ಒಳ್ಳೆಯ ಕೆಲಸಕ್ಕಾಗಿ ಕೂದಲು ತೆಗೆಸಿರುವ ಧ್ರುವ ಸರ್ಜಾ ಹೊಸ ಲುಕ್ ನಲ್ಲಿ ಹೇಗೆ ಕಾಣ್ತಾರೆ ನೋಡಿ !

Cinema

ಈಗಂತೂ ಸಿನಿಮಾ ನಟರೂ ತಮ್ಮ ಚಿತ್ರದ ಪಾತ್ರಗಳಿಗೆ ತಕ್ಕ ಹಾಗೆ ತಮ್ಮ ಲುಕ್ ನ್ನ ಬದಲಾಯಿಸಿಕೊಳ್ಳುತ್ತಾರೆ. ತೂಕದಲ್ಲಾಗಲಿ, ತಲೆ ಕೂದಲು ಗಡ್ಡ ಬಿಡುವುದರಲ್ಲಾಗಲಿ ತಮ್ಮ ಪಾತ್ರಕ್ಕಾಗಿ ಏನೆಲ್ಲಾ ಅವಶ್ಯಕತೆ ಇದೆಯೋ ಅದರಂತೆ ತಯಾರಿ ಮಾಡಿಕೊಳ್ಳುತ್ತಾರೆ. ಇನ್ನು ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತರಾದ ನಟ ಧ್ರುವ ಸರ್ಜಾ ಕೂಡ ತಮ್ಮ ಎರಡು ವರ್ಷಗಳ ಹಿಂದೆಯೇ ಶುರುವಾಗಿದ್ದ ಪೊಗರು ಚಿತ್ರಕ್ಕಾಗಿ ಬರೋಬ್ಬರಿ ೩೦ಕೆಜಿ ತೂಕ ಕಡಿಮೆಮಾಡಿಕೊಂಡಿದ್ದು ಬಳಿಕ ತೂಕವನ್ನ ಹೆಚ್ಚಿಸಿಕೊಂಡಿದ್ದಲ್ಲದೆ ತಲೆ ಕೂದಲು ಮತ್ತು ಗಡ್ಡ ಬಿಟ್ಟಿದ್ದರು.ಇನ್ನು ಈಗಾಗಲೇ ಪೊಗರು ಚಿತ್ರದ ಚಿತ್ರೀಕರಣ ಕೂಡ ಮುಗಿದಿದ್ದು ಅವರು ಬಿಟ್ಟಿದ್ದ ಕೂದಲಿಗೂ ಸಹ ಕ’ತ್ತರಿ ಬಿದ್ದಾಗಿದೆ.

ಹೌದು, ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟನ ಹೊಸ ಲುಕ್ ನೋಡಲು ತುದಿಗಾಲಲ್ಲಿ ನಿಂತಿದ್ದರು. ಅದರಂತೆ ಈಗ ಕೂಡ ಈಡೇರಿದೆ. ತಮ್ಮ ತಲೆ ಕೂದಲನ್ನ ಕ’ತ್ತ’ರಿಸಿಕೊಂಡಿರುವ ನಟ ಧ್ರುವ ತಮ್ಮ ಗಡ್ಡವನ್ನ ಮಾತ್ರ ಹಾಗೆ ಬಿಟ್ಟಿದ್ದಾರೆ. ಜೊತೆಗೆ ತಮ್ಮ ತಲೆಕೂದಲನ್ನ ವಿಶೇಷವಾದ ಕೆಲಸಕ್ಕೆ ಉಪಯೋಗವಾಗುವಂತೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಹೌದು, ಧ್ರುವ ಅವರ ಆತ್ಮೀಯರೊಬ್ಬರು ನೀಡಿದ ಸಲಹೆ ಮೇರೆಗೆ ಹತ್ತು ಇಂಚಿನಷ್ಟು ಬೆಳೆದಿದ್ದ ತಮ್ಮ ತಲೆಗೂದಲನ್ನ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ವಿಗ್ ತಯಾರಿಸುವ ಸಲುವಾಗಿ ದಾನ ಮಾಡಿದ್ದು ಜೊತೆಗೆ ಅಭಿಮಾನಿಗಳು ಸಹ ತಮ್ಮ ಹೆಚ್ಚಾಗಿ ಬೆಳೆದಿರುವ ತಮ್ಮ ತಲೆ ಕೂದಲನ್ನ ದಾನ ಮಾಡುವಂತೆ ಸಲಹೆ ನೀಡಿದ್ದು ಎಲ್ಲರಿಗು ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ.

ಇನ್ನು ಈಗ ಹೊಸ ಲುಕ್ ಕಂಗೊಳಿಸುತ್ತಿರುವ ನಟ ಧ್ರುವ ಸರ್ಜಾ ಮುಂದಿನ ಸಿನಿಮಾಗಾಗಿ ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ. ಇನ್ನು ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾ ಈಗಾಗಲೇ ಬಿಡುಗಡೆ ಕಾಣಬೇಕಿತ್ತು. ಆದರೆ ಸೋಂಕಿನ ಸಮಸ್ಯೆಯ ಕಾರಣದಿಂದಾಗಿ ಇನ್ನು ಬಿಡುಗಡೆಯಾಗಲಿಲ್ಲ. ಆದರೆ ಈಗಾಗಲೇ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿರುವ ಗಾಯಕ ಚಂದನ್ ಶೆಟ್ಟಿ ಹಾಡಿರುವ ಖರಾಬು ಹಾಡು ಅಂತೂ ಮಿಲಿಯನ್ಸ್ ವೀವ್ಸ್ ಕಂಡಿದ್ದು ಅಭಿಮಾನಿಗಳಲ್ಲಿ ಪೊಗರು ಚಿತ್ರದ ಬಗೆಗೆ ಇದ್ದ ಕುತೂಹಲವನ್ನ ಮತ್ತಷ್ಟು ಹೆಚ್ಚು ಮಾಡಿದೆ. ಒಟ್ಟಿನಲ್ಲಿ ತಮ್ಮ ಕೂದಲನ್ನ ದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದ ನಟ ಧ್ರುವ ಸರ್ಜಾ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.