ಮೊದಲ ಬಾರಿಗೆ ಮಗನ ಫೋಟೋ ರಿವೀಲ್ ಮಾಡಿದ ರಾಕಿಂಗ್ ಸ್ಟಾರ್ ದಂಪತಿ..

Cinema

ಕೆಜಿಎಫ್ ಹೀರೊ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಇದುವರೆಗೂ ತಮ್ಮ ಎರಡನೆಯ ಮಗುವಿನ ಫೋಟೋವನ್ನ ಯಾರಿಗೂ ತೋರಿಸಿರಲಿಲ್ಲ. ಎಷ್ಟೋ ಬಾರಿ ಅಭಿಮಾನಿಗಳು ಸಹ ಮಗುವಿನ ಮುಖ ತೋರಿಸಿ ಎಂದು ಬೇಡಿಕೆ ಇಟ್ಟಿದ್ದರೂ ಇದುವರೆಗೂ ಮಗುವಿನ ಫೋಟೋ ರಿವೀಲ್ ಮಾಡಿರಲಿಲ್ಲ.

ಈಗ ಜೂನಿಯರ್ ರಾಕಿಗೆ ಆರು ತಿಂಗಳು ತುಂಬಿದ್ದು ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ದಂಪತಿ ತಮ್ಮ ಮುದ್ದಾದ ಗಂಡು ಮಗುವಿನ ಫೋಟೋ ರಿವೀಲ್ ಮಾಡಿದ್ದಾರೆ. ಆದರೆ ಮಗುವಿನ ಸಂಪೂರ್ಣ ಫೋಟೋ ಇನ್ನು ರಿವೀಲ್ ಮಾಡಿಲ್ಲ. ಇನ್ನು ಏಪ್ರಿಲ್ ೩೦ಕ್ಕೆ ನಮ್ಮ ಎರಡನೇ ಮಗುವಿಗೆ ೬ ತಿಂಗಳು ತುಂಬಲಿದ್ದು ಅಂದೇ ಪೂರ್ತಿ ಫೋಟೋವನ್ನ ರಿವೀಲ್ ಮಾಡುವುದಾಗಿ ಹೇಳಿದ್ದಾರೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ರಿವೀಲ್ ಮಾಡಿರುವ ಫೋಟೋದಲ್ಲಿ ಎರಡನೇ ಅರ್ಧ ಮುಖದ ಜೊತೆಗೆ ಪುತ್ರಿ ಐರಾ ಕೂಡ ಇದ್ದಾಳೆ. ಇನ್ನು ಕೆಜಿಎಫ್ ಒಂದೇ ಒಂದು ಚಿತ್ರದಿಂದ ರಾಕಿಂಗ್ ಸ್ಟಾರ್ ಇಡೀ ಭಾರತದಾದ್ಯಂತ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಹೀಗಾಗಿ ರಾಕಿಂಗ್ ದಂಪತಿಗಳು ಎರಡನೇ ಮಗನ ಅರ್ಧ ಮುಖದ ಫೋಟೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಯಶ್ ಮಗನ ಫೋಟೋ ನೋಡಲು ಕಾತುರರಾಗಿ ಕಾಯುತ್ತಿದ್ದಾರೆ.