ಮಾರುಕಟ್ಟೆಗೆ ಎಂಟ್ರಿ ಕೊಟ್ಟ NOKIA ಕಂಪನಿಯ 2 ಸೂಪರ್ ಫೀಚರ್ ಮೊಬೈಲ್ ! ಬೆಲೆ ಎಷ್ಟು ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ?

Kannada News

ಎಚ್‌ಎಂಡಿ ಗ್ಲೋಬಲ್ ನವರು ನೋಕಿಯಾ 125 ಮತ್ತು ನೋಕಿಯಾ 150ಯ ಎರಡು ಹೊಸ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಡ್ಯುಯಲ್ ಸಿಮ್ ಸ್ಲಾಟ್, ಫ್ಲ್ಯಾಷ್ ಲೈಟ್ ಮತ್ತು 4 ಎಂಬಿ RAMನ ಸಪೋರ್ಟ್ ಈ ಫೋನ್ ಗಳಲ್ಲಿ ಇದೆ. ಇನ್ನು ಇದಕ್ಕೂ ಮೊದಲೇ ಈ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಫೋನ್ ಗಳನ್ನ ಬಿಡುಗಡೆಮಾಡಿದ್ದು ಜನ ಕೂಡ ಇಷ್ಟಪಟ್ಟಿದ್ದಾರೆ. ಹಾಗಾದ್ರೆ ನೋಕಿಯಾ 125 ಮತ್ತು ನೋಕಿಯಾ 150 ಫೋನ್ ಗಳಲ್ಲಿರುವ ಫೀಚರ್ಸ್ ಹಾಗೂ ಫೋನ್ ಬೆಲೆ ಬಗ್ಗೆ ತಿಳಿಯೋಣ ಬನ್ನಿ..

ನೋಕಿಯಾ 125 ಮತ್ತು ನೋಕಿಯಾ 150 ಫೀಚರ್ ಫೋನ್‌ಗಳ ಬೆಲೆಯನ್ನು ಎಚ್‌ಎಂಡಿ ಗ್ಲೋಬಲ್ ಕಂಪನಿ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಎರಡೂ ಫೋನ್ ಗಾಲ ಬೆಲೆ ನಿಮ್ಮ ಬಜೆಟ್ ನ ವ್ಯಾಪ್ತಿಯಲ್ಲೇ ಇರುತ್ತದೆ ಎಂದು ಹೇಳಲಾಗಿದೆ.

ನೋಕಿಯಾ 125 ಫೋನ್ ನ ಸ್ಪೆಸಿಫಿಕೇಷನ್ಸ್ ಇನ್ನು ನೋಕಿಯಾ 125 ಫೋನ್ ಕ್ಯೂವಿಜಿಎ ಬಣ್ಣದ ಡಿಸ್ಪ್ಲೇ ಹೊಂದಿದ್ದು, ಜೊತೆಗೆ ಟೈಪಿಂಗ್ ಮಾಡಲು ಸುಲಭವಾಗಲಿ ಎಂದು ದೊಡ್ಡ ಗಾತ್ರದ ಬಟನ್ ಗಳು ಈ ಮೊಬೈಲ್ ನಲ್ಲಿವೆ. ಇನ್ನು ಈ ಫೀಚರ್ ಫೋನ್ 4mb ರ್ಯಾಮ್ ಜೊತೆ 4mb ಸ್ಟೋರೇಜ್ ನ್ನ ಹೊಂದಿದೆ. ವೈರ್ಲೆಸ್ ರೇಡಿಯೊ ಜೊತೆಗೆ ಎಲ್ಇಡಿ ಫ್ಲ್ಯಾಷ್ ಲೈಟ್ ತಂತ್ರಜ್ನ್ಯಾನ ಕೂಡ ಈ ಫೀಚರ್ ಫೋನ್ ನಲ್ಲಿದೆ.

ಇನ್ನು ನೋಕಿಯಾ 125 ಫೀಚರ್ ಫೋನ್ 1,020MAH ಬ್ಯಾಟರಿ ಹೊಂದಿದ್ದು, 19 ರಿಂದ 20 ಗಂಟೆಗಳ ಕಾಲ ಬ್ಯಾಟರಿ ಬ್ಯಾಕಪ್ ಬರಲಿದೆ ಎಂದು ಕಂಪನಿ ಹೇಳಿದೆ. ಇನ್ನು ಈ ಫೋನ್ ನಲ್ಲಿ ಎರಡು ಸಿಮ್ ಗಳನ್ನ ನೀವು ಉಪಯೋಗಿಸಬಹುದಾಗಿದೆ.

ನೋಕಿಯಾ 150 ಫೋನ್ ನ ಸ್ಪೆಸಿಫಿಕೇಷನ್ಸ್ : ನೋಕಿಯಾ 150 ಫೀಚರ್ ಫೋನ್ 2.4 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೀಚರ್ ಫೋನ್ ನಲ್ಲಿ ನೋಕಿಯಾ 125 ತರಹದ ಸೂಪರ್ ಕೀಪ್ಯಾಡ್ ಅನ್ನು ಕೊಡಲಾಗಿದೆ. ಇದಲ್ಲದೆ, ಈ ಫೋನ್ಗೆ‌ 4 ಎಂಬಿ ಸ್ಟೋರೇಜ್ ನೊಂದಿಗೆ 4 ಎಂಬಿ RAM ನ ಸಪೋರ್ಟ್ ಕೂಡ ನೀಡಲಾಗಿದೆ.ಇದರ ಜೊತೆಗೆ 30+ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಈ ಫೋನ್ ಹೊಂದಿದೆ.

ಕಂಪನಿ, ಬಳಕೆದಾರರಿಗೆ ಈ ಫೀಚರ್ ಫೋನ್‌ನಲ್ಲಿ 1,020 mAh ಬ್ಯಾಟರಿಯ ಸೌಲಭ್ಯ ನೀಡಿದೆ. ಅಲ್ಲದೆ, ಈ ಫೀಚರ್ ಫೋನ್‌ನಲ್ಲಿ ಬಳಕೆದಾರರು MP3 ಪ್ಲೇಯರ್ ಜೊತೆಗೆ ವೈರ್‌ಲೆಸ್ ರೇಡಿಯೊದ ಸಪೋರ್ಟ್ ಕೂಡ ಇದೆ. ಇದಲ್ಲದೆ ಈ ಫೀಚರ್ ಫೋನ್‌ನಲ್ಲಿ ವಿಜಿಎ ​​ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.