ತನ್ನ ಕನಸಿನ ಮನೆಯಲ್ಲಿ ಪ್ರೀತಿಯ ಪತ್ನಿಯ ಪುತ್ತಳಿ ಸ್ಥಾಪಿಸಿ ಅಚ್ಚರಿ ಮೂಡಿಸಿದ ಉದ್ಯಮಿ !

News

ನಮಸ್ತೇ ಸ್ನೇಹಿತರೆ, ಇದೊಂದು ಅಪರೂಪದ ಆಧುನಿಕ ಪ್ರೇಮದ ನೈಜ ಕಥೆ..ಇಂತಹ ಆಧುನಿಕ ಯುಗದಲ್ಲೂ ಈ ರೀತಿಯ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಸಾಕ್ಷಿ. ಸ್ನೇಹಿತರೆ ರಾಮಾಯಣದಲ್ಲಿ ಬರುವ ಕತೆಯೊಂದರಲ್ಲಿ ಭಗವಾನ್ ಶ್ರೀ ರಾಮನು ಯಾಗ ಒಂದರ ಸಂಧರ್ಭದಲ್ಲಿ ಸೀತಾ ಮಾತೆಯ ಪುತ್ತಳಿಯನ್ನ ಸ್ಥಾಪಿಸಿ ತನ್ನ ಪಕ್ಕದಲ್ಲಿ ಆ ಪ್ರತಿಮೆಯನ್ನು ಕುಳ್ಳಿರಿಸಿ ಯಾಗವೊಂದನ್ನ ನೆರವೇರಿಸುವುದರ ಬಗ್ಗೆ ಕೇಳಿರುತ್ತೀರಿ..ಈಗ ಕೊಪ್ಪಳದ ಉದ್ಯಮಿಯೊಬ್ಬರು ತಮ್ಮ ಮನೆಯ ಗೃಹಪ್ರವೇಷದ ಸಂದರ್ಭದಲ್ಲಿ ತಮ್ಮ ಹೆಂಡತಿಯ ಪುತ್ತಳಿಯನ್ನಿಟ್ಟು ಮನೆಯ ಗೃಹ ಪ್ರವೇಷದ ಪೂಜೆಯನ್ನು ನೆರವೇರಿಸಿರುವ ಅಪರೂಪದ ಘಟನೆ ನಡೆದಿದೆ.

ಕೊಪ್ಪಳದ ಶ್ರೀನಿವಾಸ್ ಗುಪ್ತಾ ಎಂಬ ಉದ್ಯಮಿಗೆ ತನ್ನ ಪತ್ನಿಗೋಸ್ಕರ ಸುಂದರವಾದ ಮನೆ ಕಟ್ಟಿಸುವ ಕನಸನ್ನ ಹೊಂದಿದ್ದರು. ಅವರ ಕನಸಿನಂತೆ ಮನೆಯೇನೋ ರೆಡಿಯಾಯಿತು. ಆದರೆ ಆ ಮನೆಯಲ್ಲಿ ವಾಸ ಮಾಡಲು ಪತ್ನಿಯೇ ಇರಲಿಲ್ಲ. ಆದರೆ ತನ್ನ ಹೆಂಡತಿಯನ್ನ ಅತಿಯಾಗಿ ಪ್ರೀತಿಸುತ್ತಿದ್ದ ಉದ್ಯಮಿಗೆ ಯಾವುದೇ ರೀತಿಯಲ್ಲಾದರೂ ಸರಿ ಪತ್ನಿ ಗೃಹಪ್ರವೇಶದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಯೋಚಿಸಿ ಹೆಂಡತಿಯ ಪುತ್ತಳಿ ಮಾಡಿಸುವ ನಿರ್ಧಾರಕ್ಕೆ ಬರುತ್ತಾರೆ. ಆಗ ತನ್ನ ಮನದಾಸೆಯನ್ನ ಬೆಂಗಳೂರಿನ ಬೊಂಬೆ ಮನೆ ಕಲಾವಿದರ ಬಳಿ ಹೇಳಿಕೊಳ್ಳುತ್ತಾರೆ. ಆಗ ತಯಾರಿ ಆಗಿದ್ದೇ ಶ್ರೀನಿವಾಸ ಗುಪ್ತಾ ಪತ್ನಿಯ ಪುತ್ತಳಿ.

ರಬ್ಬರ್ ಮತ್ತು ಸಿಲಿಕಾನ್ ನ್ನ ಉಪಯೋಗಿಸಿ ಪ್ರತಿಮೆ ಮಾಡಲಾಗಿದ್ದು ಯಾವ ಕೋನದಲ್ಲೂ ಅದು ಬೊಂಬೆ ಅಂತಾನೆ ಅನ್ನಿಸುವುದಿಲ್ಲ. ನಿಜವಾಗಲೂ ಅವರ ಪತ್ನಿ ಮರುಜನ್ಮವೆತ್ತಿ ಬಂದಳೆನೋ ಅನ್ನುವಷ್ಟರ ಮಟ್ಟಿಗೆ ನೈಜವಾಗಿದೆ. ಇನ್ನು ಶ್ರೀನಿವಾಸ ಗುಪ್ತಾ ಅವರ ಪತ್ನಿ 2017ರಲ್ಲೇ ಅ’ಪಘಾತವೊಂದರಲ್ಲಿ ತೀರಿಕೊಂಡಿದ್ದಾರೆ. ಇನ್ನು ತನ್ನ ಮನದಾಸೆಯಂತೆ ಗುಪ್ತಾ ಅವರು ಗೃಹಪ್ರವೇಷದ ವೇಳೆ ಹೆಂಡತಿಯ ಪುತ್ತಳಿ ಸ್ಥಾಪಿಸಿದ್ದು ಅವರ ಮಕ್ಕಳ ಸಂತೋಷವನ್ನಂತೂ ಹೇಳದಂತಾಗಿದೆ. ಇನ್ನು ಗೃಹಪ್ರವೇಷಕ್ಕೆ ಬಂದ ಅತಿಥಿಗಳು ಕೆಲ ವರ್ಷಗಳ ಹಿಂದೆಯಷ್ಟೇ ಕಣ್ಮರೆಯಾಗಿದ್ದ ಉದ್ಯಮಿಯ ಪತ್ನಿ ತಮ್ಮನ್ನು ಸ್ವಾಗತಿಸುತ್ತಿರುವುದನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ.

ಇನ್ನು ಇದರ ಬಗ್ಗೆ ಮಾತನಾಡಿರುವ ಉದ್ಯಮಿ ಶ್ರೀನಿವಾಸ ಗುಪ್ತಾ ನನ್ನ ಜೀವನದಲ್ಲಿ ಅತೀ ಹೆಚ್ಚು ಪ್ರೀತಿಸಿದ ಜೀಬ ಅದು. ನನ್ನ ಹಾಗೂ ನನ್ನ ಪತ್ನಿಯ ನೆನಪುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244