22ನೇ ವರ್ಷಕ್ಕೆ IPS ಆಫೀಸರ್ ಆದ ಚಿಗುರು ಮೀಸೆಯ ಯುವಕ..ಇದರ ಹಿಂದಿರುವುದು ನಿದ್ದೆಗೆಟ್ಟು ದುಡಿದ ತಾಯಿಯ ಶ್ರಮ..

Inspire
Advertisements

ಎಷ್ಟೋ ಜನ ಯುವಕ ಯುವತಿಯರಿಗೆ IAS, IPS ಆಗುವುದು ಕನಸಾಗಿರುತ್ತದೆ. ಅದರಲ್ಲೂ ಬಡವರಿಗಂತೂ ಇದು ತುಂಬಾ ದೂರದ ವಿಷಯ. ಇನ್ನು ಚಿಕ್ಕ ವಯಸ್ಸಿಗೆ ಐಪಿಎಸ್ ಅಧಿಕಾರಿ ಆಗುವುದು ಸುಲಭದ ಮಾತಲ್ಲ. ಅದಕ್ಕೆ ತುಂಬಾ ಶ್ರಮ ಬೇಕಾಗುತ್ತೆ. ಹೌದು, ಕೇವಲ 22ನೇ ವಯಸ್ಸಿಗೆ ಐಪಿಎಸ್ ಆಫೀಸರ್ ಆದ ಯುವಕನ ಕತೆ ಇಲ್ಲಿದೆ ನೋಡಿ..

Advertisements

ಹೌದು, ಗುಜರಾತ್ ಮೂಲದ ಕೇವಲ ೨೨ ವರ್ಷ ವಯಸ್ಸಿನ ಸಫಿನ್ ಹಸನ್ ಡಿಸೆಂಬರ್ 23, 2019 ರಂದು ದೇಶದ ಅತೀ ಕಿರಿಯ ಐಪಿಎಸ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹಂಬಲ್ ಬ್ಯಾಕ್ ಗ್ರೌಂಡ್ ಹೊಂದಿರುವ ಕುಟುಂಬದಿಂದ ಬಂದಿರುವ ಸಫಿನ್ ಪಾಲನ್‌ಪುರದ ಕನೋದರ್ ಗ್ರಾಮದವರು

ಭಾರತದಲ್ಲೇ ಅತ್ಯಂತ ಕಿರಿಯ ಪ್ರಾಯದ ಐ.ಪಿ.ಎಸ್ ಆಫೀಸರ್ ಆಗಿ 22 ರ ಹರೆಯದ ಹಸನ್ ಸಫೀನ್. ಅಂದರೆ ಈ ಹೊನ್ನು ತಿಲಕದ ಹಿಂದೆ ರಾತ್ರಿಯಿಡಿ ನಿದ್ದೆಗೆಟ್ಟು ಚಪಾತಿ ರುಬ್ಬಿ ಮಾರಾಟ ಮಾಡಿದ ಒಬ್ಬ ತಾಯಿಯ ಕಥೆ ಕೂಡ ಇದೆ. ಅದರೊಂದಿಗೆ ಸ್ನೇಹದಿಂದ ಎದೆಯೊಳಗೆ ಅಪ್ಪಿ ಸಾಕಿದ ಕನೋದರ್ ಎಂಬ ಗ್ರಾಮಸ್ಥರ ವಾತ್ಸಲ್ಯ ಕೂಡ.

