Advertisements
ಇಡೀ ಭಾರತದಾದ್ಯಂತ ಲಾಕ್ ಡೌನ್ ಮೇ ೧೭ರವರೆಗೆ ಮುಂದುವರೆದಿದ್ದರೂ, ಲಾಕ್ ಡೌನ್ ಸಡಿಲ ಮಾಡಿರುವ ರಾಜ್ಯ ಸರ್ಕಾರ ವಿವಿಧ ವಿಭಾಗಗಳಲ್ಲಿ ಹಲವಾರು ವಿನಾಯತಿಗಳನ್ನ ನೀಡಿದೆ. ಇನ್ನು ಸರ್ಕಾರ ವಿನಾಯತಿ ಕೊಟ್ಟಿರುವ ಹಿನ್ನಲೆಯಲ್ಲಿ ವಿವಿಧ ಕಡೆ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗಿವೆ.

Advertisements
ಇನ್ನು ಬೆಂಗಳೂರು ನಗರ ರೆಡ್ ಜೋನ್ ನಲ್ಲಿದ್ದರೂ ಗಾರ್ಮೆಂಟ್ಸ್ ಕಾರ್ಖಾನೆಗಳನ್ನ ತೆಗೆಯಲು ಸರ್ಕಾರ ಪರ್ಮಿಷನ್ ನೀಡಿದೆ. ಗಾರ್ಮೆಂಟ್ಸ್ ಕಂಪೆನಿಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಜನ ನೌಕರರಿಗೆ ಈಗ ನಿಟ್ಟುಸಿರು ಬಿಡುವಂತಾಗಿದೆ.

ಇನ್ನು ಲಾಕ್ ಡೌನ್ ನಿಯಮಗಳನ್ನ ಅನುಸರಿಸಿ ಶೇ ೩೩ರಷ್ಟು ಕಾರ್ಮಿಕರನ್ನ ಉಪಯೋಗಿಸಿಕೊಂಡು ಕಾರ್ಯನಿರ್ವಹಿಸಲು ರಾಜ್ಯಸರ್ಕಾರದಿಂದ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಉಪಯೋಗಿಸುವುದು ಖಡ್ಡಾಯವಾಗಿದೆ.