ಕರ್ನಾಟಕದಲ್ಲಿ ಓದಿದ್ದ ಯುವತಿ..ಈಗ 21ವರ್ಷಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ.!ಈಕೆ ಯಾರ್ ಗೊತ್ತಾ.?

Inspire

ಸ್ನೇಹಿತರೆ ಮನಸ್ಸೊಂದಿದ್ದರೆ ಏನು ಬೇಕಾದರೂ ಯಶಸ್ಸು ಗಳಿಸಬಹುದು ಎಂಬುದಕ್ಕೆ ಈದೀಗ ಇಲ್ಲಿ ಒಬ್ಬ ಸಣ್ಣ ವಯಸ್ಸಿನ ಯುವತಿ ನಿರೂಪಿಸಿದ್ದಾರೆ. ಕೇವಲ 21 ವರ್ಷ ವಯಸ್ಸಿನ ಈ ಯುವತಿ ಇದೀಗ ಬಿಹಾರದಲ್ಲಿಯ ಒಂದು ಪುಟ್ಟ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಹೊರಹೊಮ್ಮಿದ್ದಾರೆ. ಇದೀಗ ಈಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಇದೆ 21 ವರ್ಷದ ಯುವತಿ ತುಂಬಾ ಚರ್ಚೆ ಆಗುತ್ತಿದ್ದಾಳೆ. ಜೊತೆಗೆ ಹೆಚ್ಚು ಸುದ್ದಿಯಲ್ಲಿದ್ದಾಳೆ. ಹೌದು ಬಿಹಾರದ ಶಿಯೋಹರ್​​ನ ಕುಶಾಹರ್ ಎಂಬ ಊರಿನ ಗ್ರಾಮ ಪಂಚಾಯಿತಿಯಲ್ಲೇ ಮೊಟ್ಟಮೊದಲ ಬಾರಿಗೆ ಎಲೆಕ್ಷನ್ನಲ್ಲಿ ಭಾಗವಹಿಸಿ ಗೆದ್ದು, ಈ ಅನುಷ್ಕಾ ಅವರು ತುಂಬಾ ಸುದ್ದಿಯಲ್ಲಿದ್ದಾರೆ. ಹೌದು ಅನುಷ್ಕಾ ಅವರಿಗೆ ಇದೀಗ ಕೇವಲ 21 ವರ್ಷ ವಯಸ್ಸು.

ಹೌದು ಇಷ್ಟು ಸಣ್ಣ ವಯಸ್ಸಿಗೆ ಅನುಷ್ಕಾ ಗ್ರಾಮ ಪಂಚಾಯಿತಿ ಅಧ್ಯಕ್ಷಯಾಗಿರುವುದು ಅಲ್ಲಿ ಜನತೆಗೆ ಸಂತಸವಾಗಿದೆ. ಅನುಷ್ಕಾ ಅವರು ತಮ್ಮ ಹತ್ತನೇ ತರಗತಿಯನ್ನು ಹರಿಯಾಣದಲ್ಲಿ ಮುಗಿಸಿದ್ದು, ಆನಂತರ ಕರ್ನಾಟಕದ ಬೆಂಗಳೂರಿನಲ್ಲಿ ಇತಿಹಾಸ ಹಾನರ್ಸ್ ಪದವಿ ಪಡೆದುಕೊಂಡಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೆ ಗ್ರಾಮದ ಅಧ್ಯಕ್ಷೆಯಾಗಿರುವ ಹೆಗ್ಗಳಿಕೆಗೂ ಕೂಡ ಅನುಷ್ಕಾ ಅವರು ಪಾತ್ರರಾಗಿದ್ದಾರೆ. ಎಲೆಕ್ಷನ್ನಲ್ಲಿ ರೀಟಾದೇವಿ ಎಂಬುವವರ ವಿರುದ್ಧ ಅನುಷ್ಕಾ ಸೆಣಸಾಟ ನಡೆಸಿದ್ದು, ಬಳಿಕ 287 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅನುಷ್ಕಾ ಅವರು ಒಟ್ಟು 2675 ಮತಗಳನ್ನು ಗಳಿಸಿದ್ದು, ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನವನ್ನು ಅಲಂಕರಿಸಿದ್ದಾರೆ ಎನ್ನಲಾಗಿದೆ.

ಅನುಷ್ಕಾ ಅವ್ರಿಗೆ, ಯಾಕೆ ಇಷ್ಟು ಚಿಕ್ಕ ವಯಸ್ಸಿಗೆ ನೀವು ಎಲೆಕ್ಷನ್ನಲ್ಲಿ ಭಾಗವಹಿಸುವ ಪ್ರಯತ್ನ ಮಾಡಿದ್ದೀರಿ ಎಂದು ಪ್ರಶ್ನಿಸಿದರೆ, ಹಾಗೆ ಈ ಸ್ಥಳೀಯ ಚುನಾವಣೆಯಲ್ಲಿ ನೀವೂ ಜಯಶಾಲಿಯಾಗಿದ್ದಿರ, ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಕೇಳಿದರೆ, ಅನುಷ್ಕಾ ಅವರು ಸಾಕಷ್ಟು ಸ್ಥಳೀಯ ಸಮಸ್ಯೆಗಳ ಮೂಲಕ ಉತ್ತರ ನೀಡಿದ್ದಾರೆ. ಹೌದು ಬದಲಾವಣೆ ತರುವತ್ತ ನಾವು ಕೆಲಸ ಮಾಡುತ್ತೇವೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕಾಗಿದೆ. ನಮ್ಮ ಊರಿನ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ, ಪ್ರತಿಫಲ ಸಿಕ್ಕೇ ಸಿಗುತ್ತದೆ. ಊರ ಜನರ ನಂಬಿಕೆಯ ನಾವು ಖಂಡಿತ ಉಳಿಸಿಕೊಳ್ಳುತ್ತೇವೆ ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಜೊತೆಗೆ ಗ್ರಾಮದ ನೂತನ ಅಧ್ಯಕ್ಷ ಆಗಿರುವ ಅನುಷ್ಕಾ ಅವರ ತಂದೆ ಸುನಿಲ್ ಸಿಂಗ್ ಅವರು ಕೂಡ ಸ್ಥಳೀಯ ಜಿಲ್ಲಾ ಕೌನ್ಸಿಲ್ ಮಾಜಿ ಸದಸ್ಯರಾಗಿದ್ದರು ಎಂದು ಹೇಳಲಾಗುತ್ತಿದೆ. ಹೌದು ಅನುಷ್ಕಾ ಸಕ್ರಿಯ ವಾದಂತಹ ರಾಜಕೀಯದಲ್ಲಿ ಪಾಲ್ಗೊಳ್ಳುವುದು ಉತ್ತಮವಾಗಿದೆ.. ಇವರಿಂದ ಈ ಕ್ಷೇತ್ರದ ಮಹಿಳೆಯರು ಪ್ರೇರೇಪಿತವಾಗಿ ಸಮಾಜದ ಸುಧಾರಣೆಗಾಗಿ ಕಾರ್ಯ ನಿರ್ವಹಿಸಬಹುದು ಎಂದು ಕೇಳಿ ಬಂದಿದೆ..