ಕೆಲವೇ ನಿಮಿಷಗಳಲ್ಲಿ ಎಗ್ ಮಸಾಲ ಫ್ರೈ ಮಾಡುವ ವಿಧಾನ

Advertisements

ಕೊರೋನಾದಿಂದಾಗಿ ಎಲ್ಲರೂ ಮನೆಯಲ್ಲಿ ಲಾಕ್ ಆಗಿದ್ದಾರೆ. ಇನ್ನು ಮನೆಯಲ್ಲಿದ್ದಾಗ ಏನಾದರು ತಿನ್ನ ಬೇಕು ಅಂತ ಅನ್ನಿಸದೆ ಇರೋಲ್ಲ. ಇನ್ನು ಮೊಟ್ಟೆ ಅಂದರೆ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ತುಂಬಾ ಇಷ್ಟ. ಆರೋಗ್ಯಕ್ಕೂ ಒಳ್ಳೆಯದು. ಇನ್ನು ಮೊಟ್ಟೆಯಿಂದ ನಾನಾ ತರವಾದ ಅಡುಗೆಯನ್ನ ಮಾಡಬಹುದು. ಇನ್ನು ಎಗ್ ಮಸಾಲಾ ಪ್ರೈ ಮಾಡಿದ್ರಂತೂ ತುಂಬಾ ಟೇಸ್ಟಿಯಾಗಿ ಇರುತ್ತೆ. ಹಾಗಾದ್ರೆ ಎಗ್ ಮಸಾಲಾ ಪ್ರೈ ಮಾಡೋ ವಿಧಾನ ಹೇಗೆಂದು ನೋಡೋಣ ಬನ್ನಿ..

Advertisements

ಬೇಕಾದ ಪದಾರ್ಥಗಳು : ಬೇಯಿಸಿದ 5 ಮೊಟ್ಟೆಗಳು, ಅರ್ಧ ಟೀ ಸ್ಪೂನ್ ನಷ್ಟು ಖಾರದ ಪುಡಿ, ಅರ್ಧ ಟೀ ಸ್ಪೂನ್ ಗರಂ ಮಸಾಲಾ, ಅರ್ಧ ಚಮಚದಷ್ಟು ಶುಂಠಿ, ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಿಶಿನ, 1/4 ಟೀ ಸ್ಪೂನ್ ಮೆಣಸಿನ ಪುಡಿ, ಇಷ್ಟನ್ನೂ ರೆಡಿ ಮಾಡಿಕೊಳ್ಳಿ.

ಮಾಡುವ ವಿಧಾನ ನೋಡಿ : ಮೊದಲು ಬೇಯಿಸಿರುವ ೫ ಮೊಟ್ಟೆಗಳನ್ನ ಎರಡು ಭಾಗಗಳಾಗಿ ಕಟ್ ಮಾಡಿಕೊಳ್ಳಿ. ಬಳಿಕ ಒಂದು ಬೌಲ್ ತೆಗೆದುಕೊಂಡು, ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನ ಅದರಲ್ಲಿ ಹಾಕಿ,(ಬೇಯಿಸಿದ ಮೊಟ್ಟೆ ಬಿಟ್ಟು) ಅದರ ಜೊತೆಗೆ ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಇದಾದ ಬಳಿಕ ಸ್ಟವ್ ಆನ್ ಮಾಡಿ ಪ್ಯಾನ್  ಮೇಲಿಟ್ಟು, ಮೂರು ಚಮಚ ಎಣ್ಣೆಯನ್ನ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಕಟ್ ಮಾಡಿದ ಮೊಟ್ಟೆಗಳನ್ನ ಹಾಕಿ ಎರಡು ಕಡೆ ಬೇಯಿಸಿ. ಮೊಟ್ಟೆ ಬ್ರೌನ್ ಕಲರ್ ಬರುವವರೆಗೂ ಫ್ರೈ ಮಾಡಿ. ಬಳಿಕ ಮಿಸ್ಕ್ ಮಾಡಿಟ್ಟುಕೊಂಡಿರುವ ಮಸಾಲವನ್ನ ಹಾಕಿ ಮತ್ತೆ ನೀರು ಪೂರ್ತಿಯಾಗಿ ಹೀರಿಕೊಳ್ಳುವವರೆಗೂ ಫ್ರೈ ಮಾಡಿ. ಈಗ ಎಗ್ ಮಸಾಲಾ ತಿನ್ನಲು ರೆಡಿ.