ಬಹಳ ಎತ್ತರಕ್ಕೆ ಬೆಳೆದುಬಿಟ್ರಾ ನೀವು!ಕಾಮಿಡಿ ಕಿಲಾಡಿಗಳು ನಯನಾ ಮೇಲೆ ಗರಂ ಆದ ಕನ್ನಡಿಗರು ?

Cinema Entertainment
Advertisements

ಬೆಳೆಯುವಾಗ ಕನ್ನಡ ಕನ್ನಡ ಎನ್ನುವ ಕೆಲ ಸೆಲೆಬ್ರೆಟಿಗಳು ಬೆಳೆದು ಸ್ವಲ್ಪ ಹಣ ಹೆಸರು ಬಂದ ಮೇಲೆ ಅವರ ವರಸೆಯೇ ಬದಲಾಗಿಬಿಡುತ್ತದೆ. ಇವರು ಬೆಳೆಯಬೇಕಾದರೆ ಕನ್ನಡ ಭಾಷೆ ಬೇಕು ಇವರನ್ನ ಬೆಳೆಸಲು ಕನ್ನಡಿಗರು ಬೇಕು ಆದರೆ ಸೆಲೆಬ್ರೆಟಿ ಆದ ಮೇಲೆ..ಈಗ ಇದೆ ರೀತಿ ಯಡವಟ್ಟೊಂದನ್ನ ಮಾಡಿಕೊಂಡಿದ್ದಾರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ.

Advertisements

ಹಾಡು, ಕಾಮಿಡಿ ಕಿಲಾಡಿಗಳು ನಯನ ಎಂದರೆ ಈಗ ಇಡೀ ಕರ್ನಾಟಕಕ್ಕೆ ಗೊತ್ತು. ಜೂನಿಯರ್ ಉಮಾಶ್ರೀ ಎಂದು ದೊಡ್ಡ ದೊಡ್ಡ ನಟರಿಂದ ಹೆಸರು ಪಡೆದವರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಫೇಮಸ್ ಆದ ನಯನ ಇಂದು ಅನೇಕ ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸುವ ಅವಕಾಶಗಳನ್ನ ಪಡೆದುಕೊಂಡಿದ್ದಾರೆ. ಈಗ ಹಣ ಇದೆ ಹೆಸರು ಸಹ ಇದೆ.

ನಯನ ಈ ಮಟ್ಟಕ್ಕೆ ಬೆಳೆಯಲು ಕಾರಣ ಕನ್ನಡದಲ್ಲಿ ಮೂಡಿ ಬಂದ ಕಾಮಿಡಿಕಿಲಾಡಿಗಳು ಕಾರ್ಯಕ್ರಮ. ಓಟು ಹಾಕಿ ಗೆಲ್ಲಿಸಿದವರು ಬೆಳೆಸಿದವರು ಕನ್ನಡಿಗರು. ಇದೆ ಕಾರಣದಿಂದಲೇ ಇಂದು ಸ್ಯಾಂಡಲ್ವುಡ್ ನಲ್ಲಿ ಅವಕಾಶಗಳನ್ನ ಪಡೆದು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಶ್ರಮ ಟ್ಯಾಲೆಂಟ್ ಕೂಡ ಇದೆ ಅನ್ನೋದು ನಾವು ಮರೆಯೋದಕ್ಕೆ ಆಗೋದಿಲ್ಲ. ಆಗೆಂದಾ ಮಾತ್ರಕ್ಕೆ ನಯನ ಇವತ್ತಿನ ಸ್ಥಿತಿಗೆ ಕಾರಣವಾಗಿರುವ ಕನ್ನಡ ಭಾಷೆಯನ್ನೇ ಮರೆತುಬಿಟ್ಟರೆ ಹೇಗೆ. ಇದು ಅಹಂಕಾರವೋ..ಮತ್ತೇನೋ..ಇದಕ್ಕೆಲ್ಲಾ ಕಾರಣವಾಗಿದ್ದು ಅವರ ಫೇಸ್ಬುಕ್ ಖಾತೆಯಲ್ಲಿ ಫೋಟೋವೊಂದನ್ನ ಅಪ್ಲೋಡ್ ಮಾಡಿದ್ದು ಇಂಗ್ಲೀಷ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದರು.

ಆದರೆ ನಯನ ಇಂಗ್ಲಿಷ್ ಬಳಸಿರುವುದಕ್ಕೆ ನೆಟ್ಟಿಗರು ಯದ್ವಾ ತದ್ವಾ ತರಾಟೆ ತೆಗೆದುಕೊಂಡಿದ್ದಾರೆ. ಅದರಲ್ಲಿ ಒಬ್ಬರು ಫೇಮಸ್ ಆಗೋವರೆಗೂ ಕನ್ನಡ ಬೇಕು ಆಮೇಲೆ ಇಂಗ್ಲಿಷ್ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ನಯನ ಒಬ್ಬ ಕಲಾವಿದೆಯಾಗಿ ವಿಧೇಯತೆಯಿಂದ ಅವರಿಗೆ ರಿಪ್ಲೆ ಕೊಡಬಹುದಿತ್ತು. ಆದರೆ ‘ಅಪ್ಪಾ ಕನ್ನಡದ ಭಕ್ತ..ಮುಸಿಕೊಂಡು ಮುಚ್ಕೊಂಡ್ ನಿನ್ ಕೆಲಸ ನೋಡ್ಕೋ’ ಎಂದು ಉತ್ತರಿಸಿದ್ದಾರೆ. ಇನ್ನು ನಯನ ಈ ರೀತಿ ಉತ್ತರಿಸಿದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು ಈ ರೀತಿ ಕೆಟ್ಟ ಪದ ಬಳಸಿ ಕಾಮೆಂಟ್ ಮಾಡಿರುವುದು ಎಷ್ಟು ಸರಿ..ಕ್ಷಮೆ ಕೇಳಲೇ ಬೇಕು ಎಂದು ನೆಟ್ಟಿಗರು ಗರಂ ಆಗಿದ್ದಾರೆ.

ಇನ್ನು ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿರುವ ನೆಟ್ಟಿಗರು ಸಾಲು ಸಾಲು ಕಾಮೆಂಟ್ ಗಳನ್ನ ನಯನ ವಿರುದ್ಧವಾಗಿ ಮಾಡುತ್ತಿದ್ದಾರೆ. ಆದರೆ ನಯನ ಮಾತ್ರ ಯಾವುದಕ್ಕೂ ಉತ್ತರ ನೀಡಿಲ್ಲ. ಒಟ್ಟಿನಲ್ಲಿ ನಯನ ಕೂಡ ನಟಿ ರಶ್ಮಿಕಾ ಮಂದಣ್ಣನವರ ದಾರಿ ಹಿಡಿದಂತಾಗಿದೆ. ನಯನ ನೀವು ಆತನ ಕಾಮೆಂಟ್ ಗೆ ಉತ್ತರಿಸಿರಡಿದ್ದರು ಪರವಾಗಿರಲಿಲ್ಲ. ಆದರೆ ನೀವು ಕೆಟ್ಟ ಪದ ಬಳಸಿ ಅಹಂಕಾರದಿಂದ ಉತ್ತರಿಸೋ ಅವಶ್ಯಕತೆ ಇರಲಿಲ್ಲ ಎಂದು ಸಾಲು ಸಾಲು ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು ನಯನ ಮೇಲೆ ಆಕ್ರೋಶಗೊಂಡಿದ್ದಾರೆ.