ಇಡೀ ದೇಶವೇ ಅಚ್ಚರಿಪಡುವಂತಹ ಸಾಧನೆ ಮಾಡಿದ 10 ವರ್ಷದ ಹುಡುಗಿ ! ಮಾಡಿದ್ದೇನು ಗೊತ್ತಾ ?

Inspire

ಸ್ನೇಹಿತರೇ, ಸಾಧನೆ ಮಾಡೋದಕ್ಕೆ ವಯಸ್ಸು, ವಿದ್ಯೆ ಮುಖ್ಯವಲ್ಲ. ಛಲವೊಂದಿದ್ದರೆ ಯಾವ ವಯಸ್ಸಿನವರಾದರು ದೊಡ್ಡ ದೊಡ್ಡ ಸಾಧನೆಗಳನ್ನ ಮಾಡಬಹುದು ಎಂಬುದಕ್ಕೆ ಈ ಹತ್ತು ವರ್ಷದ ಬಾಲಕಿಯೇ ನೈಜ ನಿದರ್ಶನ. ೧೦ ವರ್ಷ ಎಂದರೆ ಅದು ಆಡಿಕೊಂಡು ಬೆಳೆಯುವಂತಹ ಪುಟ್ಟ ವಯಸ್ಸು. ಆದರೆ ಇಂತಹ ವಯಸ್ಸಿನಲ್ಲಿ ಈ ಬಾಲಕಿ ಮಾಡಿರುವ ಸಾಧನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿರುವುದಂತೂ ನಿಜ. ಕೆಲವರಿಗೆ ಏನೇ ಹೇಳಿ ಸ್ವಲ್ಪ ಸಮಯದಲ್ಲೇ ಮರೆತುಬಿಡುತ್ತಾರೆ. ನೆನಪಿನ ಶಕ್ತಿಯೇ ಇರೋದಿಲ್ಲ. ಆದರೆ ಹತ್ತು ವರ್ಷದ ಈ ಪುಟ್ಟ ಬಾಲಕಿಗೆ ಇರೋ ನೆನಪಿನ ಶಕ್ತಿ ಬಗ್ಗೆ ಕೇಳಿದ್ರೆ ಆ ದೇವರೇ ಕೊಟ್ಟ ವರದಂತಿದೆ. ಹಾಗಾದ್ರೆ ಯಾರು ಆ ಹುಡುಗಿ..ಆಕೆ ಮಾಡಿರೋ ಸಾಧನೆಯಾದ್ರೂ ಏನು ಎಂಬುದನ್ನ ನೋಡೋಣ ಬನ್ನಿ..

ಇನ್ನು ತನ್ನ ಪುಟ್ಟ ವಯಸ್ಸಿಗೆ ದೊಡ್ಡ ಸಾಧನೆ ಮಾಡಿರೋ ಹತ್ತು ವರ್ಷದ ಈ ಹಡುಗಿಯ ಹೆಸರು ಸಾರಾ ಎಂದು, ಮೂಲತಃ ರಾಜಸ್ಥಾನದವರು. ಇದೆ ಮೇ ೨ರಂದು ಈ ಪುಟ್ಟ ವಯಸ್ಸಿಗೇನೇ ದೊಡ್ಡ ಸಾಧನೆ ಮಾಡಿದ್ದಾಳೆ ಬಾಲಕಿ ಸಾರಾ. ಹೌದು, ಇಡೀ ಜಗತ್ತಿನಲ್ಲಿರುವ 195ದೇಶಗಳಲ್ಲಿ ಚಾಲ್ತಿಯಲ್ಲಿರುವ ಕರೆನ್ಸಿಯ ಬಗ್ಗೆ ಕಂಠಪಾಠ ಮಾಡುವ ಈ ಬಾಲಕಿ ದೊಡ್ಡ ವಿಶ್ವದಾಖಲೆಯನ್ನೇ ಮಾಡಿದ್ದಾಳೆ. ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೇ ಒಂದೊಂದು ದೇಶಕ್ಕೆ ಅದರದ್ದೇ ಆದ ಬೇರೆ ಬೇರೆ ಕರೆನ್ಸಿ ಇರುತ್ತದೆ. ಹಾಗೂ ಪ್ರತೀ ದೇಶಕ್ಕೂ ಒಂದೊಂದು ರಾಜಧಾನಿ ಇರುತ್ತದೆ. ಇನ್ನು ಇಡೀ ಜಗತ್ತಿನಾದ್ಯಂತ ಇರೋ ದೇಶಗಳ ರಾಜಧಾನಿ ಹೆಸರುಗಳನ್ನಾಗಲಿ, ಆಯಾ ದೇಶದ ಕೆರೆನ್ಸಿಯ ನೋಟುಗಳ ಬಗ್ಗೆಯಾಗಲಿ ನೆನಪಿನಲ್ಲಿಟ್ಟುಕೊಳ್ಳೋದು ಅಷ್ಟೊಂದು ಸುಲಭವಲ್ಲ.

ಆದರೆ ತನ್ನ ಚಿಕ್ಕ ವಯಸ್ಸಿಗೆ ಇದೆಲ್ಲಾ ಮಾಹಿತಿಯನ್ನ ನೆನಪಿನಲ್ಲಿಟ್ಟುಕೊಳ್ಳುವ ಮೂಲಕ ದೊಡ್ಡ ಸಾಧನೆಯನ್ನೇ ಮಾಡಿದ್ದಾಳೆ ಈ ಬಾಲಕಿ. ಇದನ್ನ ವರ್ಚುವಲ್ ಲೈವ್ ಮೂಲಕ ಯೌಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದು, ಬಾಲಕಿ ಸಾರಾ ಎಲ್ಲಾ ದೇಶಗಳ ರಾಜಧಾನಿಗಳ ಹೆಸರು ಹೇಳುವ ಮೂಲಕ ಹಾಗೂ ಆಯಾ ದೇಶಗಳ ಕರೆನ್ಸಿ ನೋಟಿನ ಬಗ್ಗೆ ಹೇಳೋ ಮೂಲಕ ದೊಡ್ಡ ವಿಶ್ವದಾಖಲೆಯನ್ನೇ ಮಾಡಿದ್ದಾಳೆ ಹತ್ತು ವರ್ಷದ ಹುಡುಗಿ. ಇನ್ನು ಈ ರೀತಿ ಸಾಧನೆ ಮಾಡಿರುವವರಲ್ಲಿ ಈ ಬಾಲಕಿಯೇ ಮೊದಲಿಗಳು ಅನ್ನೋದು ವಿಶೇಷ.