ಕಾಡುಗಳ್ಳ ವೀರಪ್ಪನ್ ಮಗಳಿಗೆ ಹೊಸ ಹುದ್ದೆ ಕೊಟ್ಟ ಬಿಜೆಪಿ

Uncategorized

ಕಾಡುಗಳ್ಳ ವೀರಪ್ಪನ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಆದರೆ ತಂದೆಯಂತೆ ಮಕ್ಕಳು ಇರುವುದಿಲ್ಲ. ಹೌದು ವೀರಪ್ಪನ್ ಪುತ್ರಿಯಾಗಿರುವ ವಿದ್ಯಾ ರಾಣಿ ಅವರನ್ನ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.

ಕಳೆದ ವರ್ಷ ತಾನೇ ತಮಿಳುನಾಡಿನಿಂದ ಬಿಜೆಪಿ ಪಕ್ಷಕ್ಕೆ ಸೇರಿದ್ದ ವಿದ್ಯಾರಾಣಿಯನ್ನ ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇನ್ನು ಇವರ ಜೊತೆಗೆ ರಜನೀಕಾಂತ್ ಅಳಿಯ ಧನುಷ್ ಅವರ ತಂದೆ ಕಸ್ತೂರಿ ರಾಜಾ ತಮಿಳುನಾಡಿನ ಮಾಜಿ ಸಿಎಂ ಆಗಿದ್ದ ಎಂಜಿಆರ್ ಅವರ ದತ್ತು ಪುತ್ರಿ ಗೀತಾ ಅವರಿಗೂ ಕೂಡ ವಿವಿಧ ಉದ್ದೇಗಳನ್ನ ನೀಡಲಾಗಿದೆ.