ಕಾಲೇಜಿಗೆ ಎರಡನೇ ಸ್ಥಾನ ಪಡೆದ ತರಕಾರಿ ಮಾರಾಟ ಮಾಡೋ ಕುಟುಂಬದ ವಿದ್ಯಾರ್ಥಿನಿ ! ಪಡೆದ ಅಂಕಗಳೆಷ್ಟು ಗೊತ್ತಾ?

News Uncategorized
Advertisements

ಮನಸಿದ್ದರೆ ಯಾವ ಬಡತನ ಕೂಡ ಸಾಧನೆಗೆ ಅಡ್ಡಬರಲಾರದು ಎಂಬುದಕ್ಕೆ ನಿದರ್ಶನವಾಗಿದ್ದಾಳೆ ಈ ವಿದ್ಯಾರ್ಥಿನಿ. ಸ್ನೇಹಿತರೆ ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಈ ಬಾರೀ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ವ್ಯವಸಾಯದ ಜೊತೆಗೆ ತರಕಾರಿ ಮಾರಾಟ ಮಾಡುತ್ತಿರುವ ಕುಟುಂಬದ ವಿದ್ಯಾರ್ಥಿನಿಯೊಬ್ಬಳು ವಿಜ್ನ್ಯಾನದ ವಿಭಾಗದಲ್ಲಿ ಕಾಲೇಜಿಗೆ ಎರಡನೆಯ ಸ್ಥಾನ ಪಡೆಯುವುದರ ಮೂಲಕ ಸಾಧನೆಯ ಶಿಖರವೇರಿದ್ದಾಳೆ.

Advertisements

ಹೌದು, ಓದುವ ಮನಸಿದ್ದು ಸಾಧಿಸುವ ಛಲವಿದ್ದರೆ ಬಡತನ ಕೂಡ ಅಡ್ಡಬರುವುದಿಲ್ಲ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಟುರ ಎಂಬ ಹಳ್ಳಿಯ ಕೃಷಿಕ ಕುಟುಂಬವಾಗಿರುವ ಅಣ್ಣಪ್ಪ ಭಮ್ಮನ್ನವರ ಮಗಳಾದ ಅನುಷಾ ಅವರೇ ಸೈನ್ಸ್ ವಿಭಾಗದಲ್ಲಿ ಶೇ.94.5 ಮಾರ್ಕ್ಸ್ ಪಡೆಯುವುದರ ಮೂಲಕ ಸಾಧನೆ ಮಾಡಿರುವ ವಿದ್ಯಾರ್ಥಿನಿ.

ಇನ್ನು ವಿದ್ಯಾರ್ಥಿನಿ ಅನುಷಾ ನೀಡಸೊಸಿ SJPN ಕಾಲೇಜಿನಲ್ಲಿ ಸೆಕೆಂಡ್ PUC ಯ ಸೈನ್ಸ್ ವಿಭಾಗದಲ್ಲಿ ಓದುತ್ತಿದ್ದಳು. ಈಗ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾಲೇಜಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾಳೆ. ಇನ್ನು ಅನುಷಾರವರ ತಂದೆ ತಾಯಿ ವೃತ್ತಿಯಲ್ಲಿ ವ್ಯವಸಾಯ ಮಾಡುತ್ತಿದ್ದು ಜೊತೆಗೆ ತರಕಾರಿ ವ್ಯಾಪಾರ ಮಾಡುತ್ತಿದ್ದು ಮಗಳನ್ನ ಓಡುಸುತ್ತಿದ್ದರು. ಇನ್ನು ಮಗಳ ಸಾಧನೆ ನೋಡಿ ಸಂತಸ ವ್ಯಕ್ತಪಡಿಸಿರುವ ಪೋಷಕರು ಮಗಳು ಮುಂದಿನ ವಿದ್ಯಾಭ್ಯಾಸವನ್ನ ಯಾವುದೇ ಕ್ಷೇತ್ರದಲ್ಲಿ ಓದಲು ಇಷ್ಟಪಟ್ಟರೆ ನಾವು ಓಡಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಅನುಷಾ ದ್ವಿತೀಯ ಪಿಯುಸಿಯಲ್ಲಿ ತೆಗೆದಿರುವ ಮಾರ್ಕ್ಸ್ ಗಳ ಅಂಕಪಟ್ಟಿ ಇಲ್ಲಿದೆ ನೋಡಿ..

ಇನ್ನು ತನ್ನ ಸಾಧನೆಯ ಬಗ್ಗೆ ಮಾತನಾಡಿರುವ ಅನುಷಾ ಪೋಷಾಕ್ರ ಹಾಗೂ ಕುಟುಂಬದವರ ಸಹಕಾರದಿಂದಲೇ ಹೆಚ್ಚಿನ ಅಂಕಗಳನ್ನ ಪಡೆಯಲು ಕಾರಣವಾಗಿದೆ. ಮುಂದೆ ನಾನು ಇಂಜಿನಿಯರಿಂಗ್ ವಿಭಾಗದಲ್ಲಿ ಓದಿ ಸಾಧನೆ ಮಾಡಬೇಕೆಂಬ ಗುರಿ ಇದೆ ಎಂದು ಹೇಳಿದ್ದಾರೆ.

Leave a Reply

Your email address will not be published.