ಪ್ರವಾಹವನ್ನ ಲೆಕ್ಕಿಸದೆ ನೂರಾರು ಜನರ ಪ್ರಾಣ ಕಾಪಾಡಿದ ಶಾಸಕ

News
Advertisements

ಒಂದು ಕಡೆ ಮಹಾಮಾರಿ ಕೊರೋನಾ ಸೋಂಕು ತಾಂಡವವಾಡುತ್ತಿದ್ದರೆ ಮತ್ತೊಂದು ಕಡೆ ಬಾರೀ ಪ್ರವಾಹದಿಂದಾಗಿ ಅಸ್ಸಾಂ ರಾಜ್ಯ ತತ್ತರಿಸಿ ಹೋಗುತ್ತಿದೆ. ಕೊರೋನಾ ನಡುವೆಯೇ ಎಗ್ಗಿಲ್ಲದೆ ಮಳೆ ಸುರಿಯುತ್ತಿದೆ. ಇನ್ನು ಪರಿಹಾರದ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು ಅಲ್ಲಿನ ಶಾಸಕರು ಜನರನ್ನ ರಕ್ಷಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದ್ದು ಬಾರಿ ಮೆಚ್ಚುಗೆಗಳು ಕೇಳಿಬಂದಿದೆ.

Advertisements

ಹೌದು ಅಸ್ಸಾಂ ರಾಜ್ಯದ ಖುಮ್ಟಾಯ್ ಪ್ರದೇಶದ ಬಿಜೆಪಿ ಶಾಸಕರಾಗಿರುವ ಮೃನಾಲ್ ಸಾಲೀಕಾ ಅವರು ಜನರ ಸಂಕಷ್ಟವನ್ನ ಪರಿಹರಿಸುವುದರಲ್ಲಿ ನಿರತರಾಗಿದ್ದಾರೆ. ಇನ್ನು ಅಸ್ಸಾಂ ನಲ್ಲಿ ವರುಣನ ಆರ್ಭಟ ಜೋರಾಗಿದ್ದು ಇಲ್ಲಿನ ಅನೇಕ ಜಿಲ್ಲೆಗಳು ನೀರಿನಿಂದ ತುಂಬಿಹೋಗಿದ್ದು ಪ್ರವಾಹ ಉಂಟಾಗಿದೆ. ಇನ್ನು ಇಲ್ಲಿನ ಬಿಜೆಲಿ ಶಾಸಕರಾಗಿರುವ ಮೃನಾಲ್ ಸಾಲೀಕಾ ಎದೆ ಮಟ್ಟದ ನೀರಿನಲ್ಲಿ ಹೋಗಿ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ.

ತಮ್ಮನ್ನ ಗೆಲ್ಲಿಸಿ ಬೆಳೆಸಿದ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಿರುವ ಶಾಸಕರು ಆಹಾರ ಕೊಡುವುದರ ಜೊತೆಗೆ ನೂರಾರು ಜನರನ್ನ ರಕ್ಷಣೆ ಮಾಡಿದ್ದಾರೆ. ಸ್ವಯಂ ಸೇವಕರೊಂದಿಗೆ ತೆರಳಿ ಜನರ ರಕ್ಷಣೆ ಮಾಡುತ್ತಿರುವ ಇವರ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಅಭಿನಂದನೆಗಳ ಮಹಾಪುರವೇ ಹರಿದು ಬಂದಿದೆ. ತಮ್ಮ ಕ್ಷೇತ್ರದ ಜನರು ಸಂಕಷ್ಟಕ್ಕೆ ಸಿಲುಕಿದಾಗ ತಿರುಗಿ ನೋಡದ ಎಷ್ಟೋ ಶಾಸಕರಿಗೆ ಮಾದರಿಯಾಗಿದ್ದಾರೆ ಬಿಜೆಪಿ ಶಾಸಕ ಮೃನಾಲ್ ಸಾಲೀಕಾ.