ಬಡವರಿಗೆ 1ಕೇಜಿ ಹಿಟ್ಟಿನ ಪ್ಯಾಕ್ ಜೊತೆ ಈ ಸ್ಟಾರ್ ನಟ ಕೊಟ್ಟಿದ್ದೇನು ಗೊತ್ತಾ?

Cinema

ಕೊರೋನಾ ಹಿನ್ನಲೆಯಲ್ಲಿ ಸಂಪೂರ್ಣ ಭಾರತ ಲಾಕ್ ಡೌನ್ ಆಗಿದೆ. ಆದರೆ ನೇರ ಪರಿಣಾಮ ನಿರ್ಗತಿಕರು, ಬಡಜನರ ಮೇಲೆ ಆಗಿದೆ. ಒಂದೊತ್ತಿನ ಊಟಕ್ಕೂ ಪರದಾಡುವವರು ಎಷ್ಟೋ ಜನರಿದ್ದಾರೆ. ಈಗ ಬಡವರ ಸಂಕಷ್ಟಕ್ಕೆ ಉದ್ಯಮಿಗಳು, ಜನಸಾಮಾನ್ಯರು ಸೇರಿದಂತೆ ಸಿನಿಮಾ ನಟ ನಟಿಯರು ಕೂಡ ಬಡ ಜನರಿಗೆ ಸಹಾಯ ಮಾಡುತ್ತಿದ್ದಾರೆ.

ಈಗ ಬಾಲಿವುಡ್ ನ ಪರಫೆಕ್ಟ್ ನಿಸ್ಟ್ ಎಂದೇ ಹೆಸರಾಗಿರುವ ಖ್ಯಾತ ಸ್ಟಾರ್ ನಟ ಅಮೀರ್ ಖಾನ್ ವಿಭಿನ್ನ ರೀತಿಯಲ್ಲಿ ಬಡವರ ನೆರವಿಗೆ ಬಂದಿರುವ ವಿಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಇನ್ನು ವೈರಲ್ ಆಗಿರುವ ಈ ವಿಡಿಯೋದಲ್ಲಿರುವಂತೆ ಅಮಿರ್ ಖಾನ್ ಯಾರಿಗೂ ತಿಳಿಯದಂತೆ, ಬಡವರಿಗೆಂದು ಕೊಡುವ ಹಿಟ್ಟಿನಲ್ಲಿ ಹಣ ಕೂಡ ಇತ್ತು ಸಹಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ದೆಹಲಿಯಲ್ಲರುವ ಸ್ಲಮ್ ಏರಿಯಾವೊಂದಕ್ಕೆ ನಟ ಅಮೀರ್ ಖಾನ್ ಏಪ್ರಿಲ್ ೨೩ರ ರಾತ್ರಿ 1ಕೇಜಿಯಂತೆ ಹಿಟ್ಟಿರುವ ಪ್ಯಾಕೆಟ್ ಗಳ ಟ್ರಕ್ ಕಳಿಸಿದ್ದಾರೆ. ಇನ್ನು ಈ ಟ್ರಕ್ ನ್ನ ಸ್ಲಂ ಏರಿಯಾದಲ್ಲಿ ನಿಲ್ಲಿಸಿದ ಡ್ರೈವರ್ ಅಲ್ಲಿದ್ದ ಜನರಿಗೆ ಲೈನ್ ನಲ್ಲಿ ಬಂದು ಹಿಟ್ಟನ್ನ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಜೊತೆಗೆ ಒಬ್ಬರಿಗೆ ಒಂದೇ ಪ್ಯಾಕೆಟ್ ಸಿಗೋದು ಎಂದು ಹೇಳಿದ್ದಾನೆ.

ಆದರೆ ಅನೇಕ ಜನರು ಒಂದು ಕೇಜಿ ಹಿಟ್ಟಕ್ಕೆ ಹೋಗಬೇಕಾ ಎಂದು ಹೋಗಲಿಲ್ಲ. ಆದರೆ ಇದೇ ವೇಳೆ ಆ ಒಂದು ಕೇಜಿ ಹಿಟ್ಟಿನ ಅವಶ್ಯಕತೆ ಇದ್ದವರು ಹೋಗಿ ಹಿಟ್ಟನ್ನ ತೆಗೆದುಕೊಂಡಿದ್ದಾರೆ. ಇನ್ನು ಈ ಹಿಟ್ಟನ್ನ ತೆಗೆದುಕೊಂಡು ಮನೆಗೆ ಹೋಗಿ ಆ ಹಿಟ್ಟಿನ ಪ್ಯಾಕೆಟ್ ತೆಗೆದು ನೋಡಿದಾಗ ಅಚ್ಚರಿಗೆ ಒಳಗಾಗಿದ್ದಾರೆ. ಹೌದು, ಪ್ರತೀ ಪ್ಯಾಕೆಟ್ ನ ಹಿಟ್ಟಿನೊಂದಿಗೆ ಬರೋಬ್ಬರಿ 15ಸಾವಿರಗಳ ಹಣವನ್ನ ಇಡಲಾಗಿತ್ತು. ಒಟ್ಟಿನಲ್ಲಿ ಇಲ್ಲಿ ಅಮೀರ್ ಖಾನ್ ಅವರ ಉದ್ದೇಶ ಸಫಲವಾಗಿತ್ತು. ಬಡವರಿಗೆ ಮಾತ್ರ ದೊರಕಲಿ ಎಂದು ಇಟ್ಟಿದ್ದ ಹಣ, ಬಡವರ ಕೈ ಸೇರಿತ್ತು.