ವೈರಲ್ ಆಯ್ತು ಟೀಮ್ ಇಂಡಿಯಾ ಮಾಜಿ ನಾಯಕನ ಫೋಟೋ ! ಆದ್ರೆ ಧೋನಿಯ ತಾಯಿ ಹೇಳಿದ್ದೆ ಬೇರೆ?

News Sports

ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಆಟಗಾರರಲ್ಲಿ ಒಬ್ಬರಾದ ಟೀಮ್ ಇಂಡಿಯಾದ ಮಾಜಿ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಕಳೆದ ಹತ್ತು ತಿಂಗಳುಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ. ೨೦೧೯ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿ ಬ್ಯಾಟ್ ಹಿಡಿದಿದ್ದ ಧೋನಿ ಬಳಿಕ ೨೦೨೦ರ ಐಪಿಎಲ್ ಟೂರ್ನಿಗೆ ತರಭೇತಿ ಪಡೆಯುತ್ತಿರುವ ವೇಳೆ ಕ್ರಿಕೆಟ್ ಬ್ಯಾಟ್ ನೊಂದಿಗೆ ಕಾಣಿಸಿಕೊಂಡಿದ್ದರು ಮಾಜಿ ಕೂಲ್ ಕ್ಯಾಪ್ಟನ್.

ಆದರೆ ಈಗ ಕೊರೋನಾ ಕಾರಣದಿಂದಾಗಿ ಲಾಕ್ ಡೌನ್ ಆಗಿರುವ ಕಾರಣ ತನ್ನ ಮಗಳೊಂದಿಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಧೋನಿ. ಕೆಲವು ದಿನಗಳ ಹಿಂದಷ್ಟೇ ಧೋನಿ ಒಂದು ವಿಡಿಯೋವನ್ನ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಮಾಡಿದ್ದು ಅದು ಸಾಕಷ್ಟು ವೈರಲ್ ಆಗಿತ್ತು. ಇನ್ನು ಆ ವಿಡಿಯೋದಲ್ಲಿ ತನ್ನ ಮನೆಯ ಗಾರ್ಡನ್ ಜಾಗದಲ್ಲಿ ಮಗಳೊಂದಿಗೆ ಆಟವಾಡುತ್ತಾ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದ ಧೋನಿ ಬಗ್ಗೆ ಬೇರೆಯೊದೊಂದು ಚರ್ಚೆಗಳು ಶುರುವಾಗಿವೆ.

ಹೌದು, ಈ ವಿಡಿಯೋ ನೋಡಿದವರು ಧೋನಿಯ ವಯಸ್ಸಿನ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಇದನ್ನೆಲ್ಲಾ ಗಮನಿಸಿರುವ ಧೋನಿಯವರ ತಾಯಿ ದೇವಕಿ ದೇವಿಯವರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಮಗನ ಹೊಸ ಲುಕ್ ನೋಡಿದ್ದೇನೆ. ಆದರೆ ಅಷ್ಟೇನೂ ವಯಸ್ಸಾಗಿದೆ ಅಂತ ಅನ್ನಿಸುವುದಿಲ್ಲ.

ಆದರೆ ತಾಯಿಯಾದವಳಿಗೆ ತನ್ನ ಮಗನಿಗೆ ವಯಸ್ಸಾಗಿಲ್ಲ ಅಂತ ಅನ್ನಿಸಬಹುದೇನೋ? ಇನ್ನು ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನನ್ನ ಮಗ ಆಡುತ್ತಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ತೊಲಗಬೇಕಿದೆ ಎಂದು ಧೋನಿ ತಾಯಿ ಹೇಳಿದ್ದಾರೆ.