ಅಬ್ಬಬ್ಬಾ ! ವೀಳ್ಯದೆಲೆಯಿಂದ ಇಷ್ಟೊಂದು ಲಾಭನಾ ?

Kannada News
Advertisements

ಸಾಮಾನ್ಯವಾಗಿ ಊಟ ಆದ ಮೇಲೆ ಜೀರ್ಣವಾಗಲೆಂದು ವೀಳ್ಯದೆಲೆ ಜೊತೆಗೆ ಅಡಿಕೆಯನ್ನ ಸೇರಿಸಿ ಜಿಗಿಯುವುದನ್ನ ನಾವು ನೋಡಿರುತ್ತೇವೆ. ಆದರೆ ಇದರ ಪ್ರಯೋಜನ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ವೀಳ್ಯದೆಲೆಯಲ್ಲಿ ಹಲವಾರು ಔಷಧೀಯ ಗುಣಗಳನ್ನ ಹೊಂದಿದೆ ಎಂದು ಆಯುರ್ವೇದ ಉಲ್ಲೇಖ ಮಾಡಲಾಗಿದೆ. ಹಾಗಾದರೆ ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ ಬನ್ನಿ..

Advertisements

ಮಕ್ಕಳಿಗೆ ಕೆಮ್ಮು ಕಫ ಇದ್ದಲ್ಲಿ ವೀಳ್ಯದೆಲಯನ್ನೆ ಚೆನ್ನಾಗಿ ಅರಿದು ಅದರ ರಸಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಸುವುದರಿಂದ ಕೆಮ್ಮು ಕಫ ನಿವಾರಣೆಯಾಗುತ್ತದೆ. ಇನ್ನು ದೊಡ್ಡವರು ಕೂಡ ಎಳೆಯ ರಸವನ್ನ ಜೇನು ತುಪ್ಪದ ಜೊತೆ ಸೇರಿಸಿ ಕುಡಿದರೆ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ. ಇನ್ನು ಇದೆ ರಸದ ಜೊತೆಗೆ ಹಾಲನ್ನ ಸೇರಿಸಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತೆ. ಜೊತೆಗೆ ಒಣ ಕೆಮ್ಮು ಕೂಡ ಹತೋಟಿಗೆ ಬರುತ್ತೆ.

ಇನ್ನು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಈ ವೀಳ್ಯದೆಲೆಯ ರಸವನ್ನ ತೆಗೆದುಕೊಳ್ಳಬಹುದಾಗಿದೆ. ಇನ್ನು ಗಂಟಲು ಕೆರೆತ ಇದ್ದವರು ವೀಳ್ಯದೆಲೆಗೆ ಲವಂಗವನ್ನ ಸೇರಿಸಿ ಸೇವಿಸಬಹುದು. ಇನ್ನು ಬಿಕ್ಕಳಿಕೆ ವಾಂತಿ ಬರುವ ವೇಳೆಯಲ್ಲಿ ವೀಳ್ಯದೆಲಗೆೆ ಸ್ವಲ್ಪ ಅಡಿಕೆಯ ಚೂರು ಜೊತೆಗೆ ಏಲಕ್ಕಿ ಸೇರಿಸಿ ಸೇವಿಸಿದ್ದಲ್ಲಿ ಸಮಸ್ಯೆಯಿಂದ ಪಾರಾಗಬಹುದು. ಇನ್ನು ಊಟ ಆದ ಬಳಿಕ ವೀಳ್ಯದೆಲೆಯನ್ನ ತಿಂದಲ್ಲಿ ಜೀರ್ಣ ಪ್ರಕ್ರಿಯೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೆ.