ಕೇವಲ 6ತಿಂಗಳಲ್ಲಿ ಇನ್ಸ್ಟಾಗ್ರಾಮ್ ಖಾತೆ ಮೂಲಕ ಬರೋಬ್ಬರಿ 80ಲಕ್ಷ ದುಡಿದ 20ವರ್ಷದ ಯುವಕ ! ಹೇಗೆ ಗೊತ್ತಾ ?

Inspire

ಸ್ನೇಹಿತರೇ, ಇದು ಇಂಟರ್ನೆಟ್ ಯುಗ. ಮುಂದುವರಿಂದ ತಂತ್ರಜ್ನ್ಯಾದ ಈ ಯುಗದಲ್ಲಿ ಬುದ್ಧಿಯೊಂದಿದ್ದರೆ ಲಕ್ಷಾಂತರ ಹಣ ಗಳಿಸುವ ಅವಕಾಶಗಳು ಇವೆ. ಇನ್ನು ಈಗಂತೂ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಹಾಗೂ ಟ್ವಿಟ್ಟರ್ ಗಳು ಪ್ರಬಲವಾದ ಎಲೆಕ್ಟಾನಿಕ್ ಮಾಧ್ಯಮಗಳಾಗಿದ್ದು ಕೋಟ್ಯಂತರ ಜನ ತಮ್ಮ ಫೋಟೋ ವಿಡಿಯೊಗಳನ್ನ ಇವುಗಳ ಮೂಲಕ ಹಂಚಿಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಗಾಗಿ ಖಾತೆ ತೆರೆಯುವ ಅನೇಕರು ಅದೇ ಸೋಷಿಯಲ್ ಮಿಡಿಯಾಗಳಿಂದ ಲಕ್ಷಾಂತರ ಹಣಗಳಿಸುವಷ್ಟರ ಎತ್ತರಕ್ಕೆ ಬೆಳೆಯುತ್ತಾರೆ. ಇನ್ನು ಪಕ್ಕದ ಆಂಧ್ರಪ್ರದೇಶ ಕೇವಲ ೨೦ ವರ್ಷದ ಈ ಯುವಕ ಕೂಡ ಮಾಡಿದ್ದು ಅದನ್ನೇ. ಸಾಮಾಜಿಕ ಜಾಲತಾಣಗಳನ್ನ ಕೇವಲ ಮನರಂಜನೆಗೆ ಮಾತ್ರ ಉಪಯೋಗಿಸುವುದು ಮಾತ್ರವಲ್ಲ ಬುದ್ದಿ ಉಪಯೋಗಿಸಿದ್ರೆ ಅವುಗಳಿಂದ ಲಕ್ಷಾಂತರ ಹಣ ದುಡಿಯಬಹುದು ಎಂಬುದನ್ನ ಈ ಯುವಕ ತೋರಿಸಿಕೊಟ್ಟಿದ್ದಾನೆ.

ಇನ್ನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಈ ಯುವಕನ ಹೆಸರು ಅವಿನಾಶ್ ಎಂದು. ಇನ್ನು ಈತ ಎಲ್ಲರಂತೆ ಇನ್ಸ್ಟಾಗ್ರಾಮ್ ನಲ್ಲಿ ತನ್ನದೊಂದು ಅಕೌಂಟ್ ನ್ನ ಓಪನ್ ಮಾಡಿದ್ದು, ಹೆಚ್ಚಾಗಿ ಫಾಲ್ಲೋರ್ಸ್ ಬರಲೆಂದು ತನ್ನ ತಲೆ ಉಪಯೋಗಿಸಿ ಉಪಾಯವೊಂದನ್ನ ಮಾಡುತ್ತಾನೆ. ಅದರಂತೆ ತಾನು ಪೋಸ್ಟ್ ಮಾಡುತ್ತಿದ್ದ ಫೋಟೋಗಳಿಗೆ ವೀಮ್ಸ್ ಬರೆದು ತನ್ನ ಖಾತೆಯಲ್ಲಿ ಹಂಚಿಕೊಳ್ಳಲು ಶುರುಮಾಡುತ್ತಾನೆ. ಬಳಿಕ ದಿನದಿಂದ ದಿನಕ್ಕೆ ಆತನ ಖಾತೆಗೆ ಹೆಚ್ಚೆಚ್ಚು ಫಾಲ್ಲೋರ್ಸ್ ಗಳು ಬರಲು ಶುರುವಾಗುತ್ತದೆ. ಇನ್ನು ಅವಿನಾಶ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಾಲ್ಲೋರ್ಸ್ ಗಳು ಹೆಚ್ಚಾಗುತ್ತಿದ್ದಂತೆ ಹಲವಾರು ಕಂಪನಿಗಳು ತಮ್ಮ ಬ್ರಾಂಡ್ ಪ್ರಾಡೆಕ್ಟ್ ಗಳ ಪ್ರೊಮೋಷನ್ ಗಾಗಿ ಅವಿನಾಶ್ ಅವರನ್ನ ಕಾಂಟ್ಯಾಕ್ಟ್ ಮಾಡಿ ಅದಕ್ಕೆ ತಕ್ಕ ಹಾಗೆ ಹಣ ಕೂಡ ನೀಡುತ್ತಾರೆ. ಇನ್ನು ಹೀಗೆ ಪ್ರತೀ ದಿನ ತನ್ನ ಸಾಮಾಜಿಕ ಜಾಲತಾಣ ಖಾತೆಗಳಿಗಾಗಿ ಪ್ರತೀ ದಿನ ಸುಮಾರು ೫ ಗಂಟೆಗಳ ಮೀಸಲಿಟ್ಟ ಅವಿನಾಶ್ ಅವರಿಗೆ ಫಾಲ್ಲೋರ್ಸ್ ಗಳನ್ನ ಇನ್ನಷ್ಟು ಹೆಚ್ಚು ಮಾಡೋದು ಎಂಬ ಉಪಾಯ ಹೊಳೆಯುತ್ತದೆ.

ಇನ್ನು ತನ್ನ ಐಡಿಯಾವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಅವಿನಾಶ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫಾಲ್ಲೋರ್ಸ್ ಹೆಚ್ಚಿಗೆ ಮಾಡಿಕೊಳ್ಳೋದು ಹೇಗೆ ಎಂಬುದರ ಬಗ್ಗೆ, ಬೇಕಾದವರಿಗೆ ಐಡಿಯಾ ಕೊಟ್ಟು ಅದರಿಂದಲೂ ಕೂಡ ಹಣ ಸಂಪಾದನೆ ಮಾಡಲು ಶುರುಮಾಡುತ್ತಾನೆ. ಇನ್ನು ಹೀಗೆಯೇ ಸುಮಾರು ನಲವತ್ತಕ್ಕೂ ಹೆಚ್ಚು ಕಂಪನಿಗಳಿಗೆ ತನ್ನ ಐಡಿಯಾಗಳನ್ನ ಹೇಳಿಕೊಟ್ಟು ಡಾಲರ್ ರೂಪದಲ್ಲಿ ಹಣ ಪಡೆಯುತ್ತಿದ್ದನಂತೆ ಅವಿನಾಶ್. ಇದೆ ರೀತಿ ತನ್ನ ಬುದ್ದಿವಂತಿಕೆಯಿಂದ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಕೇವಲ ಆರು ತಿಂಗಳಲ್ಲೇ 80 ಲಕ್ಷಕ್ಕಿಂತ ಹೆಚ್ಚು ಹಣ ಸಂಪಾದನೆ ಮಾಡಿದ್ದಾನೆ ೨೦ ವರ್ಷದ ಚಿಗುರುಮೀಸೆಯ ಹುಡುಗ ಅವಿನಾಶ್. ಇನ್ನು ತನ್ನ ಐಡಿಯಾಗಳನ್ನ ಕೊಡಲೆಂದೇ ತನ್ನದೇ ಆದ ಯುವಕರ ಟೀಮ್ ಕೊಟ್ಟಿರುವ ಅವಿನಾಶ್ ತನ್ನ ಸಲಹೆಗಳಿಗಾಗಿ ಸಾವಿರಾರು ರೂಪಾಯಿ ಹಣ ಚಾರ್ಜ್ ಮಾಡುತ್ತಾನೆ ಎಂದು ಹೇಳಲಾಗಿದೆ. ನೋಡಿದ್ರಲ್ಲಾ ಸ್ನೇಹಿತರೆ, ಬುದ್ಧಿಯೊಂದಿದ್ದರೆ ಮನುಷ್ಯ ಹೇಗೆಲ್ಲಾ ಬೆಳೆಯಬಹುದು ಎಂಬುಡಕ್ಕೆ ಯುವಕ ಅವಿನಾಶ್ ಒಂದು ನೈಜ ಉದಾಹರಣೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..