ಲಾಕ್ ಡೌನ್ ಹಿನ್ನಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿರವರ ಪುತ್ರ ನಿಖಿಲ್ ರವರವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ರಾಮನಗರದ ಕೇತುಗಾನಹಳ್ಳಿ ಬಳಿ ಇರುವ ತೋಟದ ಮನೆ ಬಳಿ ಸರಳವಾಗಿ ಮದುವೆ ಮಾಡಿ ಮುಗಿಸಲಾಗಿದೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡ ದಂಪತಿ ಹಾಗೂ ಕುಮಾರಸ್ವಾಮಿ ದಂಪತಿಗಳ ಸಮ್ಮುಖದಲ್ಲಿ ಸರಳವಾಗಿ ನಿಖಿಲ್ ರೇವತಿ ಸಪ್ತಪದಿ ತುಳಿದಿದ್ದು, ಹೆಚ್.ಡಿ.ರೇವಣ್ಣ ದಂಪತಿ, ಸಂಸದ ಪ್ರಜ್ವಲ್ ರೇವಣ್ಣ, ಸೇರಿದಂತೆ ಕುಟುಂಬದವರು, ಆಪ್ತರಷ್ಟೇ ಸರಳವಾಗಿ ನಡೆದ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
ಲಾಕ್ ಡೌನ್ ಹಿನ್ನಲೆಯಲ್ಲಿ ಕೇವಲ ೭೦ ರಿಂದ ೧೦೦ ಜನ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲು ಅನುಮತಿ ಇತ್ತು. ಹಾಗಾಗಿ ಮಾಧ್ಯಮದವರಿಗೂ ಕೂಡ ನಿಖಿಲ್ ರೇವತಿ ಮದ್ವೆಯಲ್ಲಿ ಭಾಗವಹಿಸಲು ಅನುಮತಿ ಇರಲಿಲ್ಲ.
ಜೊತೆಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೂ ಕೂಡ ಮದುವೆಗೆ ಎಂಟ್ರಿ ಇರಲಿಲ್ಲ. ಹಾಗಾಗಿ ಮದುವೆಯ ಫೋಟೋಗಳಾಗಲಿ ವಿಡಿಯೋಗಳಾಗಲಿ ಲಭ್ಯವಿರಲಿಲ್ಲ.
ನಿಖಿಲ್ ಮದ್ವೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಆಗಿದೆ ಎಂದಿದ್ದಕ್ಕೆ ಸಿಎಂ ಹೇಳಿದ್ದೇನು ಗೊತ್ತಾ.?

ಇನ್ನು ಸಿನಿಮಾ ಸೆಲೆಬ್ರೆಟಿಗಳು, ಅಭಿಮಾನಿಗಳು ಕೂಡ ಮನೆಯಲ್ಲೇ ಇದ್ದುಕೊಂಡು ನಿಖಿಲ್ ಹಾಗೂ ರೇವತಿಯವರಮದುವೆಗೆ ಶುಭ ಕೋರುತ್ತಿದ್ದಾರೆ. ಇನ್ನು ನವರಸ ನಾಯಕ ಜಗ್ಗೇಶ್ ರವರು ಮದುವೆ ಸ್ವರ್ಗದಲ್ಲಿ ನಿಶ್ಚಯಿಸಿದ ದೇವರ ನಿಯಮ…ತಂದೆತಾಯಿ ತಾತಅಜ್ಜಿ ಆಶೀರ್ವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು…ಅದು ಪಡೆದ ಅದೃಷ್ಟವಂತ ನಿಕಿಲ್..ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಜೋಡಿಗೆ ಶುಭಹಾರೈಕೆ..ನೂರ್ಕಾಲ ಸುಖವಾಗಿ ಬಾಳಿ ಎಂದು ನವದಂಪತಿಗಳಿಗೆ ವಿಶ್ ಮಾಡಿದ್ದಾರೆ.
ಮದುವೆ ಸ್ವರ್ಗದಲ್ಲಿ ನಿಶ್ಚಯಿಸಿದ ದೇವರ ನಿಯಮ…ತಂದೆತಾಯಿ ತಾತಅಜ್ಜಿ ಆಶೀರ್ವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು…ಅದು ಪಡೆದ ಅದೃಷ್ಟವಂತ ನಿಕಿಲ್….
— ನವರಸನಾಯಕ ಜಗ್ಗೇಶ್ (@Jaggesh2) April 17, 2020
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಜೋಡಿಗೆ ಶುಭಹಾರೈಕೆ…
ನೂರ್ಕಾಲ ಸುಖವಾಗಿ ಬಾಳಿ…godbless..#nikilkumar @hd_kumaraswamy pic.twitter.com/3Ye5i22UdX