ನಿಮ್ಮ ಮೊಣಕೈ ಮೊಣಕಾಲಿನ ಕಪ್ಪು ಕಲೆ ಹೋಗಲಾಡಿಸಲು ಮನೆಯಲ್ಲೇ ಮಾಡಬಹುದಾದ ಸುಲಭ ಟಿಪ್ಸ್ ಇಲ್ಲಿದೆ

Kannada News Lifestyle
Advertisements

ಈಗಂತೂ ಯುವತಿಯರು ಮಾತ್ರವಲ್ಲದೇ ಯುವಕರು ಕೂಡಾ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ.ನಾವು ನಮ್ಮ ದೇಹದ ಕೂದಲು, ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಆದ್ರೆ ನಮ್ಮ ದೇಹದ ಎಲ್ಲಾ ಭಾಗಗಳ ಚರ್ಮ ಬಿಳಿಯಾಗಿದ್ದರೂ ಮೊಣಕಾಲು ಮತ್ತು ಮೊಣಕೈಯ ಭಾಗಗಳು ಕಪ್ಪಾಗಿರುತ್ತವೆ.

ನಮ್ಮ ಮೊಣಕೈ ಹಾಗೂ ಮೊಣಕಾಲುಗಳು ಡೆಡ್‌‌ಸ್ಕಿನ್‌ನ ಕಾರಣದಿಂದಾಗಿ ಜಿಡ್ಡುಗಟ್ಟಿದಂತಾಗಿ ಆ ಭಾಗದ ಚರ್ಮ ಕಪ್ಪಗೆ ಕಾಣಿಸುತ್ತದೆ. ಅನೇಕ ಜನ ಸೋಪು ಸೇರಿದಂತೆ ವಿವಿಧ ಸೌಂದರ್ಯ ವರ್ಧಕಗಳನ್ನು ಉಪಯೋಗಿಸಿದ್ರೂ ಯಾವುದೇ ರೀತಿಯ ಬದಲಾವಣೆ ಕಂಡುಬರೋದಿಲ್ಲ. ಎಷ್ಟೋ ಜನ ಇದರಿಂದ ಮುಜುಗರ ಪಟ್ಟುಕೊಳ್ಳುತ್ತಾರೆ. ಆದರೆ ಇಲ್ಲಿ ಕೊಟ್ಟಿರುವ ಮನೆಮದ್ದನ್ನು ಉಪಯೋಗಿಸಿ ನಿಮ್ಮ ಮೊಣಕೈ ಹಾಗೂ ಮೊಣಕಾಲಿನ ಚರ್ಮದ ಅಂದವನ್ನು ಬದಲಾವಣೆ ಮಾಡಿಕೊಳ್ಳಬಹುದು.

ಚರ್ಮದ ಸೌಂದರ್ಯಕ್ಕೆ ಸೌತೆಕಾಯಿ : ಸೌತೆಕಾಯಿ ನಮ್ಮ ಆರೋಗ್ಯಕ್ಕೆ ಮಾತ್ರ ಉಪಯೋಗವಲ್ಲ. ಇದರಿಂದ ನಮ್ಮ ಚರ್ಮದ ಸೌಂದರ್ಯವನ್ನು ಸಹ ಹೆಚ್ಚಿಸಿಕೊಳ್ಳಬಹುದು. ಸೌತೆಕಾಯಿ ಮೂರರಿಂದ ನಾಲ್ಕು ಹೋಳುಗಳನ್ನು ಮೊಣಕೈ ಹಾಗೂ ಮೊಣಕಾಲಿಗೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೂ ಉಜ್ಜಿ. ೫ ನಿಮಿಷಗಳು ಆದ ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಇದಲ್ಲದೆ ಸೌತೆಕಾಯಿಯ ಚೂರುಗಳ ಜೊತೆಗೆ ಸ್ವಲ್ಪ ಅರಿಶಿಣ ಮತ್ತು ನಿಂಬೆ ರಸ ಸೇರಿಸಿ ಮಿಕ್ಸಿಯಲ್ಲಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕಪ್ಪಾದ ಮೊಣಕೈ ಮತ್ತು ಮೊಣಕಾಲಿನ ಚರ್ಮದ ಭಾಗಕ್ಕೆ ಹಚ್ಚುತ್ತಾ ಇದ್ದರೆ ಇದರಿಂದ ಒಳ್ಳೆಯ ಬದಲಾವಣೆಯನ್ನು ಕಾಣಬಹುದು.

ಅಡುಗೆ ಸೋಡಾ ಮತ್ತು ಹಾಲು : ಅಡಿಗೆ ಮನೆಯಲ್ಲಿರುವ ಅಡುಗೆ ಸೋಡಾ ಮತ್ತು ಸ್ವಲ್ಪ ಹಾಲನ್ನು ತೆಗೆದುಕೊಳ್ಳಿ. ಎರಡನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದನ್ನು ನಿಮ್ಮ ಕಪ್ಪಾದ ಚರ್ಮದ ಭಾಗಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಆಮೇಲೆ ಎರಡು ಚಮಚ ನಿಂಬೆ ರಸ, ಜೇನುತುಪ್ಪ ಅರ್ಧ ಚಮಚ, ಮತ್ತು ಎರಡು ಚಮಚ ಆಗುವಷ್ಟು ಈರುಳ್ಳಿ ಜೊತೆಗೆ ಒಂದು ಚಮಚ ಕಡಲೆಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಮಿಶ್ರಣವನ್ನು ನಿಮ್ಮ ಕಪ್ಪಾದ ಭಾಗಗಳಿಗೆ ಹಚ್ಚಿ. ಇದೇ ರೀತಿ ನಾಲ್ಕೈದು ದಿನ ಮಾಡಿ. ಇದರಿಂದಲೂ ಸಹ ಉತ್ತಮ ಫಲಿತಾಂಶ ಸಿಗುತ್ತದೆ.

ಕಡಲೆಹಿಟ್ಟು ಮತ್ತು ಹರಿಶಿನ : ಇದಲ್ಲದೇ ಮನೆಯಲ್ಲಿರುವ ಕಡಲೆಹಿಟ್ಟು ಮತ್ತು ಹರಿಶಿನವನ್ನು ತೆಗೆದುಕೊಳ್ಳಿ. ಎರಡನ್ನೂ ಮಿಕ್ಸ್ ಮಾಡಿ ಮೊಣಕೈ ಮತ್ತು ಮೊಣಕಾಲಿನ ಕಪ್ಪಗಿನ ಭಾಗಗಳಿಗೆ ಹಚ್ಚಿ ಸುಂದರ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.