ಡಿಬಾಸ್ ದರ್ಶನ್ ಅವರಿಗಾಗಿ ಕಾಯುತ್ತಿದೆ ಮಂಡ್ಯ ಬಸವ.?

Cinema
Advertisements

ಕಳೆದ ವರ್ಷ ತಾನೇ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಷ್ ರವರು ಪಕ್ಷೇತರ ಪಕ್ಷದಿಂದ ಸ್ಪರ್ಧಿಸಿ ಅತೀ ಹೆಚ್ಚು ಮತಗಳಿಂದ ಗೆದ್ದಿದ್ದರು. ಇನ್ನು ಇದೇ ವೇಳೆ ಸುಮಲತಾರವರ ಪರ ಪ್ರಚಾರ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಅಂಬರೀಷ್ ರವರನ್ನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Advertisements

ಮಂಡ್ಯ ಜಿಲ್ಲೆಯ ಪ್ರತೀ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಿದ್ದ ದರ್ಶನ್ ರವರು ಕೆ ಆರ್ ನಗರದ, ಕಾಳಮ್ಮ ಕೊಪ್ಪಲು ಊರಿನ ಬಸವನನ್ನ ಮಾತನಾಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಹೌದು, ಆಗ ದರ್ಶನ್ ಅವರು ಹೋಗುತ್ತಿದ್ದ ಪ್ರಚಾರ ವಾಹನಕ್ಕೆ ಅಡ್ಡಬಂದಿದ್ದ ಬಸವ, ಸ್ವತಃ ದರ್ಶನ್ ರವರೇ ಹೋಗಿ ಬಸವನ ಮೈ ಉಜ್ಜುವವರೆಗೂ ಅಲ್ಲಿಂದ ಕದಿಲಿರಲಿಲ್ಲ.

ಆದರೆ ಈಗ ಅದೇ ಬಸವನಿಗೆ ಕಾಲು ಮುರಿದಿದ್ದು, ಚಿಕಿತ್ಸೆ ನೀಡಿದ್ದರೂ ಸಹ ಬಸವನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿಲ್ಲವಂತೆ. ಇನ್ನು ಬಸವನ ನರಳಾಟ ಕಂಡು ಆ ಊರಿನ ಜನರು ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪ್ರಚಾರದ ಸಂಧರ್ಭದಲ್ಲಿ ದರ್ಶನ್ ಅವರ ಮಾತು ಕೇಳಿ ದಾರಿ ಬಿಟ್ಟಿತ್ತು, ಹಾಗಾಗಿ ಈಗ ನಟ ದರ್ಶನ್ ರವರು ಬಂದು ಬಸವನನ್ನ ಮಾನಾಡಿಸಿದ್ರೆ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವ ಸಾಧ್ಯತೆಗಳಿವೆ ಎಂದು ಆ ಊರಿನ ಜನರು ಹೇಳುತ್ತಿದ್ದಾರೆ.