ಅಪ್ಪಿ ತಪ್ಪಿಯೂ ನಿಮ್ಮ ಈ ರಹಸ್ಯಗಳನ್ನ ಆ ಮೂವರ ಬಳಿ ಎಂದಿಗೂ ಹೇಳ ಬೇಡಿ..

Kannada Mahiti

ಪ್ರತಿಯೊಬ್ಬ ಮನುಷ್ಯನಲ್ಲಿ ಬೇರೆಯವರೊಂದಿಗೆ ಹೇಳಿಕೊಳ್ಳಲಾಗದ ಅಥವಾ ಪ್ರಪಂಚಕ್ಕೆ ಗೊತ್ತುಪಡಿಸಲು ಇಷ್ಟಪಡದ ಯಾವುದಾದರೂ ಒಂದು ರಹಸ್ಯ ಇದ್ದೇ ಇರುತ್ತದೆ. ಅದೂ ನಿಮ್ಮ ದುರ್ಬಲತೆಯೂ ಕೂಡ ಆಗಿರಬಹುದು. ನಿಮ್ಮ ರಹಸ್ಯ ಗಳು ಬೇರೆಯವರಿಗೆ ತಿಳಿದರೆ ಅದರಿಂದ ನಿಮ್ಮ ಘನತೆ ಗೌರವಕ್ಕೆ ಹಾನಿಯಾಗ ಬಹುದು ಅಥವಾ ನಿಮ್ಮ ಪ್ರಾ’ಣಕ್ಕೆ ಹಾನಿಯಾಗಬಹುದು, ನಿಮ್ಮ ಸಂಪತ್ತು, ಕುಟುಂಬಕ್ಕೆ ತೊಂದರೆ ಆಗಬಹುದು. ಮಹಾನ್ ಅರ್ಥಶಾಸ್ತ್ರಜ್ಞ ಚಾಣಕ್ಯ ನೀತಿಯ ಪ್ರಕಾರ ಇಂತಹ ಯಾವುದೇ ರಹಸ್ಯಗಳನ್ನು ನೀವು ಕೆಲವರೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳ ಬಾರದು.

ಕೆಲವೊಮ್ಮೆ ಜೀವನದಲ್ಲಿ ನಮಗೆ ಎಂತಹ ಪರಿಸ್ಥಿತಿಗಳು ಬರುತ್ತವೆ ಎಂದರೆ ಅತಿಯಾದ ಕಷ್ಟ ಅಥವಾ ಸಂತೋಷದಲ್ಲಿ ಕೆಲವರೊಂದಿಗೆ ನಾವು ನಮ್ಮ ರಹಸ್ಯಗಳನ್ನು ಹಂಚಿಕೊಂಡು ಬಿಡುತ್ತೇವೆ. ಅದರಲ್ಲೂ ಯಾವುದಾದರೂ ಸಮಸ್ಯಗೆ ಸಿಲುಕಿದಾಗ ಅದರಿಂದ ಪಾರಾಗಲು ನಮ್ಮ ರಹಸ್ಯಗಳನ್ನು ಬೇರೆಯವರೊಂದಿಗೆ ಹೇಳಿಕೊಳ್ಳುತ್ತೇವೆ. ತುಂಬಾ ನೊಂದಾಗ ಬೇರೆಯವರೊಂದಿಗೆ ನಮ್ಮ ನೋವು ತೋಡಿಕೊಳ್ಳುವಾಗ ನಮ್ಮ ರಹಸ್ಯಗಳನ್ನು ದುರ್ಬಲತೆಯನ್ನು ಅವರಿಗೆ ಹೇಳಿ ಬಿಡುತ್ತೇವೆ. ಇದು ಸರಿಯಲ್ಲ. ನಾವು ಯಾವುದೇ ಕಾರಣಕ್ಕೂ ಈ ಮೂವರೊಂದಿಗೆ ನಮ್ಮ ರಹಸ್ಯಗಳನ್ನು ಹೇಳಿಕೊಳ್ಳ ಬಾರದು.

ಮಹಿಳೆಯರೊಂದಿಗೆ : ಮಹಿಳೆಯರ ಹೃದಯದಲ್ಲಿ ಗುಟ್ಟುಗಳು ನಿಲ್ಲುವುದಿಲ್ಲ. ಸಾಮಾನ್ಯವಾಗಿ ಅವರು ಒಬ್ಬರ ಬಳಿಯಾದರು ಮನಸಿನ ಎಲ್ಲಾ ವಿಷಯವನ್ನು ಹಂಚಿಕೊಳ್ಳುತ್ತಾರೆ. ಮತ್ತು ಸಮಯ ಸಿಕ್ಕಾಗಲೆಲ್ಲಾ ಇತರೆ ಮಹಿಳೆಯರೊಂದಿಗೆ ಹೆಚ್ಚು ಹೆಚ್ಚು ಮಾತನಾಡುತ್ತಾರೆ. ಹೀಗೆ ಮಾತ ಮಾಡುವಾಗ ಅವರು ಖಂಡಿತಾ ರಹಸ್ಯಗಳನ್ನು ಹೊರ ಹಾಕುತ್ತಾರೆ. ಆದರಿಂದ ಮಹಿಳೆ ಯಾರೊಂದಿಗೆ ನಿಮ್ಮ ರಹಸ್ಯ ಹಂಚಿ ಕೊಳ್ಳುವುದು ಸೂಕ್ತವಲ್ಲ

