ಶ್ರೀರಾಮ ನಮ್ಮವನು ಅಯೋಧ್ಯೆ ನಮ್ಮಲ್ಲಿಯೇ ಇದೆ !ಮತ್ತೆ ಖ್ಯಾತೆ ತೆಗೆದ ನೇಪಾಳ ಪ್ರಧಾನಿ

News
Advertisements

ಚೀನಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ನೇಪಾಳದ ಪ್ರಧಾನಿ ಕೆಪಿ ಶರ್ಮಾ ಓಲಿ ನಕ್ಷೆಯ ವಿಚಾರವಾಗಿ ಭಾರತದ ಕೆಲವೊಂದು ಭಾಗಗಳು ನಮಗೆ ಸೇರಿವೆ ಎಂದು ಭಾರತದ ಜೊತೆಗೆ ಕಿರಿಕ್ ಮಾಡಿಕೊಂಡಿತ್ತು. ಈಗ ನೇರವಾಗಿ ಹಿಂದೂಗಳ ಧೈವ ಶ್ರೀರಾಮನ ಜನ್ಮ ಸ್ಥಳವಾದ ಆಯೋಧ್ಯೆ ಕುರಿತಂತೆ ಹೇಳಿಕೆಯೊಂದನ್ನ ಕೊಟ್ಟಿದ್ದು ವಿವಾದ ಮಾಡಿಕೊಂಡಿದ್ದಾರೆ.

ಚೀನಾ ದೇಶದ ಚೇಲಾ ನಂತೆ ವರ್ತಿಸುತ್ತಿರುವ ನೇಪಾಳ ಪ್ರಧಾನಿ ಹಲವಾರು ವಿಷಯಗಳಲ್ಲಿ ಭಾರತದ ಜೊತೆ ಕಿರಿಕ್ ಮಾಡುತ್ತಲೇ ಇದೆ. ಈಗ ನೇಪಾಳ ಪ್ರಧಾನಿ ರಾಮನ ಜನ್ಮ ಭೂಮಿಯಾಗಿರುವ ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವನು ಹೇಳುತ್ತಾನೆ..ಭಾರತ ಹೇಳುವಂತೆ ಶ್ರೀರಾಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ..ಇನ್ನು ಸೀತೆ ಭಾರತದ ರಾಜಕುಮಾರ ರಾಮನನ್ನ ಮದುವೆಯಾಗಿದ್ದಳು ಎಂದು ನಾವು ನಂಬಿದ್ದೇವೆ.

ಆದರೆ ನಿಜವಾದ ಅಯೋಧ್ಯೆ ಇರುವುದು ಬಿರ್‌ಗುಂಜ್‌ನ ಪಶ್ಚಿಮ ಭಾಗದಲ್ಲಿರುನ ಥೋರಿ ನಗರದಲ್ಲಿ ಎಂದು ನೇಪಾಳ ಪ್ರಧಾನಿ ಓಲಿ ಹೇಳಿಕೆ ಕೊಟ್ಟಿದ್ದಾನೆ. ಅಯೋಧ್ಯೆ ಹೆಸರಿನ ಊರು ನೇಪಾಳದ ಬಿರ್‌ಗುಂಜ್‌ನಲ್ಲಿದೆ. ವಾಲ್ಮೀಕಿ ಆಶ್ರಮ ನೇಪಾಳದಲ್ಲಿದೆ. ರಾಜನಾಗಿದ್ದ ದಶರಥ ತನ್ನ ಮಕ್ಕಳನ್ನ ಪಡೆಯಲು ಧಾರ್ಮಿಕ ವಿಧಿಗಳನ್ನು ನಡೆಸಿದ್ದು ನೇಪಾಳದ ರಿಧಿಯಲ್ಲಿ ಎಂದಿದ್ದು, ನಾವು ಸಾಂಸ್ಕೃತಿಕವಾಗಿ ಭಾರತದ ದಬ್ಬಾಳಿಕೆಗೆ ಒಳಗಾಗಿದ್ದೇವೆ ಎಂದು ಪ್ರಧಾನಿ ಕೆಪಿ ಶರ್ಮಾ ಓಲಿ ಹೇಳಿದ್ದಾರೆ.

ಪ್ರಧಾನಿ ಓಲಿ ಹೇಳಿದ್ದು ಹೀಗೆ..ಯಾವುದೇ ಸಂಪರ್ಕ ಸಾಧನದ ವ್ಯವಸ್ಥೆ ಇಲ್ಲದ ಆ ಕಾಲದಲ್ಲಿ ರಾಮ ಜನಕಪುರಿಗೆ ಬಂದಿದ್ದು ಹೇಗೆ? ಭಾರತದಲ್ಲಿರುವ ಅಯೋಧ್ಯೆಯಿಂದ ನೇಪಾಳದಲ್ಲಿರುವ ಜನಕಪುರಿಗೆ ರಾಮ ಬಂದಿರುವುದು ಸಾಧ್ಯವಿಲ್ಲ..ದೂರವಾಣಿ ಮೊಬೈಲ್ ಇಲ್ಲದ ಆ ಕಾಲದಲ್ಲಿ ಜನಕಪುರಿಯ ಬಗ್ಗೆ ರಾಮನಿಗೆ ಹೇಗೆ ಗೊತ್ತಿತ್ತು..ಮದುವೆಯ ಮಾತುಕತೆಗಳು ನಡೆದಿದ್ದಾದರೂ ಹೇಗೆ?ಹೀಗೆ ಶ್ರೀರಾಮ ಹಾಗೂ ರಾಮ ಜನ್ಮ ಭೂಮಿ ಅಯೋಧ್ಯೆ ಕುರಿತು ಹಲವು ಪ್ರಶ್ನೆಗಳನ್ನ ಕೇಳಿರುವ ಪ್ರಧಾನಿ ಓಲಿ ವಿವಾದ ಮಾಡಿಕೊಂಡಿದ್ದಾರೆ. ಇವನ ಈ ಹುಚ್ಚಾಟದ ಹೇಳಿಕೆಗಳು ಇದೆ ಮೊದಲಲ್ಲ..ಇದಕ್ಕೂ ಮುಂಚೆ ಕೊರೋನಾ ಸೋಂಕು ಹರಡಿರುವುದು ಚೀನಾದಿಂದ ಎಂದು ಇಡೀ ಜಗತ್ತಿಗೆ ತಿಳಿದಿದ್ದರೂ ಈ ಇವನು ಮಾತ್ರ ಭಾರತದಿಂದ ನಮ್ಮ ದೇಶಕ್ಕೆ ಕೊರೋನಾ ಹರಡಿದೆ ಎಂದು ಹೇಳಿಕೆ ಕೊಟ್ಟಿದ್ದ. ಇದಕ್ಕೆಲ್ಲಾ ಕಾರಣ ಇವನ ಹಿಂದಿರುವ ಚೀನಾ ಎಂದು ಹೇಳಲಾಗುತ್ತಿದೆ.