ಸಿಡಿಲು ಬಡಿದ ಪಾತ್ರೆಗೆ ಕೋಟಿ ಕೋಟಿ ಹಣ ಕೊಡ್ತಾರಾ ! ಏನಿದು ರೈಸ್ ಪುಲ್ಲಿಂಗ್ ಅಂದ್ರೆ ?

Kannada News
Advertisements

ಪ್ರಿಯ ಸ್ನೇಹಿತರೆ, ಹಣ ಸಂಪಾದನೆ ಮಾಡುವ ಸಲುವಾಗಿ ಜನ ಏನನ್ನಾದರೂ ಮಾಡಲು ಕಳೆದುಕೊಳ್ಳಲು ಸಹ ಸಿದ್ಧವಿರುತ್ತಾರೆ. ಕಷ್ಟ ಪಡದೆ ಸುಲಭವಾಗಿ ಯಾವುದು ನಮಗೆ ದಕ್ಕುವುದಿಲ್ಲ. ಇದೆಲ್ಲಾ ಗೊತ್ತಿದ್ದರೂ ಇತ್ತೀಚಿಗೆ ಹನವರು ಮೋಸದ ದಂಧೆಗಳು ನಮ್ಮ ನಡುವೆ ತಲೆ ಎತ್ತಿವೆ. ಇನ್ನು ಈ ದಂಧೆಗಳ ರೂವಾರಿಗಳು ಕೋಟ್ಯಂತರ ರೂಪಾಯಿಗಳು ಸಿಗುತ್ತವೆ ಎಂಬ ಆಮಿಷವನ್ನ ಒಡ್ಡುತ್ತಾರೆ.

ನೀವು ಎರಡು ತಲೆ ಹಾವು (ಡಬಲ್ ಇಂಜಿನ್)ದಂಧೆ ನಡೆಯುತಿತ್ತು ಅದರ ಬಗ್ಗೆ ಕೇಳಿರುತ್ತೀರಾ..ಆದರೆ ಈಗ ಮತ್ತೊಂದು ‘ರೈಸ್ ಪುಲ್ಲಿಂಗ್’ ಎಂಬ ದಂದೇ ಹಲವು ಕಡೆ ಬಹು ಜೋರಾಗಿಯೇ ನಡೆಯುತ್ತಿದೆ. ಇನ್ನು ರೈಸ್ ಪುಲ್ಲಿಂಗ್ ಎಂದರೆ ಮಿಂಚು ಹೊಡೆದಿರುವ ತಾಮ್ರದ ಪಾತ್ರೆ..ಕೇವಲ ಇದೊಂದು ಪಾತ್ರೆಗೆ ಕೋಟ್ಯಂತರ ರೂಪಾಯಿಗಳನ್ನ ಕೊಡುತ್ತೇವೆ ಎಂಬ ದೊಡ್ಡ ದಂದೆಯೇ ನಡೆಯುತ್ತಿದೆ. ಅಷ್ಟಕ್ಕೂ ಸಿಡಿಲು ಬಡಿದ ತಾಮ್ರದ ಪಾತ್ರೆಗೆ ಕೋಟಿಗಟ್ಟಲೆ ಬೆಲೆ ಇದೆಯಾ..

ತಾಮ್ರದ ಪಾತ್ರೆಗಳಲ್ಲಿ ನೀರಿಟ್ಟು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಉಪಯೋಗ ಅಂತ ನಾವು ಕೇಳಿರುತ್ತೇವೆ. ಆದರೆ ಸಿಡಿಲು ಬಡಿದ ತಾಮ್ರದ ಪಾತ್ರೆಯಲ್ಲಿ ಏನೋ ಪವರ್ ಇರುತ್ತೆ ಎಂದು ಅದನ್ನ ಸ್ಯಾಟಲೈಟ್ ತಯಾರುಸುವಂತಹ ದೊಡ್ಡ ದೊಡ್ಡ ಕಂಪನಿಗಳು ಕೋಟ್ಯಂತರ ಹಣ ಕೊಟ್ಟು ಕೊಳ್ಳುತ್ತವೆ ಎಂಬ ವದಂತಿಗಳು ನಮ್ಮಲ್ಲಿವೆ. ಆದರೆ ಇದೆಲ್ಲಾ ಸತ್ಯಕ್ಕೆ ದೂರವಾದದ್ದು..ಹಣ ಮಾಡುವುದಕ್ಕಾಗಿಯೇ ಹುಟ್ಟಿಕೊಂಡ ಮೋಸದ ಜಾಲಗಳು..ಇದನ್ನ ನಂಬಲೇ ಬೇಡಿ ಎಂದು ಮಾಧ್ಯಮಗಳಲ್ಲಿ ಸುದ್ದಿ ಕೂಡ ಪ್ರಸಾರವಾಗಿದೆ.

