ಮೊದಲಿಗಿಂತ ಕಠಿಣವಾಗಿರಲಿದೆ ಈ 7 ದಿನಗಳ ಲಾಕ್‍ಡೌನ್ !ಹಾಗಾದ್ರೆ ಏನಿರುತ್ತೆ?ಏನಿರಲ್ಲಾ ?

News
Advertisements

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯುಲ್ಲಿ ಮಂಗಳವಾರ ರಾತ್ರಿ ೮ ಗಂಟೆಯಿಂದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದು ಸರ್ಕಾರದಿಂದ ಆದೇಶ ಬಂದಿದೆ. ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ಇರುವುದಿಲ್ಲ ಎಂದು ಹೇಳಲಾಗಿದ್ದರೂ ಬೇರೆ ಆಯ್ದ ಜಿಲ್ಲೆಗಳಲ್ಲಿ ಸಹ ಲಾಕ್ ಡೌನ್ ಮಾಡುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಲಾಕ್ ಡೌನ್ ನೆನ್ನೆಯೇ ಘೋಷಣೆಯಾಗಿದ್ದು ಜನರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಎರಡು ದಿನಗಳ ಅವಕಾಶ ಕೂಡ ನೀಡಲಾಗಿದೆ. ಊರುಗಳಿಗೆ ಹೋಗುವವರು ಹೋಗಬಹುದು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನ ಪೂರೈಸಿಕೊಳ್ಳುವ ಸಲುವಾಗಿ ಈ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಇನ್ನು ಲಾಕ್ ಡೌನ್ ಬಳಿಕ ಏನೆಲ್ಲಾ ನಿಯಮಗಳಿರುತ್ತವೆ ನೋಡೋಣ ಬನ್ನಿ..

ಮಂಗಳವಾರ ರಾತ್ರಿ ೮ ಗಂಟೆಯಿಂದ ಶುರುವಾಗುವ ಲಾಕ್ ಡೌನ್ ೭ ದಿನಗಳ ಕಾಲ ಇರಲಿದ್ದು ಜನ ತುರ್ತು ಪರಿಸ್ಥಿತಿ ಸಂದರ್ಭ ಬಿಟ್ಟು ಅನಾವಶ್ಯಕವಾಗಿ ಓಡಾಡಬಾರದು ಎಂದು ಸಚಿವ ಆರ್. ಅಶೋಕ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇನ್ನು ಈ ಲಾಕ್ ಡೌನ್ ವಿಭಿನ್ನವಾಗಿರುವುದರ ಜೊತೆಗೆ ಕಠಿಣವಾಗಿರಲಿದೆ ಎಂದು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು ಮಾರ್ಗಸೂಚಿಯಲ್ಲಿ ಏನಿರಬಹುದು ಎಂದು ನೋಡೋಣ ಬನ್ನಿ..

*ದಿನ ಬಳಕೆಯ ಅಗತ್ಯ ವಸ್ತುಗಳನ್ನ ಖರೀದಿ ಮಾಡಲು ಪ್ರತ್ಯಕ ಸಮಯವನ್ನ ಈಗಡಿ ಮಾಡಬಹುದು ಎಂದು ಹೇಳಲಾಗಿದೆ.

*ಅನಾವಶ್ಯಕವಾಗಿ ರಸ್ತೆಯಲಿ ಓಡಾಡಿದ್ರೆ ಸರ್ಕಾರದ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವುದರ ಜೊತೆಗೆ ಇದೆ ವೇಳೆ ಪೊಲೀಸರ ಕೈಗೆ ಸಿಕಿಬಿದ್ರೆ ನಿಮ್ಮ ವಾಹನ ಸೀಜ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

*ಇನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಓಡಾಡಲು ಯಾವುದೇ ಪಾಸ್ ಗಳ ಅವಶ್ಯಕತೆ ಇಲ್ಲ ಎಂದು ಹೇಳಲಾಗಿದ್ದು, ಅಗತ್ಯ ವಸ್ತುಗಳ ಸಾಗಾಟಕ್ಕೂ ಕೂಡ ಪಾಶ್ ಅವಶ್ಯಕತೇ ಇರೋದಿಲ್ಲ..ನಿಮ್ಮ ಐಡಿ ಕಾರ್ಡ್ ನ್ನೇ ತೋರಿಸಿ ಬೆಂಗಳೂರಿನ ಒಳಗೆ ಪ್ರವೇಶ ಮಾಡಬಹುದು ಎನ್ನುವ ಮಾಹಿತಿ ಇದೆ.

*ಇನ್ನು ದಿನಬಳಕೆಯ ಆಹಾರ ವಸ್ತುಗಳ ಉತ್ಪಾದನಾ ಘಟಕ ವೈದ್ಯಕೀಯ ಉತ್ಪನ್ನ ತಯಾರಿಸುವ ಔಷಧಿ ಕಾರ್ಖಾನೆ ತೆಗೆಯಲು ಪರ್ಮಿಷನ್ ನೀಡುವ ಸಂಭವ ಇದೆ ಎಂದು ಹೇಳಲಾಗಿದೆ.