ಲಾಕ್ ಡೌನ್ ವೇಳೆ ಹೆದ್ದಾರಿಯಲ್ಲಿ ಕುದುರೆ ಸವಾರಿ ಮಾಡಿದ ಶಾಸಕನ ಪುತ್ರ-ಸಾರ್ವಜನಿಕರಿಂದ ಆಕ್ರೋಶ

News
Advertisements

ಕೊರೋನಾ ಹಬ್ಬುತ್ತಿರುವ ಹಿನ್ನಲೆಯಲ್ಲಿ ಇಡೀ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇನ್ನು ಅಗತ್ಯವಸ್ತುಗಳು ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮನೆಯಿಂದ ಹೊರಬರಬಹುದಂತಾಗಿದೆ. ಇನ್ನು ಸಾಮಾಜಿಕ್ ಅಂತರ, ಮುಖಕ್ಕೆ ಮಾಸ್ಕ್ ಖಡ್ಡಾಯವಾಗಿದೆ.

Advertisements

ಇನ್ನುಸರಕಾರದ ನಿಯಮಗಳು ಬಡವನಿಂದ ಹಿಡಿದು ಶ್ರೀಮಂತನವರಿಗೂ ಎಲ್ಲರಿಗೂ ಒಂದೇ. ಏಕೆಂದರೆ ಕೊರೋನಾಗೆ ಬಡವ, ಶ್ರೀಮಂತನೆಂಬ ಭೇದವಿಲ್ಲ. ಇನ್ನು ಲಾಕ್ ಡೌನ್ ಇರುವುದರಿಂದ ಅನೇಕರು ಒಂದೊತ್ತಿನ ಊಟಕ್ಕೂಪರದಾಡುತ್ತಿದ್ದಾರೆ. ಆದರೆ ಇದರ ನಡುವೆ ಕೆಲವರು ಮೋಜು ಮಸ್ತಿಯಲ್ಲಿ ತೊಡಗಿರುವುದು, ಲಾಕ್ ಡೌನ್ ನಿಯಮಗಳನ್ನ ಗಾಳಿಗೆ ತೂರಿರುವುದು ಬೇಜಾರಿನ ಸಂಗತಿ.

ಹೌದು, ಚಾಮರಾಜನಗರದ ಗುಂಡ್ಲು ಪೇಟೆಯ ಬಿಜೆಪಿ ಶಾಸಕರಾಗಿರುವ ನಿರಂಜನ್ ಕುಮಾರ್ ಅವರ ಪುತ್ರ ಭುವನ್ ಕುಮಾರ್ ಎಂಬುವವರು ಗುಂಡ್ಲು ಪೇಟೆಯ ಕೇರಳದ ಹೆದ್ದಾರಿಯಲ್ಲಿ ಕುದುರೆ ಓಡಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾಸ್ಕ್ ಕೂಡ ಧರಿಸದೇ ಹೆದ್ದಾರಿಯಲ್ಲಿ ಕುದುರೆ ಸವಾರಿ ಮಾಡಿರುವ ಶಾಸಕರ ಪುತ್ರ ಮೋಜು ಮಸ್ತಿಯಲ್ಲಿತೊಡಗಿದ್ದಾನೆ.

ಶಾಸಕನ ಪುತ್ರನಾದ ಮಾತ್ರಕ್ಕೆ ಏನಾದರು ಮಾಡಬಹುದೇ. ಲಾಕ್ ಡೌನ್ ನಿಯಮಗಳು ಇವರಿಗೆ ಅನ್ವಯವಾಗುದಿಲ್ಲವೇ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸ್ನೇಹಿತರೆ ಲಾಕ್ ಡೌನ್ ವೇಳೆ ಶಾಸಕನ ಪುತ್ರ ಮಾಡಿದ ಈಕೆಲಸದ ಬಗ್ಗೆ ನೀವೇನು ಹೇಳುವಿರಿ..ಕಾಮೆಂಟ್ ಮಾಡಿ ತಿಳಿಸಿ..