ಕಾಳಮ್ಮನಕೊಪ್ಪಲು ಜನರು ಮಾಡಿದ್ದ ಮನವಿಗೆ ದರ್ಶನ್ ಮಾಡಿದ್ದೇನು ನೋಡಿ.?

Cinema
Advertisements

ಕಳೆದ ವರ್ಷ ತಾನೇ ನಡೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ರವರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮಂಡ್ಯದ ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದರು. ಇದೇ ವೇಳೆ ಕೆ.ಆರ್.ಪೇಟೆ ತಾಲ್ಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಆ ಗ್ರಾಮದ ಜನರು ತುಂಬಾ ಇಷ್ಟಪಡುವ ದರ್ಶನ್ ಅವರಿದ್ದ ವಾಹನಕ್ಕೆ ಅದ್ದವಾಗಿ ಬಂದು ನಿಂತಿತ್ತು. ಜನ ಎಷ್ಟೇ ಕಿರುಚಾಡಿದರು, ಏನೇ ಮಾಡಿದ್ರು ಬಸವ ಆ ಜಾಗವನ್ನ ಬಿಟ್ಟು ಕದಲ್ಲಿಲ್ಲ.

Advertisements

ಆಗ ಸ್ವತಃ ದರ್ಶನ್ ರವರೆ ವಾಹನದಿಂದ ಇಳಿದು ಬಂದು ಅದರ ಮೈದಡವಿದಾಗ ಆ ಜಾಗ ಬಿಟ್ಟು ಕದಲಿದೆ. ಈಗ ಇತ್ತೀಚೆಗಷ್ಟೇ ಇದೇ ಬಸವ ಕಾಲು ಮುರಿದುಕೊಂಡಿದ್ದು, ಚಿಕಿತ್ಸೆ ನೀಡಿದರೂ ಸಹ ಬಸವನ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಇನ್ನು ಈ ಗ್ರಾಮದ ಜನರು ಬಸವನ ನರಳಾಟವನ್ನ ನೋಡಲಾಗದೆ, ದರ್ಶನ್ ರವರುಬಂದು ಒಂದು ಬಾರಿ ಮಾತನಾಡಿಸಿದ್ರೆ, ಬಸವನ ಆರೋಗ್ಯದಲ್ಲಿ ಚೇತರಿಕೆಯಾಗುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ವಿಡಿಯೋ ಮೂಲಕ ದರ್ಶನ್ ರವರಲ್ಲಿ ಮನವಿ ಮಾಡಿಕೊಂಡಿದ್ದರು.

ಈಗ ಈ ಸುದ್ದಿ ದರ್ಶನ್ ರವರವರೆಗೂ ತಲುಪಿದ್ದು, ಬಸವನ ನರಲಾಟವನ್ನ ನೋಡಲಾಗದ ಪ್ರಾಣಿಪ್ರಿಯರಾದ ದಾಸ ತನ್ನ ಸ್ನೇಹಿತರ ಜೊತೆಗೆ ಪಶು ವೈದ್ಯರನ್ನ ಕಾಳಮ್ಮನ ಕೊಪ್ಪಲು ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈಗ ವೈದ್ಯರ ಮೂಲಕ ಬಸವನಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಬಸವ ಬೇಗ ಆರೋಗ್ಯವಂತನಗಳು ಬೇಕಾದ ಎಲ್ಲಾ ಸೌಲಭ್ಯಗಳನ್ನ ಮಾಡಿಕೊಟ್ಟಿದ್ದಾರೆ.

ಇನ್ನು ಬಸವನ ಕುರಿತು ದರ್ಶನ್ ರವರಲ್ಲಿ ಮನವಿ ಮಾಡಿಕೊಂಡಿದ್ದ ಕಾಳಮ್ಮನ ಕೊಪ್ಪಲು ಗ್ರಾಮಸ್ಥರು, ಇಷ್ಟು ಬೇಗ ತಮ್ಮ ಮನವಿಗೆ ಸ್ಪಂದಿಸಿದ ದರ್ಶನ್ ರವರ ಮಾನವೀಯತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ಚಾಲೆಂಜಿಂಗ್ ಸ್ಟಾರ್ ಗೆ ಜಯಕಾರ ಹಾಕಿದ್ದಾರೆ.