ಬೆಸ್ಟ್ ಆಫರ್ ಜೊತೆಗೆ REDMI NOTE 9 PRO MAX ಪೋನ್ ಕೊಳ್ಳಲು ಉತ್ತಮ ಅವಕಾಶ

News

ಇಂದು ಮೊದಲನೆಯ ದಿನ Xiaomi ಕಂಪನಿಯ ಲೇಟೆಸ್ಟ್ ಸ್ಮಾರ್ಟ್ಫೋನ್ ಆಗಿರುವ Redmi Note 9Pro Max ಭಾರತದ ಮಾರುಕಟ್ಟೆಯಲ್ಲಿ ಸೇಲ್ ಆಗಿದೆ ಇನ್ನು ಈ ಫೋನ್ ಖರೀದಿ ಮಾಡುವ ಗ್ರಾಹಕರಿಗೆ ಆಕರ್ಷಕವಾದ ಆಫರ್ಗಳು ಕೂಡ ಸಿಗಲಿದೆ ಇನ್ನು ಲಾಕ್ ಕಾರಣ ಗ್ರೀನ್ ಮತ್ತು ಆರೆಂಜ್ ಜೋನ್ ಗಳಲ್ಲಿ ಮಾತ್ರ ಡಿಲೆವರಿಗೆ ಅವಕಾಶ ಇದೆ. ಮಾರ್ಚ್ ತಿಂಗಳಿನಲ್ಲೇ ಮಾರುಕಟ್ಟೆಗೆ ಬರಬೇಕಾಗಿದ್ದ ಪೋನ್ ನ್ನ ಕೊರೊನಾ ಕಾರಣದಿಂದ ರದ್ದು ಮಾಡಲಾಗಿತ್ತು.

ರೆಡ್ಮಿ ನೋಟ್ 9 ಪ್ರೋ ಮ್ಯಾಕ್ಸ್ ನ ಬೆಲೆ ಎಷ್ಟು ನೋಡಿ

ಈ ಸ್ಮಾರ್ಟ್ ಪೋನ್ 4Gb ರ್ಯಾಮ್ ಜೊತೆಗೆ 64Gb ಸ್ಟೋರೇಜ್, 6Gb ರ್ಯಾಮ್ ಜೊತೆಗೆ 128Gb ಸ್ಟೋರೇಜ್, ಹಾಗೂ 8Gb ರ್ಯಾಮ್ ಜೊತೆಗೆ 128Gb ಸ್ಟೋರೇಜ್, ಹೊಂದಿರುವ ವೆರೈಟಿ ಪೋನ್ ಗಳು ಸಿಗಲಿವೆ. ಇನ್ನು ಈ ಪೋನಿನ ಬೆಲೆಗೆ ಬಂದರೆ ಕ್ರಮವಾಗಿ 14,999 ರೂ, 16,999 ರೂ, ಹಾಗೂ 18,999 ರೂಗಳಲ್ಲಿ ಈ ಪೋನ್ ಲಭ್ಯವಿದ್ದು ಅಮೆಜಾನ್ ಹಾಗೂ ಎಮ್ಐ ಆನ್ ಲೈನ್ ಸ್ಟೋರ್ ಗಳಲ್ಲಿ ಖರೀದಿ ಮಾಡಬಹುದಾಗಿದೆ. ಇನ್ನು ಈ ಪೋನ್ ಖರೀದಿ ಮಾಡುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಜೊತೆಗೆ ಡಿಸ್ಕೌಂಟ್ ಸಿಗಲಿದ್ದು EMI ಕೂಡ ಲಭ್ಯವಿದೆ.

ಇನ್ನು 6.67 ಇಂಚ್ ಪುಲ್ HD ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ರೆಡ್ ಮಿ ನೋಟ್ 9 ಪ್ರೋನಲ್ಲಿರುವಂತೆ ನಾಲ್ಕು ರೇರ್ ಕ್ಯಾಮರಾಗಳನ್ನ ಹೊಂದಿದ್ದು ಇದರಲ್ಲಿ ಒಂದು ಕ್ಯಾಮರಾ 64 ಮ್ಯಗಾ ಫಿಕ್ಸಲ್,ಎರಡನೇಯದು 8 ಮೆಗಾ ಫಿಕ್ಸಲ್ ಆಲ್ಟ್ರಾ ವೈಡ್ ಹಾಗೂ ಮೂರನೆಯ ಕ್ಯಾಮೆರಾ 5 ಮೆಗಾ ಫಿಕ್ಸಲ್ ಮೈಕ್ರೋ ಲೆನ್ಸ್ ಹಾಗೂ ನಾಲ್ಕನೆಯ ಕ್ಯಾಮೆರಾ 2 ಮೆಗಾ ಫಿಕ್ಸಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇನ್ನು ಈ ಪೋನ್ ನಲ್ಲಿ 32 ಮೆಗಾ ಫಿಕ್ಸಲ್ ನ ಪ್ರೆಂಟ್ ಕ್ಯಾಮೆರಾ ಇದೆ. ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 720G ಪ್ರೋಸೆಸರ್ ಸಪೋರ್ಟ್ ಈ ಸ್ಮಾರ್ಟ್ ಫೋನ್ ನಲ್ಲಿದೆ.ಇನ್ನು ಇದರೆಲ್ಲದರ ಜೊತೆಗೆ ಗೊರಿಲ್ಲಾ ಗ್ಲಾಸ್ 5ನ ಪ್ರೊಟೆಕ್ಷನ್ ಕೂಡ ಇದರಲ್ಲಿದೆ.

ಇನ್ನು ಬ್ಯಾಟರಿ ವಿಷಯಕ್ಕೆ ಬಂದ್ರೆ 5020MAHನ ಬ್ಯಾಟರಿ ಹೊಂದಿದ್ದು ಇದರ ಜೊತೆಗೆ ಬಾಕ್ಸ್ ನಲ್ಲಿ 33ವ್ಯಾಟ್ ನ ಪಾಸ್ಟ್ ಚಾರ್ಜರ್ ಕೂಡ ಸಿಗಲಿದೆ.