ತನ್ನ ಮೇಲೆ ಬಂದಿರುವ ಸುದ್ದಿಗಳ ಬಗ್ಗೆ ಸ್ಪಷನೆ ಕೊಟ್ಟ ಡ್ರೋನ್ ಪ್ರತಾಪ್ ? ನನಗೆ ಸಮಯ ಕೊಡಿ ಎಂದು ಕೇಳಿದ್ದೇಕೆ ಗೊತ್ತಾ !

News
Advertisements

ಎರಡು ದಿನಗಳಿಂದ ಟ್ರೋಲ್ ಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಡ್ರೋನ್ ಪ್ರತಾಪ್ ನದ್ದೇ ಸುದ್ದಿ. ಯಾಕೆಂದರೆ ಪ್ರತಾಪ್ ಯಾವುದೇ ಸಾಧನೆ ಮಾಡಿಲ್ಲ..ಅವರು ಹೇಳಿದ್ದಲ್ಲಾ ಸುಳ್ಳು..ಎಲ್ಲರನ್ನು ನಂಬಿಸಿ ಮೂರ್ಖರನ್ನಾಗಿ ಮಾಡಿದ್ದಾನೆ ಎಂದು ರಾಷ್ಟೀಯ ಮಟ್ಟದ OPIndia ಎಂಬ ಸುದ್ದಿವಾಹಿನಿ ಪ್ರತಾಪ್ ಬಗೆಗಿನ ಸತ್ಯವನ್ನ ಬಹಿರಂಗ ಮಾಡಿತ್ತು. ಅವರು ನಡೆಸಿದ ಫ್ಯಾಕ್ಟ್ ಚೆಕ್ ನಲ್ಲಿ ಪ್ರತಾಪ್ ಹೇಳಿಕೊಂಡಿರುವ ಹಾಗೆ 600 ಡ್ರೋನ್ ಗಳನ್ನ ತಯಾರು ಮಾಡಿಲ್ಲ..ಹಾಗೇನಾದರೂ ಇದ್ದರೆ ಅದಕ್ಕೆ ಸಂಬಂಧಿಸಿದ ವಿಡಿಯೋ ಆಗಲಿ ಫೋಟೋಗಳನ್ನಾಗಲಿ ತೋರಿಸಲಿ ಎಂದು OPIndia ಅಸಲಿ ಸತ್ಯವನ್ನ ಬಹಿರಂಗ ಮಾಡಿತ್ತು.

Advertisements

ಇನ್ನು OPIndia ಬಹಿರಂಗ ಪಡಿಸಿದ ವರದಿ ಪ್ರಕಾರ ಡ್ರೋನ್ ಪ್ರತಾಪ್ ಯಾವುದೇ ಮೆಡಲ್ ಗಳನ್ನಾಗಲಿ ಪಡೆದುಕೊಂಡಿಲ್ಲ. ಇನ್ನು ಪದಕಗಳನ್ನ ಕೊಡುವ ಸಂಧರ್ಭದಲ್ಲಿ ಜೊತೆಗೆ ಸರ್ಟಿಫಿಕೇಟ್ ಗಳನ್ನ ಕೂಡ ಕೊಡ್ತಾರೆ. ಅದನ್ನು ಪ್ರತಾಪ್ ತೋರಿಸಿಲ್ಲ. ಇನ್ನು ಮೆಡಲ್ ಗಳನ್ನ ತೆಗೆದುಕೊಳ್ಳುವ ವೇಲೆ ಫೋಟೋ, ವಿಡಿಯೋ ಮಾಡಿಯೇ ಇರುತ್ತಾರೆ. ಆದರೆ ಪ್ರತಾಪ್ ಇಲ್ಲಿಯವರೆಗೂ ಅದಕ್ಕೆ ಸಂಬಂದಿಸಿದ ವಿಡಿಯೋ ಆಗಲಿ ಫೋಟೋಗಳನ್ನಾಗಲಿ ತೋರಿಸಿಲ್ಲ ಎಂದು OPIndia ಮಡಿದ ಫ್ಯಾಕ್ಟ್ ಚೆಕ್ ನಲ್ಲಿ ತಿಳಿದುಬಂದಿದೆ.

