ಎಣ್ಣೆ ಖರೀದಿಯಲ್ಲಿ ಬೆಂಗಳೂರಿನ ವ್ಯಕ್ತಿಯೇ ನಂಬರ್ ಒನ್ ! ಬಿಲ್ ನೋಡಿದ್ರೆ ಶಾಕ್ ಆಗ್ತೀರಾ?

News
Advertisements

ಗಲಾಕ್ ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಎಣ್ಣೆ ಮಾರಾಟ ಮಾರಲು ಅನುಮತಿ ನೀಡುತ್ತೆ. ಇನ್ನು ಸರ್ಕಾರದ ಅನುಮತಿ ದೊರೆತಿದ್ದೆ ತಡ ಎಣ್ಣೆ ಅಂಗಡಿಗಳ ಮುಂದೆ ಜನವೋ, ಜಾನ್. ಯುವಕರು, ಯುವತಿಯರು, ವಯಸ್ಸಾದವರು ಎಂಬ ಭೇದವಿಲ್ಲದೆ ಅಂಗಡಿಗಳ ಮುಂದೆ ಸಾಲಾಗಿ ಜನ ಜಂಗುಳಿಯೇ ಸೇರಿತ್ತು. ತರಕಾರಿಗಾಗಿಯೋ ಅಥ್ವಾ ದಿನಸಿ ವಸ್ತುಗಳಿಗಾಗಿಯೋ ಕೂಡ ಜನ ಇಷ್ಟೊಂದು ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಎಣ್ಣೆ ಅಂಗಡಿಗಳ ಮುಂದೆ ಸೋಷಿಯಲ್ ಡಿಸ್ಟೆನ್ಸ್ ಮೆಂಟೈನ್ ಮಾಡಿದ್ದರು, ಮಾಸ್ಕ್ ಕೂಡ ಧರಿಸಿದ್ದರು. ಇನ್ನು ಒಂದು ಮುಕ್ಕಾಲು ತಿಂಗಳ ಬಳಿಕ ಎಣ್ಣೆ ಸಿಕ್ಕ ಖುಷಿಗೆ ಪೂಜೆ ಮಾಡಿದ್ರು, ಪಟಾಕಿ ಹಚ್ಚಿದ್ರು, ಜೊತೆಗೆ ಹೊಟ್ಟೆಗೆ ಸ್ವಲ್ಪ ಜಾಸ್ತಿನೇ ಬಿಟ್ಕೊಂಡು ರಸ್ತೆಗಳಲ್ಲಿ ಒದ್ದಾಡಿದ್ರು.

ಇನ್ನು ಒಬ್ಬ ವ್ಯಕ್ತಿ ಅಮ್ಮಾಮ್ಮಾ ಎಂದರೆ ಎಷ್ಟು ರುಪಾಯಿಗೆ ಎಣ್ಣೆಯನ್ನ ಖರೀದಿಸಬಹುದು ಅಂತ ಕೇಳಿದ್ರೆ ಒಂದು 2 ಸಾವಿರಕ್ಕೊ ಅಥ್ವಾ ಚೆನ್ನಾಗಿ ಹಣ ಇದ್ದವರು ಐದಾರು ಸಾವಿರಕ್ಕೊ ಖರೀದಿ ಮಾಡಬಹುದು ಅಂತ ನೀವು ಹೇಳಬಹುದು. ಆದರೆ ಒಬ್ಬ ವ್ಯಕ್ತಿಗೆ ಇಂತಿಷ್ಟೇ ಎಣ್ಣೆ ಕೊಡಬೇಕು ಎಂದು ಸರ್ಕಾರ ನಿಯಮ ಮಾಡಿದ್ದರೂ, ಶಾಕಿಂಗ್ ವಿಷಯ ಏನಪ್ಪಾ ಅಂದರೆ ಇಲ್ಲೊಬ್ಬ ವ್ಯಕ್ತಿ ಬೆಂಗಳೂರಿನ ತಾವರೆಕೆರೆಯಲ್ಲಿರುವ ವೆನಿಲಾ ಸ್ಪಿರಿಟ್ ಝೋನ್ ಎನ್ನುವ ಎಣ್ಣೆ ಅಂಗಡಿಯಲ್ಲಿ ಬರೋಬ್ಬರಿ 52,841 ರೂಪಾಯಿಗಳಿಗೆ ಎಣ್ಣೆ ಖರೀದಿ ಮಾಡಿದ್ದಾನೆ.

Advertisements

ನಾನೇನು ಕಡಿಮೆ ಇಲ್ಲ ಅನ್ನುವಂತೆ ಮತ್ತೊಬ್ಬ ವ್ಯಕ್ತಿ ಬರೋಬ್ಬರಿ 95,347 ರೂಪಾಯಿಗಳಿಗೆ ಖರೀದಿ ಮಾಡಿದ್ದಾನೆ. ಅದು ಕೂಡ ಬೆಂಗಳೂರಿನಲ್ಲೇ. ಇನ್ನು ಈ ಬಿಲ್ ಗಳು ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಯಾರೋ ಇಂದು ತಮ್ಮ ಒಂದು ತಿಂಗಳ ಸಂಬಳವನ್ನ ಉಡೀಸ್ ಮಾಡಿದ್ದಾರೆ ಎಂದು ಟೈಟಲ್ ಕೊಟ್ಟು ಪೋಸ್ಟ್ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.