ಮಾಲಾಶ್ರೀ ಜೊತೆ ನಟಿಸಿದ್ದ ಈ ನಟನಿಗೆ ಏನಾಯ್ತು.!ಈಗ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಗೊತ್ತಾ?

Advertisements

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾರಂಗದ ಕನಸಿನ ರಾಣಿ ಎಂದರೆ ಅದು ನಟಿ ಮಾಲಾಶ್ರೀ. ಒಂದು ಕಾಲಕ್ಕೆ ಸ್ಯಾಂಡಲ್ವುಡ್ ಸಿನಿಮಾರಂಗದಲ್ಲಿ ಟಾಪ್ ನಟನಂತೆ ಮೆರೆದ ಏಕೈಕ ನಟಿ. ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳು ಸಿನಿಮಾಗಳು ಸೇರಿದಂತೆ ಎಲ್ಲಾ ರೀತಿಯ ಕೌಟಂಬಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಇನ್ನು ಕನಸಿನ ರಾಣಿ ಮಾಲಾಶ್ರೀ ಅವರು ನಟಿಸಿರುವ ಅಕ್ಕ ಸಿನಿಮಾವನ್ನು ನೋಡಿದ್ದರೆ, ಅದರಲ್ಲಿ ನಟಿ ಮಾಲಾಶ್ರೀ ತಮ್ಮನಾಗಿ ಅಭಿನಯಿಸಿರುವ ನಟ ಪ್ರಮೋದ್ ಚಕ್ರವರ್ತಿ ಅವರ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಮಾಲಾಶ್ರೀ ಅವರನ್ನ ಮೀರಿಸುವಂತೆ ಆ ಸಿನಿಮಾದಲ್ಲಿ ನಟಿಸಿದ್ದ ನಟ ಪ್ರಮೋದ್ ಚಕ್ರವರ್ತಿ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisements

1987ರಲ್ಲಿ ಬಿಡುಗಡೆಯಾದ ಬಾಳನೌಕೆ ಎಂಬ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟ ಪ್ರಮೋದ್ ಚಕ್ರವರ್ತಿ ಅಕ್ಕ, Jee Boomba, ಹಾಲೋ ಯಮ, ಗ್ರಾಮ ದೇವತೆ, ನೀಲಾಂಬರಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಿಂದ ಬಂದ ನಟ ಪ್ರಮೋದ್ ಚಕ್ರವರ್ತಿ ನಾಯಕ ನಟನಾಗಿಯೂ ಹಾಗೂ ಹಲವಾರು ಕನ್ನಡ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಾರೆ. ಬರಬರುತ್ತಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಮಾಡಿದ ನಟ ಪ್ರಮೋದ್ ಚಕ್ರವರ್ತಿ 2005ರ ಬಳಿಕ ಸಿನಿಮಾ ರಂಗದಿಂದ ನಾಪತ್ತೆಯಾಗಿಬಿಟ್ರು.

ಮತ್ತೆ 2010ರಲ್ಲಿ ಸ್ಯಾಂಡಲ್ ವುಡ್ ಗೆ ಹಿಂತಿರುಗಿದ ನಟ ಪ್ರಮೋದ್ ಚಕ್ರವರ್ತಿ, ನಟನ ಬದ್ಲಾಗಿ ನಿರ್ದೇಶನಕ್ಕೆ ಇಳಿಯುತ್ತಾರೆ. ನಟ ಶಿವರಾಜ್ ಕುಮಾರ್ ಅವರಿಗೆ ನಿರ್ದೇಶನ ಮಾಡುವ ಸಿಕ್ಕಿದ್ದು, ಸುಗ್ರೀವ ಸಿನಿಮಾ ಮಾಡುತ್ತಾರೆ. ಈ ಸಿನಿಮಾಗೆ ಬರಹಗಾರರು ಕೂಡ ಇವರೇನೇ. ಆದರೆ ಈ ಸಿನಿಮಾ ಅಷ್ಟೊಂದು ಯಶಸ್ವಿ ಕಾಣೋದಿಲ್ಲ. ಮತ್ತೆ ನಟನೆಗೆ ಮರಳಿದ ನಟ ತಂತ್ರ ಎಂಬ ಸಿನಿಮಾದಲ್ಲಿ ನಟಿಸುತ್ತಾರೆ. ಆದರೆ ಅದು ಕೂಡ ಹಿಟ್ ಆಗೋದಿಲ್ಲ. ಬಳಿಕ ಮತ್ತೆ ನಟ ವಿಜಯ್ ರಾಘವೇಂದ್ರ ಅವರಿಗೆ ಗೋಲ್ ಮಾಲ್ ಎಂಬ ಸಿನಿಮಾವನ್ನ ನಿರ್ದೇಶನ ಮಾಡುತ್ತಾರೆ. ಅದು ಕೂಡ ಯಶಸ್ವಿ ಕಾಣೋದಿಲ್ಲ. ಇದರ ಬಳಿಕ 2020ರಲ್ಲಿ ಮತ್ತೆ ಶಿವರಾಜ್ ಕುಮಾರ್ ಅವರಿಗೆ ದ್ರೋಣ ಸಿನಿಮಾವನ್ನ ನಿರ್ದೇಶನ ಮಾಡುತ್ತಾರೆ. ಇದರ ಬಳಿಕ ನಟ ನಿರ್ದೇಶಕ ಪ್ರಮೋದ್ ಚಕ್ರವರ್ತಿ ಏನಾದ್ರೂ ಈಗೇನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ..