ಬಟ್ಟೆ ಇಲ್ಲದೆ ಚಿಕಿತ್ಸೆ ನೀಡುತ್ತಿರುವ ವೈದ್ಯರು.ಇದರ ಹಿಂದಿರುವ ನೋವಿನ ಕತೆ ಏನ್ ಗೊತ್ತಾ?

News

ಚೀನಾದ ವುಹಾನ್ ನಗರದಲ್ಲಿ ಹುಟ್ಟಿದ ಮಹಾಮಾರಿ ಕೊರೋನಾ ಸೋಂಕು, ಇಡೀ ಜಗತ್ತಿನಾದ್ಯಂತ ಅರಡಿ ಪ್ರಪಂಚದ ಅನೇಕ ದೇಶಗಳು ನಿದ್ದೆಗೆಡುವಂತೆ ಮಾಡಿದೆ. ದಿನದಿಂದ ದಿನಕ್ಕೆ ಈ ಸೋಂಕಿನಿಂದ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇನ್ನು ಸಾಮಾಜಿಕ ಅಂತರವಷ್ಟೇ ಇದಕ್ಕೆ ತಕ್ಷಣದ ಮದ್ದಾಗಿದ್ದು, ಜಗತ್ತಿನ ಹಲವಾರು ದೇಶಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇನ್ನು ಕೊರೋನಾ ಯೋಧರು ಎಂದೇ ಕರೆಯುವ ಎಷ್ಟೋ ಮಂದಿ ಈ ಸೋಂಕಿನಿಂದ ಜೀವ ತೆತ್ತಿದ್ದಾರೆ. ಆದರೆ ನಮ್ಮನ್ನೆಲ್ಲಾ ರಕ್ಷಣೆ ಮಾಡಲು ನಿಂತಿರುವ ಜಗತ್ತಿನ ಅನೇಕ ದೇಶಗಳ ವೈದ್ಯರಿಗೆ ಸರಿಯಾದ ಸೌಲಭ್ಯಗಳಲ್ಲಿದೆ ಅವರೇ ಜೀವ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಜರ್ಮನಿಯ ಕೊರೋನಾ ವಾರಿಯರ್ಸ್ ವೈದ್ಯಕೀಯ ಸಿಬ್ಬಂದಿಗಳು ಉಚಿತ ಪಿಪಿಇ ಕಿಟ್ ಗಾಗಿ ವಿಚಿತ್ರ ರೀತಿಯ ವಿನೂತನ, ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದು ಅದು ಈಗ ವೈರಲ್ ಆಗಿದೆ. ಹಲವಾರು ದೇಶಗಳಲ್ಲಿ ಉಚಿತವಾಗಿ ಪಿಪಿಇ ಕಿಟ್ ಕೊಡಲಿಲ್ಲ ಎಂದು ವೈದ್ಯರು ತಮ್ಮ ಕೆಲಸವನ್ನೇ ಬಿಟ್ಟ್ಟಿರುವ ಘಟನೆಗಳು ನಡೆದಿವೆ.

ಆದರೆ ಜರ್ಮನಿ ವೈದ್ಯರು ಉಚಿತ PPE ಕಿಟ್ ಗಳಿಗಾಗಿ ವಿಭಿನ್ನ ಶಾಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೌದು, ಸರಕಾರದ ಗಮನಕ್ಕೆ ತರುವ ಸಲುವಾಗಿ ಜರ್ಮನ್ ವೈದ್ಯರು ತಾವು ಬಟ್ಟೆ ಇಲ್ಲದ ಫೋಟೋಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಪಿಪಿಇ ಕಿಟ್ ಗಳು ಇಲ್ಲದಿದ್ದರೆ ಇದೇ ಅನುಭವವಾಗುತ್ತದೆ ಎಂಬುದು ವೈದ್ಯರ ಮಾತಾಗಿದೆ.

ಪಿಪಿಇ ಕಿಟ್ ಗಳು ಇಲ್ಲದ ಹಿನ್ನಲೆಯಲ್ಲಿ ವೈದ್ಯೆಯೊಬ್ಬರು ಬಟ್ಟೆ ಇಲ್ಲದೆ ಟಾಯ್ಲೆಟ್ ಪೇಪರ್ ರೋಲ್ ಗಳನ್ನ ಮುಂದೆ ಇಟ್ಟು, ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮತ್ತೊಬ್ಬ ವೈದ್ಯರು ಯಾವುದೇ ರೀತಿಯ ಸೌಲಭ್ಯ ಸಾಧನಗಳಿಲ್ಲದೆ, ಕೊರೋನಾ ಸೋಂಕಿತರ ಚಿಕಿತ್ಸೆ ಮಾಡುವುದು ಬಟ್ಟೆ ಧರಿಸದಂತಯೇ ಕೆಲಸ ಮಾಡಿದ ಅನುಭವವಾಗುತ್ತದೆ ಎಂದು ಹೇಳಿದ್ದಾರೆ. ಹೀಗೆ ಜರ್ಮನ್ ನ ಒಬ್ಬೊಬ್ಬ ವೈದ್ಯರು ಒಂದೊಂದು ರೀತಿಯಲ್ಲಿ, ಪಿಪಿಇ ಕಿಟ್ ಗಳು ಸಿಗದ ಕಾರಣ ಪ್ರತಿಭಟನೆ ಮಾಡುತ್ತಿದ್ದಾರೆ.