ಮೂರ್ಖ ಸ್ನೇಹಿತರೊಂದಿಗೆ : ಮೂರ್ಖ ಅಥವಾ ಕಡಿಮೆ ಬುದ್ಧಿ ವಂತಿಕೆ ಇರುವ ಸ್ನೇಹಿತರು ಎಷ್ಟೇ ಒಳ್ಳೆಯವರಾಗಿದ್ದರೂ ಅವರೊಂದಿಗೆ ನಿಮ್ಮ ಗುಟ್ಟುಗಳನ್ನು ಹಂಚಿಕೊಳ್ಳ ಬೇಡಿ. ಒಂದಲ್ಲ ಒಂದು ದಿನ ಅವರು ನಿಮ್ಮ ಗುಟ್ಟುಗಳನ್ನು ರಟ್ಟು ಮಾಡುತ್ತಾರೆ. ಒಂದು ವೇಳೆ ಮ’ಧ್ಯಪಾನ ಮಾಡುವ ವ್ಯಕ್ತಿಗಳೊಂದಿಗೆ ನೀವು ನಿಮ್ಮ ರಹಸ್ಯವನ್ನು ಹೇಳಿದರೆ ಅದು ನೀವು ಇಡೀ ಜಗತ್ತಿಗೆ ನಿಮ್ಮ ಗುಟ್ಟನ್ನು ಹೇಳಿದಂತೆ. ಕು’ಡಿದ ವ್ಯಕ್ತಿಗಳು ಯಾವಾಗಲೂ ಮನಸಿನಲ್ಲಿ ಇರುವುದು ಎಲ್ಲವನ್ನೂ ಹೊರಹಾಕುತ್ತಾರೆ.

ಯೋಚಿಸಿ ನಿಮಗೇ ನಿಮ್ಮ ಗುಟ್ಟುಗಳನ್ನು ನಿಮ್ಮ ಮನಸಿನಲ್ಲಿ ಇಟ್ಟುಕೊಳ್ಳಲು ಸಾಧ್ಯ ವಾಗದೆ ಹೋದರೆ ಬೇರೆಯವರು ಹೇಗೆ ನಿಮ್ಮ ರಹಸ್ಯವನ್ನು ಗುಪ್ತವಾಗಿ ಇಡುತ್ತಾರೆ ಎಂದು ನಂಬುತ್ತೀರಿ? ಆದ್ದರಿಂದ ನಿಮ್ಮ ದುರ್ಬಲತೆಯಾಗಿರಲಿ, ನಿಮ್ಮ ರಹಸ್ಯ ವಾಗಿರಲಿ ಒಂದು ವೇಳೆ ಅವನ್ನು ನೀವು ಬಚ್ಚಿಡಲು ಇಚ್ಛಿಸಿದರೆ ಅವನ್ನು ಅಪ್ಪಿತಪ್ಪಿಯೂ ಯಾವ ವ್ಯಕ್ತಿ ಯೊಂದಿಗೂ ಹಂಚಿಕೊಳ್ಳ ಬೇಡಿ. ಪರಿಸ್ಥಿತಿ ಏನೇ ಇರಲಿ, ವ್ಯಕ್ತಿಗಳು ಎಷ್ಟೇ ಒಳ್ಳೆಯವರು ಆಗಿರಲಿ ನಿಮ್ಮ ಮನಸ್ಸಿನ ರಹಸ್ಯವನ್ನು ನಿಮ್ಮ ಒಳಗೇ ಇಟ್ಟು ಕೊಳ್ಳಿ. ಏಕೆಂದರೆ ಇಂದು ನಿಮಗೆ ಸ್ನೇಹಿತರಾದರು ನಾಳೆ ಶತ್ರುವಾಗಬಹುದು. ಸಮಯ ಹೇಗೆ ಬೇಕಾದರೂ ಬದಲಾಗ ಬಹುದು. ನಿಮ್ಮ ದುರ್ಬಲತೆಯೇ ನಾಳೆ ನಿಮಗೆ ಮುಳುವಾಗಬಹುದು. ಆದರಿಂದ ನಿಮ್ಮ ರಹಸ್ಯಗಳನ್ನು ಯಾವ ಪರಿಸ್ಥಿತಿ ಯಲ್ಲೂ ಯಾರೊಂದಿಗೂ ಹಂಚಿ ಕೊಳ್ಳಬೇಡಿ.