ಕರ್ನಾಟಕದ ವಲಸೆ ಕಾರ್ಮಿಕರ ಸಂಕಷ್ಟ ನೋಡಲಾರದೆ ಈ ನಟ ಮಾಡಿದ್ದೇನು ನೋಡಿ?

Cinema
Advertisements

ಕೊರೋನಾ ಹಿನ್ನಲೆ ಲಾಕ್ ಡೌನ್ ನಿಂದಾಗಿ ನಮ್ಮ ಕರ್ನಾಟಕದ ನೂರಾರು ವಲಸೆ ಕಾರ್ಮಿಕರು ಮಹಾರಾಷ್ಟ್ರದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಬಸ್ ಗಳಿಲ್ಲದೆ ವಯಸ್ಸಾದವರು, ಪುಟ್ಟ ಪುಟ್ಟ ಮಕ್ಕಳು, ಹೆಂಗಸರು ವಯಸ್ಸಿನ ಭೇದವಿಲ್ಲದೆ ತಮ್ಮ ಊರುಗಳನ್ನ ಸೇರಿಕೊಳ್ಳಲು ನಡೆದುಕೊಂಡೇ ಹೋಗುತಿದ್ದರು.

Advertisements

ಈಗ ಇದನ್ನ ಗಮನಿಸಿರುವ ಕನ್ನಡದ ವಿಷ್ಣುವರ್ಧನ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇನ್ನು ಇದರ ಬಗ್ಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆ ಮಾತಾನಾಡಿರುವ ನಟ ಸೋನು ಸೂದ್ ಮಹಾರಾಷ್ಟ್ರ ಥಾಣೆಗೆ ಬಂದಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರನ್ನು ಅವರ ಊರಿಗೆತಲುಪಿಸಲು ಅನುಮತಿ ಪಡೆದುಕೊಂಡಿದ್ದು, ತಮ್ಮದೇ ಸ್ವಂತ ಖರ್ಚಿನಲ್ಲಿ ಹತ್ತು ಬಸ್ ಗಳ ವ್ಯವಸ್ಥೆ ಮಾಡಿದ್ದಾರೆ.

ಇನ್ನು ತಾವೇ ಮುಂದೆ ನಿಂತ ಸೋನು ಸೂದ್ ಮಹಾರಾಷ್ಟ್ರದ ಥಾಣೆಯಿಂದ ಕಲ್ಬುರ್ಗಿಗೆ ವಲಸೆ ಕಾರ್ಮಿಕರನ್ನ ಕಳುಹಿಸಿಕೊಟ್ಟಿದ್ದಲ್ಲದೆ, ಅವರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮರೆದಿರುವ ಸೋನು ಸೂದ್ ಕನ್ನಡಿಗರ ಬಗ್ಗೆ ಕಾಳಜಿ ಮೆರೆದಿದ್ದಾರೆ. ಇನ್ನು ಇದ್ರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್ ಪ್ರತಿಯೊಬ್ಬರೂ ಸಹ ತಮ್ಮ ಕುಟುಂಬದೊಂದಿಗೆ ಇರಲು ಇಷ್ಟಪಡುತ್ತಾರೆ.

ಇನ್ನು ಲಾಕ್ ಡೌನ್ ಕಾರಣ ವಯಸ್ಸಾದವರು, ಪುಟ್ಟ ಮಕ್ಕಳು, ರಸ್ತೆಗಳಲ್ಲಿ ನಡೆದುಕೊಂಡು ತಮ್ಮ ಊರಿಗೆ ತೆರಳುತ್ತಿರುವದನ್ನ ನೋಡಿ ನನಗೆ ನೋವಾಗಿದ್ದು ಎರಡು ರಾಜ್ಯಗಳ ಸರ್ಕಾರಗಳೊಂದಿಗೆ ಮಾತನಾಡಿ ಅವರನ್ನ ಊರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಸೋನು ಹೇಳಿದ್ದಾರೆ. ಒಟ್ಟಿನಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗ ಕಾರ್ಮಿಕರ ಬಗ್ಗೆ ಕಾಳಜಿ ತೋರಿದ ನಟ ಸೋನು ಸೂದ್ ರವರಿಗೆ ನಮ್ಮ ಕನ್ನಡಿಗರು ಹ್ಯಾಟ್ಸಾಪ್ ಹೇಳಲೇಬೇಕು.