ಕೊರೋನಾ ಎಫೆಕ್ಟ್: ಜೀವನ ನಡೆಸಲು ಪಾನಿಪುರಿ ಮಾರುತ್ತಿರುವ ಹೈಕೋರ್ಟ್ ಲಾಯರ್ !

Inspire News
Advertisements

ಇಡೀ ದೇಶದಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದೆ. ಇನ್ನು ಕೊರೋನಾ ಹಿನ್ನಲೆಯಲ್ಲಿ ದೇಶ ನಲುಗಿಹೋಗುತ್ತಿದೆ. ಇನ್ನು ಆರ್ಥಿಕ ಸಂಕಷ್ಟದ ಪರಿಸ್ಥಿತಿಯ ಕಾರಣದಿಂದಾಗಿ ಬಹುತೇಕರು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಈಗ ಇದೆ ರೀತಿ ಕೆಲಸ ಇಲ್ಲದ ಕಾರಣ ಹೈಕೋರ್ಟ್ ಲಾಯರ್ ಒಬ್ಬರು ಜೀವನಕ್ಕಾಗಿ ಪಾನಿಪುರಿ ವ್ಯಾಪಾರ ಶುರು ಮಾಡಿದ್ದಾರೆ.

Advertisements

ಹೌದು, ಹೈಕೋರ್ಟ್ ಕಲಾಪಗಳು ನಡೆಯದ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಮಂಡ್ಯದ ವಕೀಲರೊಬ್ಬರು ತಮ್ಮ ಊರಿನಲ್ಲೇ ಪಾನಿಪುರಿ ಮಾಡುವ ಕೆಲಸ ಶುರು ಮಾಡಿದ್ದಾರೆ. ಮದ್ದೂರು ತಾಲೂಕಿಗೆ ಸೇರಿದ ವಳಗೆರೆಹಳ್ಳಿ ಗ್ರಾಮದವರಾದ ೩೦ ವರ್ಷದ ಪ್ರತಾಪ್ ಎನ್ನುವವರು ಹೈಕೋರ್ಟ್ ಲಾಯರ್ ಆಗಿದ್ದು ಕಳೆದ ಆರು ವರ್ಷಗಳಿಂದ ಹೈಕೋರ್ಟ್ ನ ಹಿರಿಯ ಅಡ್ವೋಕೇಟ್ ಆಗಿರುವ ಉಮಾಕಾಂತ್ ಎಂಬುವವರ ಬಳಿ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಇನ್ನು ಸಿಟಿ ಸಿವಿಲ್ ಕೋರ್ಟ್ ನಲ್ಲಿಯೂ ಕೂಡ ಕೆಲಸ ಮಾಡುತ್ತಿದ್ದರು. ಅದರ ಲಾಕ್ ಡೌನ್ ಹಾಗೂ ಕೊರೋನಾ ಹಿನ್ನಲೆಯಲ್ಲಿ ಕೋರ್ಟ್ ಕಲಾಪಗಳು ನಿಂತು ಹೋಗಿವೆ. ಹೀಗಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಪ್ರತಾಪ್ ಬೆಂಗಳೂರಿನಲ್ಲಿ ಜೀವನ ನಡೆಸಲಾಗದೆ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ತಮ್ಮ ಊರಿಗೆ ಬಂದಿದ್ದಾರೆ. ಇನ್ನು ಅವರ ಪತ್ನಿಯೂ ಕೂಡ ಎಂಜಿನಿಯರಿಂಗ್ ಓದಿದ್ದಾರೆ. ಆದರೆ ಜೀವನ ಅಂತೂ ಸಾಗಿಸಲೇಬೇಕಲ್ಲಾ..ಹಾಗಾಗಿ ಹೊಸದೊಂದು ಪ್ಲಾನ್ ಮಾಡಿದ ಪ್ರತಾಪ್ ಪಾನಿಪುರಿ ಮಾರಾಟ ಮಾಡಲು ಮುಂದಾಗಿದ್ದಾರೆ. ಲಾಯರ್ ಆಗಿದ್ದರೂ ಯಾವುದೇ ಮುಜುಗುರಕ್ಕೆ ಒಳಗಾಗದೆ ತಮ್ಮ ಊರಿನ ಮನೆಯಲ್ಲೇ ಸಣ್ಣ ಅಂಗಡಿಯೊಂದು ಮಾಡಿ ಚಾಟ್ ಸೆಂಟರ್ ಪ್ರಾರಂಭ ಮಾಡಿದ್ದು ರುಚಿ ರುಚಿಯಾದ ಪಾನಿ ಪುರಿ, ಗೋಬಿ, ಆಮ್ಲೆಟ್ ತಯಾರಿಸಿ ಮಾರುತ್ತಿದ್ದಾರೆ.

ಇನ್ನು ಪ್ರತಾಪ್ ತಯಾರು ಮಾಡಿದ ಪಕ್ಕದ ಹಳ್ಳಿಗಳಿಂದಲೂ ಜನರು ಬರುತ್ತಿದ್ದು ಚಾಟ್ಸ್ ಗಳನ್ನ ಸವಿದು ಪ್ರತಾಪ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇದರಿಂದ ಬಂದ ಆಧಾಯದಲ್ಲಿ ತಮ್ಮ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ ಲಾಯರ್ ಪ್ರತಾಪ್. ಇನ್ನು ಸ್ವಾಭಿಮಾನದ ಬದುಕು ನಡೆಸುತ್ತಿರುವ ಪ್ರತಾಪ್ ರವರು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.