ಮಿನಿಸ್ಟರ್ ಮಗನಿಗೆ ಮಾಸ್ಕ್ ಹಾಕಿ ಎಂದಿದ್ದಕ್ಕೆ ಈ ಮಹಿಳಾ ಅಧಿಕಾರಿಗೆ ಸಿಕ್ಕ ಬಹುಮಾನ ಏನ್ ಗೊತ್ತಾ ?

News
Advertisements

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಮರಣ ಮೃದಂಗ ಬಾರಿಸುತ್ತಿದೆ. ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳು ಏನೇ ತಿಪ್ಪರಲಾಗ ಹಾಕಿದರೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ನಡುವೆ ಜನಪ್ರತಿನಿಧಿಗಳ ಬೇಜವಾಬ್ದಾರಿ ಬೇರೆ. ಸಾಲದೆಂಬಂತೆ ಅವರ ಮಕ್ಕಳು ಸಹ ಸರ್ಕಾರವೇ ಮಾಡಿರುವ ಕಾನೂನುಗಳನ್ನ ಪಾಲನೆ ಮಾಡದೇ ಬೇಜವಾಬ್ದಾರಿ ತೋರಿಸುತ್ತಿದ್ದಾರೆ. ಇದರಲ್ಲಿ ಆ ಪಕ್ಷ ಈ ಪಕ್ಷ ಅಂತ ಏನೂ ಇಲ್ಲ..ಇತ್ತೀಚಿಗೆ ಇದೆ ವಿಷಯಕ್ಕೆ ತಮಿಳುನಾಡಿನಲ್ಲಿ ಕೂಡ ಸಂಸದರೊಬ್ಬರು ಪೊಲೀಸ್ ಆಧಿಕಾರಿಯನ್ನೇ ಜಾಡಿಸಿ ಒದ್ದಿದ್ದ ಘಟನೆ ನಡೆಸಿತ್ತು.

Advertisements

ಹೌದು, ಕೊರೋನಾ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಖಡ್ಡಾಯವಾಗಿದೆ..ಆದರೆ ನಮಗೆ ಕೊರೋನಾ ಬರೋದೇ ಇಲ್ಲವೇನೋ..ಅಥ್ವಾ ದೊಡ್ಡವರ ಮಕ್ಕಳು ಎಂಬ ಅಹಂ ಗೊತ್ತಿಲ್ಲ..ಕಾನ್ಸ್ಟೇಬಲ್ ಸುನಿತಾ ಎನ್ನುವವರು ಸಚಿವರೊಬ್ಬರ ಪುತ್ರನಿಗೆ ಮಾಸ್ಕ್ ಧರಿಸಿ ಅಂತ ಹೇಳಿದ್ದಕ್ಕೆ ಆತ ಪೊಲೀಸ್ ಸಿಬ್ಬಂದಿಗೆ ಧಮ್ಕಿ ಹಾಕಿದ್ದಾನೆ ಎಂದು ಸುದ್ದಿಯಾಗಿದ್ದು ಈ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.

ಗುಜರಾತ್ ನ ಆರೋಗ್ಯ ಸಚಿವ ಕನಾನಿಯ ಅವರ ಮಗ ಪ್ರಕಾಶ್ ಎಂಬುವವರೇ ಕಾನ್ಸ್ಟೇಬಲ್ ಸುನಿತಾ ಯಾದವ್ ಅವರಿಗೆ ಮಾಸ್ಕ್ ಧರಿಸಿ ಎಂದ ಮಾತ್ರಕ್ಕೆ ಧಮಕಿ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಸುನಿತಾ ತನ್ನ ಮೇಲಿನ ಅಧಿಕಾರಿಗಳಿಗೆ ದೂರು ನೀಡಿದಕ್ಕೆ ಅವರು ಸಚಿವ ಪುತ್ರನ ಮೇಲೆ ಕ್ರಮ ತೆಗೆದುಕೊಳ್ಳುವುದನ್ನ ಬಿಟ್ಟು ಸಿಬ್ಬಂದಿಯಿಂದಲೇ ರಾಜೀನಾಮೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಸಚಿವರ ಮಗ ಪ್ರಕಾಶ್ ಕಾನ್ಸ್ಟೇಬಲ್ ಸುನಿತಾ ಅವರೊಂದಿಗೆ ವಾಗ್ವಾದ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಇದೆ ವೇಳೆ ಪೊಲೀಸ್ ಮೇಲಧಿಕಾರಿ ಆ ಸ್ಥಳಕ್ಕೆ ಬಂದಿದ್ದು ಕಾನ್ಸ್ಟೇಬಲ್ ಸುನಿತಾ ಅವರನ್ನ ಅಲ್ಲಿಂದ ಕಳುಹಿಸಿದ್ದಾರೆ. ಇನ್ನು ಇದರ ಬಗ್ಗೆ ತನಿಖೆ ಮಾಡುವುದಾಗಿ ಅಲ್ಲಿನ ಪೊಲೀಸ್ ಕಮಿಷನರ್ ಹೇಳಿದ್ದಾರೆ ಎನ್ನಲಾಗಿದೆ. ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನನ್ನ ಮಾನವರನ್ನ ನೋಡಲು ನನ್ನ ಮಗ ಹೋಗುತ್ತಿದ್ದ..ಸಚಿವರ ಕಾರಿನಲ್ಲಿ ನೀವು ಹೇಗೆ ಪ್ರಯಾಣ ಮಾಡುತ್ತಿದ್ದೀರಿ ಎಂದು ನನ್ನ ಮಗನನ್ನ ಅಡ್ಡಗಟ್ಟಿ ಪ್ರಶ್ನೆಗಳನ್ನ ಕೇಳಿದ್ದಾರೆ ಎಂದು ಅಲ್ಲಿನ ಸಚಿವರು ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಘಟನೆಯ ಬಳಿಕ ಕಾನ್ಸ್ಟೇಬಲ್ ಸುನಿತಾ ಯಾದವ್ ಅವರೇ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಲ್ಲಿನ ಎಸಿಪಿ ಹೇಳಿದ್ದಾರೆ. ಒಟ್ಟಿನಲ್ಲಿ ಮಾಸ್ಕ್ ಹಾಕಿಕೊಳ್ಳಿ ಎಂದು ಪ್ರಶ್ನೆ ಮಾಡಿದಕ್ಕೆ ಪೊಲೀಸ್ ಸಿಬ್ಬಂದಿರಾಜೀನಾಮೆ ನೀಡುವಂತಾಗಿದೆ. ಆದರೂ ಈ ಘಟನೆಯಲ್ಲಿ ಬೇರೆ ಏನಾದರು ತಪ್ಪು ನಡೆದಿದೆಯಾ ಎಂಬುದು ತನಿಖೆಯಿಂದ ಮಾತ್ರ ಗೊತ್ತಾಗಲಿದೆ.