ಸ್ನೇಹಿತರೆ,ಸಿಡಿಲು ಬಡಿದ ತಾಮ್ರದ ಪಾತ್ರೆಗೆ ಇಷ್ಟೊಂದು ಬೆಲೆ ಎದೆ ಎಂಬ ಸುದ್ದಿ ಹರಡಲು ಕಾರಣ ಅದು ಅಕ್ಕಿ ಕಾಳುಗಳನ್ನ ತನ್ನತ್ತ ಆಕರ್ಷಿಸಿಕೊಳ್ಳುವ ಶಕ್ತಿ ಇರುವುದರಿಂದ.ಅದೇನೋ ನಿಜ. ಸಿಡಿಲು ಬಡಿದ ತಾಮ್ರದ ಯಾವುದೇ ವಸ್ತುಗಳ ಮುಂದೆ ಅಕ್ಕಿ ಕಾಳನ್ನ ಇಟ್ಟಾಗ ಅದು ಮ್ಯಾಗ್ ನೈಟ್ ನಂತೆ ತನ್ನ ಬಳಿಗೆ ಅಕ್ಕಿ ಕಾಲುಗಳನ್ನ ಆಕರ್ಷಣೆ ಮಾಡುತ್ತೆ. ಆಗ ಅಕ್ಕಿ ಕಾಳುಗಳು ಸಿಡಿಲು ಬಡಿದ ಯಾವುದೇ ತಾಮ್ರದ ಪತ್ರೆ ನಾಣ್ಯ ಅಥ್ವಾ ಇನ್ನಿತರ ವಸ್ತುಗಳಿಗೆ ಸಹಜವಾಗಿಯೇ ಮೆತ್ತಿಕೊಳ್ಳುತ್ತವೆ ಎಂದು ಹೇಳಲಾಗಿದ್ದು ಇದು ತಾಮ್ರದ ನೈಸರ್ಗಿಕ ಗುಣ ಎಂದು ಹೇಳಲಾಗಿದ್ದು ಅದರಲ್ಲಿ ಯಾವುದೇ ವಿಶೇಷವಾದ ಪವರ್ ಇಲ್ಲ ಎಂದು ಹೇಳಲಾಗಿದೆ.

ಇನ್ನು ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿನಂತೆ ಸುಲಭವಾಗಿ ಹಣ ಮಾಡಬಹುದು ಎನ್ನುವ ಕೆಲವರು ಕೋಟಿಗಟ್ಟಲೆ ಹಣ ಸಿಕ್ಕುವ ಆಸೆಯಲ್ಲಿ ರೈಸ್ ಪುಲ್ಲಿಂಗ್ ಬಿಸಿನೆಸ್ ನಡೆಸುವ ದಂದೆಕೋರರ ಆಮಿಷಕ್ಕೆ ಒಳಗಾಗಿ ತಮ್ಮ ಲಕ್ಷ ಲಕ್ಷ ಹಣವನ್ನ ಕಳೆದುಕೊಳ್ಳುತ್ತಾರೆ. ಇನ್ನು ಈ ರೈಸ್ ಪುಲ್ಲಿಂಗ್ ದಂದೆ ಕರ್ನಾಟಕದ ಹಲವು ಭಾಗಗಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದ್ದು, ನೀವು ಸಹ ಹಣದ ಆಸೆಗೆ ಬಿದ್ದು ಮೋಸ ಹೋಗಬೇಡಿ..ಒಂದು ವೇಳೆ ನೀವು ಈ ದಂದೆಗೆ ಎಂಟ್ರಿಯಾದಲ್ಲಿ ನಿಮಗೆ ದೊಡ್ಡ ಚೊಂಬೇ ಗತಿ..