ಇನ್ನು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡದ ಖಾಸಗಿ ಸುದ್ದಿ ವಾಹಿನಿಯೊಂದು ಪ್ರತಾಪ್ ನನ್ನ ಕರೆಸಿದ್ದು ಇದರ ಬಗ್ಗೆ ಸ್ಪಷ್ಟನೆ ಕೇಳಿತ್ತು. ಆ ವೇಳೆ ಪ್ರತಾಪ್ ನನ್ನ ಬಳಿ ಎಲ್ಲಾ ಪದಕಗಳು ಡ್ರೋನ್ ಗೆ ಸಂಬಂಧಪಟ್ಟ ದಾಖಲಾತಿಗಳು ಇದೆ ಎಂದು ಲೈವ್ ನಲ್ಲಿ ಹೇಳಿದ್ದಾನೆ. ಆಗ ಆ ಸುದ್ದಿ ವಾಹಿನಿಯ ನಿರೂಪಕರು ಲೈವ್ ನಲ್ಲಿ ನಿಮ್ಮ ಯಾವದಾದರೂ ಒಂದು ಸರ್ಟಿಫಿಕೇಟ್ ತೋರಿಸಿ ಎಂದು ಕೇಳಿದ್ದಾರೆ. ಆದರೆ ಪ್ರತಾಪ್ ನಾನು ಈಗ ಬೆಂಗಳೂರಿನಲ್ಲಿ ಇಲ್ಲ..ಔಟ್ ಸೈಡ್ ಇದ್ದೇನೆ..ನನಗೆ ೫ ದಿನಗಳ ಕಾಲ ಸಮಯ ಬೇಕು. ಬಳಿಕ ನಿಮ್ಮಲ್ಲೇ ಡ್ರೋನ್ ಹಾಗೂ ನಾನು ಪಡೆದ ಪದಕ ಸರ್ಟಿಫಿಕೇಟ್ ಗಾಲ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರತಾಪ್ ಹೇಳಿಕೊಂಡಿದ್ದ ಹಾಗೆ ಅವರನ್ನ ಗುರುತಿಸಿ ಜನರು ಬೆಳೆಸಿದ್ದಾರೆ. ಬೆಳೆಸಿದವರಿಗೆ ಮೋಸ ಆಗೋದು ಬೇಡ ಎಂದಾದರೆ ಅವರು ಡ್ರೋನ್ ಡೆಮೊವನ್ನ ಲೈವ್ ನಲ್ಲೆ ನೀಡಲಿ..ಇದಕ್ಕೆ ನಾವು ವೇದಿಕೆ ಕಲ್ಪಿಸಿಕೊಡುತ್ತೇವೆ ಎಂದು ಆ ಸುದ್ದಿವಾಹಿನಿ ನಿರೂಪಕರು ಹೇಳಿದ್ದಾರೆ. ಅವರು ತಯಾರಿಸಿರುವ ಡ್ರೋನ್ ಪದಕ ಸೇರಿದಂತೆ ಎಲ್ಲಾ ದಾಖಲೆಗಳನ್ನ ಸಪೋಟ್ ಮಾಡಿ ಬೆಳೆಸಿದ ಜನರಿಗೆ ತೋರಿಸಬೇಕು..ಆಗ ಮಾತ್ರ ಪ್ರತಾಪ್ ಬಗ್ಗೆ ಎದ್ದಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ..ನಿಜ ಯಾವುದು ಸುಳ್ಳು ಯಾವುದು ಎಂಬ ಅಸಲಿ ಸತ್ಯ ಹೊರಗೆ ಬರಲಿದೆ..ಇನ್ನು ಪ್ರತಾಪ್ ಹೇಳಿರುವ ಹಾಗೆ ಲೈವ್ ನಲ್ಲಿ ಡ್ರೋನ್ ಡೆಮೋ ನೀಡುತ್ತಾರಾ?ತಮ್ಮ ಸರ್ಟಿಫಿಕೇಟ್ ಗಳನ್ನ ತೋರಿಸುತ್ತಾರಾ..ಇಲ್ಲವಾ ಎಂಬುದನ್ನ ಕಾಡು ನೋಡಬೇಕಾಗಿದೆ.