ಗುಡ್ ನ್ಯೂಸ್: ಅತೀ ಕಡಿಮೆ ಬೆಲೆಯಲ್ಲಿ ಕೊರೋನಾ ಟೆಸ್ಟ್ ಕಿಟ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

News
Advertisements

ಭಾರತದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸದ್ಯದ ಮಟ್ಟಿಗೆ ಇದಕ್ಕೆ ಯಾವುದೇ ಲಸಿಕೆ ಇಲ್ಲ. ಮಾಸ್ಕ್ ಧರಿಸಿ ಸಾಮಾಜಿಕ ನಿಯಂತ್ರಣ ಕಾಪಾಡಿಕೊಳ್ಳುವದೊಂದೇ ದಾರಿ. ಆದರೆ ಇದರ ಆತಂಕದ ನಡುವೆಯೇ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದು ನೀಡಿದೆ. ಕಡಿಮೆ ಬೆಲೆಯಲ್ಲಿ ಕೊರೋನಾ ಟೆಸ್ಟ್ ಕಿಟ್ ನ್ನ ಬಿಡುಗಡೆ ಮಾಡಲಾಗಿದೆ.

ಹೌದು, ಇಲ್ಲಿಯವರೆಗೂ ಕೋವಿಡ್ 19 ಟೆಸ್ಟ್ ಕಿಟ್ ಇಲ್ಲಿಯವರೆಗೂ ದುಬಾರಿಯಾಗಿತ್ತು. ಇದನ್ನ ಮನಗೊಂಡ ಕೇಂದ್ರ ಸರ್ಕಾರ ದೆಹಲಿ IIT ತಯಾರು ಮಾಡಿರುವ ಕೋವಿಡ್ 19 ಟೆಸ್ಟ್ ಕಿಟ್ ನ್ನ ಬಿಡುಗಡೆ ಮಾಡಿದ್ದು 399ರುಪಾಯಿಗೆ ಲಭ್ಯವಿದೆ. ಇನ್ನು ದೇಶದಾದ್ಯಂತ ತ್ವರಿತವಾಗಿ ಕೊರೋನಾ ಟೆಸ್ಟ್ ಮಾಡಲು ಈ ಕಿಟ್ ಕಾರಣವಾಗಲಿದೆ ಎಂದು ಹೇಳಲಾಗಿದೆ.

Advertisements

ಕೋರೋಸುರ್ ಎಂಬ ಹೆಸರಿನ ಈ ಕಿಟ್ ಗೆ ಭಾರತೀಯ ಮೆಡಿಕಲ್ ಕೌನ್ಸಿಲ್ ಮತ್ತು ಡ್ರಗ್ ಕಂಟ್ರೋಲ್ ಜನರಲ್ ದೆಹಲಿಯ ಐಐಟಿಗೆ ಪರವಾನಗಿ ನೀಡಿದ್ದು IITಯ ನ್ಯೂ ಟೆಕ್ ಮೆಡಿಕಲ್ ಡಿವೈಸಸ್ ಕಂಪನಿ ಈ ಕಿಟ್ ತಯಾರು ಮಾಡಿದ್ದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ. ಇನ್ನು ಮಾಹಿತಿಗಳ ಪ್ರಕಾರ ಮುಂದಿನ ತಿಂಗಳು ಎರಡು ಮಿಲಿಯನ್ ಕಿಟ್ ತಯಾರು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಇನ್ನು ಇಲ್ಲಿಯವರೆಗೂ ಇರುವ ಟೆಸ್ಟ್ ಗಳಲ್ಲಿ ಇದು ಕಡಿಮೆ ಬೆಲೆಯದಾಗಿದ್ದು ಮೇಕ್ ಇನ್ ಇಂಡಿಯಾ ಮಾದರಿಯಲ್ಲಿ ರೆಡಿಯಾಗಿದೆ ಹೇಳಲಾಗಿದೆ. ಒಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ಕೋವಿಡ್ ೧೯ ಟೆಸ್ಟ್ ಕಿಟ್ ಮಾರುಕಟ್ಟೆಗೆ ಬಂದಿರುವುದು ಖುಷಿಯ ವಿಚಾರವಾಗಿದೆ.