ಧ್ರುವ ಸರ್ಜಾ ದಂಪತಿಗೆ ಕೊರೋನಾ: ಆದ್ರೆ ಮೇಘನಾ ರಾಜ್ ಎಲ್ಲಿದ್ದಾರೆ?

Cinema
Advertisements

ನನಗೆ ನನ್ನ ಪತ್ನಿ ಪ್ರೇರಣಾಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಖುದ್ದು ಧ್ರುವ ಸರ್ಜಾ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಮಾಡಿಕೊಂಡಿದ್ದು ಸರ್ಜಾ ಕುಟುಂಬಕ್ಕೆ ಮತ್ತೊಂದು ಆತಂಕ ಎದುರಾಗಿದೆ. ಆದರೆ ಸಹೋದರ ಚಿರು ಸರ್ಜಾ ಸಾವಿನ ಬಳಿಕ ಅವರ ವಿಧಿ ವಿಧಾನಗಳ ಕಾರ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಧ್ರುವ ಸರ್ಜಾ ಅವರಿಗೆ ಕೊರೋನಾ ಸೋಂಕು ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

Advertisements

ಖುದ್ದು ಧ್ರುವ ಸರ್ಜಾ ಅವರೇ ನನಗೆ ನನ್ನ ಪತ್ನಿ ಕೊರೋನಾ ಟೆಸ್ಟ್ ಗೆ ಕೊರೋನಾ ಪಾಸಿಟಿವ್ ಆಗಿದೆ..ಹಾಗಾಗಿ ನಮ್ಮ ಸಂಪರ್ಕದಲ್ಲಿದ್ದವರು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಇನ್ನು ಚಿರು ಸರ್ಜಾ ತೀರಿಕೊಂಡು ಒಂದು ತಿಂಗಳಾದ ಹಿನ್ನಲೆಯಲ್ಲಿ ಧ್ರುವ ಪೂಜೆ ಸೇರಿದಂತೆ ಹೋಮಗಳಿಗೆ ಸಂಬಂಧಪಟ್ಟಂತೆ ಹಾಗೂ ಮನೆಯ ಕೆಲಸಗಳಿಗೆ ಸಂಬಂಧಪಟ್ಟಂತೆ ಓಡಾಟ ಹೆಚ್ಚಾಗಿದ್ದು ಇದೆ ವೇಳೆ ಕೊರೋನಾ ಸೋಂಕು ಬಂದಿರುವ ಸಾಧ್ಯತೆ ಇದೆ ಎಂದು ಅನುಮಾನಗಳು ಮೂಡಿವೆ.

ಇನ್ನು ಧ್ರುವ ಸರ್ಜಾ ಮತ್ತು ಕುಟುಂಬ ಚಿರು ಸರ್ಜಾ ಅವರ ಪುಣ್ಯ ತಿಥಿ ಸೇರಿದಂತೆ ಹಲವು ಕಾರ್ಯಗಳಲ್ಲಿ ಪಾಲ್ಗೊಂಡಿದ್ದು ಇದೆ ವೇಳೆ ನೂರಾರು ಜನರು ಸೇರಿದ್ದು ಹಲವು ಬಾರಿ ಕೊರೋನಾ ಟೆಸ್ಟ್ ಮಾಡಿಸಿದ್ದುನೆಗಟೀವ್ ಬಂದಿತ್ತು. ಇನ್ನು ಚಿರು ಸರ್ಜಾ ಅವರ ಪುಣ್ಯ ತಿಥಿಯಲ್ಲಿ ಕಾರ್ಯದ ಬಳಿಕ ಅವರ ಕುಟುಂಬದ ೩೦ ಮಂದಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು ಎಲ್ಲರಿಗೂ ನೆಗಟೀವ್ ಬಂದಿದೆ. ಆದರೆ ಧ್ರುವ ಅವರಲ್ಲಿ ಎರಡು ದಿನಗಳ ಹಿಂದೆ ಕೆಮ್ಮು ಜವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಹೋಗಿದ್ದು ಕೊರೋನಾ ಲಕ್ಷಣಗಳು ಕಂಡುಬಂದಿವೆ.

ಇನ್ನು ಮೇಘನಾ ರಾಜ್ ಅವರು ಅವರ ತಂದೆಯ ಮನೆಯಲ್ಲಿದ್ದಾರೆ. ಧ್ರುವ ಸರ್ಜಾ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದು ಧ್ರುವ ಅವರ ಮನೆಯಲ್ಲಿ ಅವರ ತಂದೆ ತಾಯಿ ಇದ್ದು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಬೇಕಿದೆ. ಇನ್ನು ಮೇಘನಾ ರಾಜ್ ಅವರು ಕೂಡ ಚಿರು ಸರ್ಜಾ ಅವರು ನಿಧನರಾಗಿ ಒಂದು ತಿಂಗಳು ಮುಗಿದ ಸಂಧರ್ಭದಲ್ಲಿ ಪನ್ನಾಗಾಭರಣ ಅವರ ಮನೆಯಲ್ಲಿ ಸೇರಿದ್ದರು. ಎಲ್ಲರಿಗೂ ಕೊರೋನಾ ತಪಾಸಣೆ ಆದ ಬಳಿಕವೇ ಮಾಹಿತಿ ದೊರೆಯಲಿದೆ.