ಗುಜರಾತ್ ನ ಪಾಲನ್ ಪುರಿಯ ಕನೋದರ್ ಗ್ರಾಮದ ಒಬ್ಬ ಬಡ ಕುಟುಂಬದಲ್ಲಿ ಜನಿಸಿದ ಸಫಿನ್ ಹಸನ್ ಹಸನ್.. ತಂದೆ ಮುಸ್ತಾಫಾ ಹಸನ್, ತಾಯಿ ನಸೀಮ ಬಾನು..ಇವರಿಬ್ಬರು ವಜ್ರ ಖನಿಜ ಕಂಪನಿಯ ಕಾರ್ಮಿಕರಾಗಿದ್ದರು. ಆದರೆ ಕಲಿಕೆಯಲ್ಲಿ ಬುದ್ಧಿವಂತನಾದ ಮಗನ ಕನಸುಗಳಿಗೆ ಹೆಗಲುಕೊಡಲು ಪೋಷಕರ ಆ ಕೆಲಸವೂ, ಕೂಲಿಯೂಸಾಕಾಗಲಿಲ್ಲ. ಗ್ರಾಮಸ್ಥರು, ಶಾಲೆಯ ಅಧಿಕೃತರೂ ಯಾವುದೇ ರೀತಿಯಲ್ಲಿ ಸಹಾಯಕ್ಕೆ ತಯಾರಿದ್ದರೂ … ಮಗನಿಗಾಗಿ ನಸಿಮ ಬಾನು ತನ್ನ ಕೆಲಸವನ್ನು ಬದಲಾಯಿಸಿದರು.

ಯಾರಿಗೂ ಭಾರವಾಗದೆ, ತೊಂದರೆ ಕೊಡದೆ ನನ್ನ ಮಗನನ್ನು ದಡಕ್ಕೆ ಸೇರಿಸಬೇಕು ಎಂಬ ಒಂದೇ ಗುರಿ ಆ ತಾಯಿಗಿತ್ತು. ಸಮೀಪದ ಅಂಗಡಿ, ಹೋಟೆಲ್ ಗಳಿಂದ ಆರ್ಡರ್ ಪಡೆದು ಆ ತಾಯಿ ತನ್ನ ಮಗನಿಗೋಸ್ಕರ ರಾತ್ರಿ ಹಗಲು ನಿದ್ದೆಗೆಟ್ಟು ದುಡಿದರು. 200 ಕಿಲೋ ಗೋದಿ ಹಿಟ್ಟು ಉಪಯೋಗಿಸಿ ಚಪಾತಿ ಮಾಡಿದ ದಿನಗಳು ಅವೆಷ್ಟೋ.! ದಿನ ಬೆಳಗಾಗುವಷ್ಟರಲ್ಲಿ ಮಾಡಿದ ಚಪಾತಿಯನ್ನು ಅಂಗಡಿ, ಹೋಟೆಲ್ ಗಳಿಗೆ ತಲುಪಿಸುತ್ತಿದ್ದಳು. ಹೀಗೆ ತನ್ನ ಮಗನ ಭವಿಷ್ಯಗೋಸ್ಕರ ಹಗಲಿರುಳು ನಿದ್ದೆಗೆಟ್ಟು ದುಡಿಯುತ್ತಿದ್ದರು ಆ ತಾಯಿ.

2018ರಲ್ಲಿ ಸಫಿನ್ ಹಸನ್ ಸಿವಿಲ್ ಪರೀಕ್ಷೆ ಬರೆದದ್ದು IAS ಆಗಬೇಕೆಂಬ ಲಕ್ಷ್ಯವಿಟ್ಟುಕೊಂಡಿದ್ದರು.. ಆದರೆ 570ನೇ ರಾಂಕ್ ಪಡೆದಿದ್ದರಿಂದ IPS ಗೆ ಸೆಲೆಕ್ಟ್ ಆಗಿತ್ತು. IAS ಆಗಬೇಕೆಂದು ನಿರಾಸೆಗೊಳ್ಳದೆ ಕಳೆದ ಬಾರಿ ಮತ್ತೊಮ್ಮೆ ಪರೀಕ್ಷೆ ಬರೆದನಾದರೂ ಎರಡನೇ ಸಲವೂ IPS ಸೆಲೆಕ್ಟ್ ಆದಾಗ ಸಫಿನ್ ಹಸನ್ ದೃಡನಿರ್ಧಾರ ಮಾಡಿಯೇ ಬಿಟ್ಟರು. ಆ ತೀರ್ಮಾನ ನೆರವೇರಿದಾಗ ಭಾರತ ಕಂಡದ್ದು ಅತ್ಯುನ್ನತ ವಾದ ಒಂದು ಚರಿತ್ರೆ..