಲ್ಲಲು ವಿಫಲವಾಗಿದ್ದು. ಮುಂದಿನ ಬಾರಿ ನಿಜ ಕಪ್ಪು ನಮ್ಮದೇ ಎಂದು ಈಗಾಗಲೇ ಆರ್ಸಿಬಿ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಜೊತೆಗೆ ಸೋಲಲಿ ಗೆಲ್ಲಲಿ ಅದು ಆಟ, ಆದರೆ ಬೆಂಗಳೂರು ತಂಡದ ಮೇಲೆ ಮತ್ತು ತಂಡದ ಪ್ರತಿಯೊಬ್ಬ ಕ್ರಿಕೆಟರ್ ಮೇಲಿನ ಅಭಿಮಾನ ಯಾವತ್ತಿಗೂ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಹೌದು ಸ್ನೇಹಿತರೆ ಐಪಿಎಲ್ ಮುಗಿದಿದ್ದು, ಟಿ20ವಿಶ್ವಕಪ್ ನೋಡಲು ಕ್ರಿಕೆಟ್ ಪ್ರೇಮಿಗಳು ತುಂಬಾನೇ ಕಾತರದಿಂದ ಕಾಯುತ್ತಿದ್ದಾರೆ. ಭಾರತ ತಂಡವನ್ನ ಮುನ್ನಡೆಸುತ್ತಿರುವ ನಾಯಕ ವಿರಾಟ್ ಕೊಹ್ಲಿ ಈಗ ಪಂದ್ಯಗಳು ಆರಂಭಕ್ಕೂ ಒಂದು ಸತ್ಯವನ್ನೂ ಹೊರಹಾಕಿದ್ದಾರೆ. ಟಿ-20ವಿಶ್ವಕಪ್ ತಂಡಕ್ಕೆ ಈ ಮುಂಚೆ ಬಿಸಿಸಿಐ ಯಾರೆಲ್ಲಾ ಆಟಗಾರರು ಆಡಲಿದ್ದಾರೆ ಎಂಬುದಾಗಿ ಪ್ರಕಟಪಡಿಸಿದ್ದರು. ಅದರಂತೆ ಐಪಿಎಲ್ ನಲ್ಲಿ ಚೆನ್ನಾಗಿ ಅದ್ಭುತ ಪ್ರದರ್ಶನ ನೀಡಿದ ಕ್ರಿಕೆಟಿಗರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದು, ಅದರಂತೆ ಅಕ್ಷರ್ ಪಟೇಲ್ ಅವರ ಬದಲಿಗೆ ಶಾರ್ದುಲ್ ಠಾಕೂರ್ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಆಡಲು ಆಯ್ಕೆ ಮಾಡಿದ್ದಾರೆ. ಆದರೆ ಭಾರತ ತಂಡದ ಸಾಕಷ್ಟು ಕ್ರಿಕೆಟ್ ಪ್ರೇಮಿಗಳು ಚಹಲ್ ಅವರು ಸಹ ಈ ಬಾರಿ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ, ಇವರು ಸಹ ಭಾರತ ತಂಡವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿದ್ದಾರೆ, ಇವರು ಸಹ ಸೆಲೆಕ್ಟ್ ಆಗುತ್ತಾರೆ ಎಂದು ಹೇಳುತ್ತಿದ್ದರು.

ಆದರೆ ಚಹಲ್ ಟಿ20 ವಿಶ್ವಕಪ್ ನಲ್ಲಿ ಆಡಲು ಆಯ್ಕೆಯಾಗಿಲ್ಲ. ಈ ಕುರಿತು ಇದೀಗ ವಿರಾಟ್ ಕೊಹ್ಲಿ ಇದಕ್ಕೆ ಕಾರಣ ಏನೆಂದು ಹೇಳಿದ್ದಾರೆ. ಹೌದು ಚಹಲ್ ಅವರನ್ನು ಯಾಕೆ ಆಯ್ಕೆ ಮಾಡಲಿಲ್ಲ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ. ಹೌದು ಈ ರಾಹುಲ್ ಚಹರ್ ಅವರು ಈ ಮುಂಚೆ ಐಪಿಎಲ್ನಲ್ಲಿ ತುಂಬಾನೇ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಾಗೆ ಶ್ರೀಲಂಕಾ ಸರಣಿಯಲ್ಲಿ ಕೂಡ ಗಮನಸೆಳೆದಿದ್ದಾರೆ. ಜೊತೆಗೆ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಬೌಲಿಂಗ್ ಮಾಡಿದ್ದಾರೆ. ಕಷ್ಟದ ಓವರ್ಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಸ್ಪಿನ್ ಬೌಲರ್ ರಾಹುಲ್ ಚಹರ್ ಹೊಂದಿದ್ದಾರೆ. ಹಾಗಾಗಿ ಚಹಲ್ ಅವರನ್ನು ಆಯ್ಕೆ ಮಾಡಲಾಗಲಿಲ್ಲ. ಚಹಲ್ ಅವರಿಗೆ ಅವಕಾಶ ಕೊಡುವುದು ತುಂಬಾನೇ ಕಷ್ಟಕರವಾಗಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಜೊತೆಗೆ ಮುಂಬರುವ ಟಿ-20ವಿಶ್ವಕಪ್ ಎದುರಾಳಿ ತಂಡಗಳಿಗೆ ಸ್ಪೀಡ್ ಸ್ಪಿನ್ ಬಾಲಿಂಗ್ ಅವಶ್ಯಕತೆಯಿದೆ. ಅದು ರಾಹುಲ್ ಚಹರ್ ಅವರು ನಿಭಾಯಿಸಲಿದ್ದಾರೆ. ಹೆಚ್ಚು ಸ್ಪೀಡಾಗಿ ಸ್ಪಿನ್ ಮಾಡುತ್ತ ಬೌಲಿಂಗ್ ಮಾಡಿದರೆ ಎದುರಾಳಿಗಳನ್ನ ಕಟ್ಟಿ ಹಾಕಬಹುದು ಹಾಗಾಗಿ ರಾಹುಲ್ ಅವರನ್ನು ಟಿ-ಟ್ವೆಂಟಿ ವಿಶ್ಕಕಪ್ ಗೆ ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,